ಯಲಹಂಕ: ಹಫ್ತಾ ಕೊಡಲ್ಲ ಅಂದಿದ್ದಕ್ಕೆ.. ಹೊಟ್ಟೆಗೆ ಚಾಕು ಇರಿದ ದುಷ್ಕರ್ಮಿಗಳು
ಬೆಂಗಳೂರು: ಹಫ್ತಾ ಹಣ ಕೊಡಲು ನಿರಾಕರಿಸಿದ್ದಕ್ಕೆ ಮಾರ್ವಾಡಿ ರಮೇಶ್ ಎಂಬಾತನಿಗೆ ಹಾಡಹಗಲೇ ಚಾಕು ಇರಿದಿರುವ ಘಟನೆ ನಗರದ ಬಾಗಲೂರಿನ ಕಟ್ಟಿಗೇಹಳ್ಳಿ ಸರ್ಕಲ್ ಬಳಿ ನಡೆದಿದೆ. ಮಾರ್ವಾಡಿ ರಮೇಶ್ ಮೇಲೆ ಪ್ರಶಾಂತ್ ಮತ್ತು ಆತನ ಸಹಚರರು ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಟೋದಲ್ಲಿ ಬಂದಿದ್ದ ಪ್ರಶಾಂತ್ ಮತ್ತು ಆತನ ನಾಲ್ವರು ಸಹಚರರು ಮಾರ್ವಾಡಿ ರಮೇಶ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಇನ್ನು, ಗಾಯಾಳು ರಮೇಶ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ […]
ಬೆಂಗಳೂರು: ಹಫ್ತಾ ಹಣ ಕೊಡಲು ನಿರಾಕರಿಸಿದ್ದಕ್ಕೆ ಮಾರ್ವಾಡಿ ರಮೇಶ್ ಎಂಬಾತನಿಗೆ ಹಾಡಹಗಲೇ ಚಾಕು ಇರಿದಿರುವ ಘಟನೆ ನಗರದ ಬಾಗಲೂರಿನ ಕಟ್ಟಿಗೇಹಳ್ಳಿ ಸರ್ಕಲ್ ಬಳಿ ನಡೆದಿದೆ. ಮಾರ್ವಾಡಿ ರಮೇಶ್ ಮೇಲೆ ಪ್ರಶಾಂತ್ ಮತ್ತು ಆತನ ಸಹಚರರು ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆಟೋದಲ್ಲಿ ಬಂದಿದ್ದ ಪ್ರಶಾಂತ್ ಮತ್ತು ಆತನ ನಾಲ್ವರು ಸಹಚರರು ಮಾರ್ವಾಡಿ ರಮೇಶ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಇನ್ನು, ಗಾಯಾಳು ರಮೇಶ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಾದ ಪ್ರಶಾಂತ್ ಅಂಡ್ ಟೀಂ ಪತ್ತೆಗೆ ಬಲೆ ಬೀಸಿದ್ದಾರೆ.