ಬೆಂಗಳೂರು: ಸರ್ಕಾರಿ ಇಲಾಖೆ ಹೆಸರಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಮಾಡಲಾಗಿದೆ ಎಂದು ನೇಮಕಾತಿಯ ಬಗ್ಗೆ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಶುಸಂಗೋಪನೆ ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ವಿವಿಧ ಸಹಾಯಕ ಹುದ್ದೆಗಳಿಗೆ ಖಾಲಿ ಇದೆ ಎಂದು ಸುಳ್ಳು ಆದೇಶವನ್ನು ಮಾಡಲಾಗಿದೆ. ನಕಲಿ ವೆಬ್ ಸೈಟ್ ಕ್ರಿಯೇಟ್ ಮಾಡಿ, ಆ ಮೂಲಕ ಸುಳ್ಳು ಆದೇಶವನ್ನು ಪ್ರಕಟ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಸರ್ಕಾರವೇ ಅಧಿಸೂಚನೆಯಂತೆ ಆದೇಶ ಹೊರಡಿಸಿದೆ ಎಂಬಂತೆ ಈ ಪ್ರಕಟಣೆಯನ್ನು ಮಾಡಿದ್ದಾರೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಹುದ್ದೆ ಇದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದಕ್ಕೆ ಮೀಸಲಿರಿಸಿದ 93 ಹುದ್ದೆಗಳು. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹಾಗೂ ಡಿ ಗ್ರೂಪ್ ನೇಮಕಾತಿ ಹೆಸರಲ್ಲಿ ಅರ್ಜಿ ಆಹ್ವಾನ ನೀಡಿದ್ದಾರೆ. ಅರ್ಜಿಗಳನ್ನು ಪರಿಶೀಲಿಸಿ ವಿಶೇಷ ನೇರ ನೇಮಕಾತಿ ಎಂದು ಅಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ.
ಅಂತಿಮ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆ ವೆಬ್ ಸೈಟ್ನಲ್ಲಿ ಪ್ರಕಟಿಸಿದ್ದಾರೆ. ಈ ಆದೇಶವನ್ನು www.ahvs.kar.in ವೆಬ್ನಲ್ಲಿ ಪ್ರಕಟಿಸಿದ್ದಾರೆ ಹಾಗೂ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಕಿಡಿಗೇಡಿಗಳ ಸುಳ್ಳು ಆದೇಶವನ್ನು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪಶುಪಾಲನಾ ಇಲಾಖೆ, ಇಲಾಖೆ ನೇಮಕಾತಿ ಅಧಿಸೂಚನೆ ಹೊರಡಿಸದೆ ಇದ್ದರೂ ನಕಲಿ ಆದೇಶ ಹೊರಡಿಸಿರುವುದು ಪತ್ತೆಯಾಗಿದೆ. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೆಸರಲ್ಲಿ ನಕಲಿ ಸಹಿ ಮಾಡಲಾಗಿದೆ, ನಕಲಿ ಪ್ರತಿಯನ್ನು ಮುಖ್ಯಮಂತ್ರಿಗಳ ಕಚೇರಿಗೂ ಕಳಿಸಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆ ಎಂದು ಇಲಾಖೆ ತಿಳಿಸಿದೆ. ಥೇಟ್ ಸರ್ಕಾರಿ ಇಲಾಖೆ ನೇಮಕ ಪ್ರಕ್ರಿಯೆಯಂತೆ ಈ ಆದೇಶವನ್ನು ಪ್ರಕಟ ಮಾಡಿದ್ದಾರೆ.
ಸಚಿವರು ಮತ್ತು ಆಯುಕ್ತರ ನಕಲಿ ಸಹಿ ಮಾಡಿ ನೇಮಕಾತಿ ಕೆಲಸ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ 63 ಜನರ ಹೆಸರನ್ನು ಸೂಚಿಸಿ ಪತ್ರವನ್ನು ನೋಡಿ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇಲಾಖೆ ಹೆಸರಲ್ಲೆ ನಕಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ವ್ಯಕ್ತಿಗಳಿಗೆ ಪೊಲೀಸರ ಶೋಧ ಮಾಡುತ್ತಿದ್ದಾರೆ.
Published On - 1:17 pm, Tue, 2 August 22