ಪೊಲೀಸರ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡ MLC ನಾಸಿರ್ ಅಹ್ಮದ್ ಪುತ್ರ
ಪೊಲೀಸರು ಮತ್ತು ಯುವಕರ ನಡುವೆ ಮಾತಿನ ಚಕಮಕಿ ಬೆಳೆದಿದೆ. ಆರೋಪಿಗಳು ಪೊಲೀಸರ ಜೊತೆ ಜಗಳವಾಡಿ ಹಲ್ಲೆ ಮಾಡಿದ್ದಾರೆ. ಘಟನೆ ಹಿಂದಿನ ಸಂಪೂರ್ಣ ವಿವರ ಟಿವಿ9ಗೆ ಲಭ್ಯವಾಗಿದೆ.
ಬೆಂಗಳೂರು: MLC ನಾಸಿರ್ ಅಹ್ಮದ್ ಪುತ್ರ ಹಾಗೂ ಗ್ಯಾಂಗ್‌ನಿಂದ ನಡೆದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ವಿಚಾರಣೆ ವೇಳೆ ಆರೋಪಿಗಳಾದ ಫಯಾಜ್ ಅಹ್ಮದ್, ಇಮ್ರಾನ್ ಷರೀಫ್, ಜೇನ್ ಷರೀಫ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಪೊಲೀಸರ ವಿರುದ್ಧ ನಾವೇ ಜಗಳ ಮಾಡಿ ಹಲ್ಲೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿಆರು ಮಂದಿ ಆರೋಪಿಗಳಿದ್ದಾರೆ. ಅವರಲ್ಲಿ ಮೂವರು ಈಗ ಪೊಲೀಸ್ ವಶದಲ್ಲಿದ್ದಾರೆ. ಉಳಿದ ಮೂರು ಆರೋಪಿಗಳು ಮೊಬೈಲ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಅಮೃತಹಳ್ಳಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.
MLC ನಾಸಿರ್ ಅಹ್ಮದ್ ಪುತ್ರ ಫಯಾಜ್ ಅಹಮದ್ ಹಾಗೂ ಇನ್ನಿಬ್ಬರು ಈಗಾಗಲೇ ಅರೆಸ್ಟ್ ಅಗಿದ್ದಾರೆ. ನಾಸಿರ್ ಅಹ್ಮದ್ ಮತ್ತೋರ್ವ ಮಗನಿಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಹಿಂದಿನ ಸಂಪೂರ್ಣ ವಿವರ ಟಿವಿ9 ಗೆ ಲಭ್ಯವಾಗಿದೆ. ಅಂದು ರಾತ್ರಿ ಎಂಜಿ ರೋಡ್ ಹಾಗು ಬ್ರಿಗೇಡ್ ರೋಡ್ಗೆ ಬಂದಿದ್ದ ಫಯಾಜ್ ಅಹಮದ್ ಮತ್ತು ತಂಡ, ಬ್ರಿಗೇಡ್ ರೋಡ್ ರಸ್ತೆ ಬಳಿಯ ಪಬ್ ಒಂದರಲ್ಲಿ ಭರ್ಜರಿ ಪಾರ್ಟಿ ಮಾಡಿದ್ದರು. ಪಾರ್ಟಿ ಬಳಿಕ ಅಮೃತಹಳ್ಳಿ ಕಡೆಗೆ ತೆರಳಿದ್ದರು. ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಾ ಜೋರಾಗಿ ಕೂಗಾಡುತಿದ್ದರು. ಈ ವೇಳೆ ಗಲಾಟೆ ಮಾಡದೆ ಮನೆಗೆ ಹೋಗುವಂತೆ ಅಮೃತಹಳ್ಳಿ ಪೊಲೀಸರು ತಿಳಿಸಿದ್ದರು.
ಒಂದು ಬಾರಿ ತಿಳಿಹೇಳಿದ ನಂತರವೂ ಮತ್ತೆ ಎರಡನೇ ಬಾರಿ ಫಯಾಜ್ ಅಹಮದ್ ತಂಡ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಅವರಿಗೆ ವಾರ್ನ್ ಮಾಡಲು ಪೊಲೀಸರು ತೆರಳಿದ್ದರು. ಆಗ, ನಾನು ಯಾರು ಗೊತ್ತಾ? ನಿಮ್ಮನ್ನು ಟ್ರಾನ್ಸ್ಫರ್ ಮಾಡಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು.
ಮದ್ಯ ಸೇವಿಸಿ ಕಾರು ಚಾಲನೆ ಪ್ರಶ್ನಿಸಿದ್ದಕ್ಕೆ MLC ಪುತ್ರ, ಸ್ನೇಹಿತರಿಂದ ಪೊಲೀಸರ ಮೇಲೆ ಹಲ್ಲೆ..
Published On - 3:00 pm, Wed, 9 December 20