ಬಗೆದಷ್ಟು ಬಯಲಾಗ್ತಿದೆ ವೈಭವ್ ಜೈನ್ ಬಂಡವಾಳ; ಪ್ರಕರಣದ ಮತ್ತೊಬ್ಬ ಆರೋಪಿ ಅರೆಸ್ಟ್
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ A5 ಆರೋಪಿ ವೈಭವ್ ಜೈನ್ ಬಗ್ಗೆ ಮತ್ತಷ್ಟು ಮಹತ್ವದ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ. ನಗರದಲ್ಲಿ ನಡೆದ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ವೈಭವ್ ಜೈನ್ ಹೆಸರು ಕೇಳಿಬಂದಿದ್ದು, ಆತ ನಗರದಲ್ಲಿ ನಡೆಯುತಿದ್ದ ಹಲವು ಪಾರ್ಟಿಗಳ ಆಯೋಜಕನಾಗಿದ್ದ ಎಂದು ತಿಳಿದುಬಂದಿದೆ. ಇದಲ್ಲದೆ, ವೈಭವ್ ಜೈನ್ ಪ್ರಕರಣದ A3 ಆರೋಪಿಯಾಗಿರುವ ಬಂಧಿತ ವಿರೇನ್ ಖನ್ನನ ಪಟ್ಟ ಶಿಷ್ಯ ಎಂಬ ಮಾಹಿತಿ ಸಹ ದೊರೆತಿದೆ. ವಿರೇನ್ ಖನ್ನ ರಾಷ್ಟ್ರಮಟ್ಟದ ಪಾರ್ಟಿಗಳ ಆಯೋಜಕನಾಗಿದ್ದರೆ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ A5 ಆರೋಪಿ ವೈಭವ್ ಜೈನ್ ಬಗ್ಗೆ ಮತ್ತಷ್ಟು ಮಹತ್ವದ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.
ನಗರದಲ್ಲಿ ನಡೆದ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ವೈಭವ್ ಜೈನ್ ಹೆಸರು ಕೇಳಿಬಂದಿದ್ದು, ಆತ ನಗರದಲ್ಲಿ ನಡೆಯುತಿದ್ದ ಹಲವು ಪಾರ್ಟಿಗಳ ಆಯೋಜಕನಾಗಿದ್ದ ಎಂದು ತಿಳಿದುಬಂದಿದೆ. ಇದಲ್ಲದೆ, ವೈಭವ್ ಜೈನ್ ಪ್ರಕರಣದ A3 ಆರೋಪಿಯಾಗಿರುವ ಬಂಧಿತ ವಿರೇನ್ ಖನ್ನನ ಪಟ್ಟ ಶಿಷ್ಯ ಎಂಬ ಮಾಹಿತಿ ಸಹ ದೊರೆತಿದೆ.
ವಿರೇನ್ ಖನ್ನ ರಾಷ್ಟ್ರಮಟ್ಟದ ಪಾರ್ಟಿಗಳ ಆಯೋಜಕನಾಗಿದ್ದರೆ ಇತ್ತ ಆತನ ಶಿಷ್ಯ ವೈಭವ್ ಜೈನ್ ನಗರದ ಹಲವು ಕಡೆ ಪಾರ್ಟಿಗಳ ಆಯೋಜನೆ ಮಾಡುತ್ತಿದ್ದ. ಈ ಪಾರ್ಟಿಗಳಲ್ಲಿ ಕೇವಲ ಸ್ಟಾರ್ಗಳು ಹಾಗೂ ದೊಡ್ಡ ದೊಡ್ಡವರಿಗೆ ಮಾತ್ರ ಆಹ್ವಾನ ಇರುತ್ತಿತ್ತು. ಜೈನ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಖನ್ನಾ ಸಹ ಭಾಗಿಯಾಗುತ್ತಿದ್ದ. ಸ್ಟಾರ್ಗಳು ಭಾಗಿಯಾಗುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಕೇಂದ್ರಬಿಂದು ಆಗಿರುತ್ತಿತ್ತು ಎಂದು ಹೇಳಲಾಗಿದೆ.
ಮತ್ತೊಬ್ಬ ಆರೋಪಿಯ ಬಂಧನ ಇದೀಗ, ಪ್ರಕರಣಕ್ಕೆ ಸಂಬಂಧಿಸಿ ಮತ್ತೊರ್ವನನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳು ಶ್ರೀನಿವಾಸ್ ಸುಬ್ರಮಣ್ಯನ್ ಎಂಬುವವನನ್ನು ಬಂಧಿಸಿದ್ದಾರೆ. ನಟಿ ರಾಗಿಣಿ ಶ್ರೀನಿವಾಸ್ ಸುಬ್ರಮಣ್ಯನ್ ತನ್ನ ಫ್ಲ್ಯಾಟ್ಗೆ 3-4 ಬಾರಿ ಬಂದಿದ್ದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ನಿನ್ನೆ ಶ್ರೀನಿವಾಸ್ ಸುಬ್ರಮಣ್ಯನ್ ಫ್ಲ್ಯಾಟ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆತನ ಫ್ಲ್ಯಾಟ್ನಲ್ಲಿ ಮಾದಕ ವಸ್ತುಗಳು ಸಹ ಪತ್ತೆಯಾಗಿವೆಯಂತೆ. ಬಂಧಿತ ಆರೋಪಿ ಸಹಕಾರನಗರದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾನೆ ಎಂಬ ಮಾಹಿತಿ ದೊರೆತಿದೆ.