ಬೆಂಗಳೂರು: ನಟ ಸಂತೋಷ್ ಆರ್ಯನ್ CCB ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ A5 ಆರೋಪಿಯಾಗಿರುವ ವೈಭವ್ ಜೈನ್ ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ನಟ ಸಂತೋಷ್ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸಂತೋಷ್ ಹಾಗೂ ವೈಭವ್ ಜೈನ್ ಬಿಸಿನೆಸ್ ಪಾರ್ಟನರ್ಸ್ ಎಂದು ತಿಳಿದುಬಂದಿದೆ. ದೇವನಹಳ್ಳಿ ಬಳಿಯಿರುವ ಮೂರು ಬೆಡ್ ರೂಂನ ಪಾರ್ಟಿ ವಿಲ್ಲಾವನ್ನು ನಡೆಸಲು ನಟ ಸಂತೋಷ್, ವೈಭವ್ ಜೈನ್ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ.
50-50 ಪರ್ಸೆಂಟ್ ಲೆಕ್ಕಾಚಾರದಲ್ಲಿ ಬ್ಯುಸಿನೆಸ್ ಒಪ್ಪಂದ ಕುರಿತು ಅಗ್ರಿಮೆಂಟ್ ಮಾಡಿಕೊಂಡಿದ್ದ ಸಂತೋಷ್, ಬಳಿಕ ವೈಯಕ್ತಿಕ ಕಾರಣಗಳಿಂದ A5 ವೈಭವ್ ಜೈನ್ ಜೊತೆ ವ್ಯವಹಾರ ಮುರಿದುಕೊಂಡಿದ್ದರಂತೆ. ಇದೇ ಜನವರಿ 14 ರಂದು ಸಂತೋಷ್, ವೈಭವ್ ಜೈನ್ ಜೊತೆ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದು, ಈ ಕುರಿತು ಕೆಲ ದಾಖಲಾತಿಗಳನ್ನು CCB ಅಧಿಕಾರಿಗಳಿಗೆ ಸಂತೋಷ್ ನೀಡಿದ್ದಾರೆ.