ಬೆಂಗಳೂರು, ಅಕ್ಟೋಬರ್ 23: ಪೊಲೀಸ್ ಹಾಗೂ ಮಿಲಿಟರಿ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನಕಲಿ ಸೇನಾ ನೇಮಕಾತಿ ಹಗರಣ (Scam) ವನ್ನು ಬಯಲಿಗೆಳೆದಿದ್ದಾರೆ. ಸೇನೆಗೆ ಸೇರಿಸುವ ನೆಪದಲ್ಲಿ150 ಯುವಕರಿಗೆ ವಂಚನೆ ಮಾಡಲಾಗಿದೆ. ಚಿತ್ರದುರ್ಗದಲ್ಲಿ ವಂಚಕ ಮತ್ತು ಆತನ ಸಹಚರರ ಬಂಧನ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಶಿವರಾಜ್ ವಟಗಲ್ (40 ವರ್ಷ), ಹೆಂಡತಿ ಭೀಮವ್ವ ಕೂಡ ಕೃತ್ಯಕ್ಕೆ ಸಾಥ್ ನೀಡಿದ್ದರಿಂದ ಇಬ್ಬರನ್ನೂ ಬಂಧಿಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
150 ಯುವಕರಿಗೆ ನೇಮಕಾತಿ ನೆಪದಲ್ಲಿ 1 ಕೋಟಿ ರೂ. ವಂಚನೆ ಮಾಡಿರುವುದು ಬಯಲಾಗಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಕರ್ನಾಟಕದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಉದ್ಯೋಗವನ್ನು ಒದಗಿಸುವುದಾಗಿ ಮೋಸ ಮಾಡಲಾಗಿದೆ. ಶಿವರಾಜ್ ವಟಗಲ್ ಭಾರತೀಯ ಸೇನೆಯಿಂದ ಓಡಿ ಹೋಗಿದ್ದ. ಸೇನೆ ಬಿಟ್ಟ ನಂತರ ಯುವಕರನ್ನ ಟಾರ್ಗೆಟ್ ಮಾಡಿ ಹಣ ಸಂಪಾದನೆಗೆ ಇಳಿದಿದ್ದ.
ದಾವಣಗೆರೆ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ದಾವಣಗೆರೆ ನಗರದ ಉದ್ಯಮಿಯೊಬ್ಬರಿಗೆ 11 ಲಕ್ಷ ರೂ. ವಂಚಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು. ದಾವಣಗೆರೆಯ ವಿನೋಬ ನಗರದ ನಸುರುಲ್ಲಾ ಮೋಸ ಹೋದವರು.
ಇದನ್ನೂ ಓದಿ: ಚಿಕ್ಕಮಗಳೂರು: ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರ ಬಂಧನ: ಮತ್ತಿಬ್ಬರು ಎಸ್ಕೇಪ್
ತಮಿಳುನಾಡಿನ ಇಮ್ರಾನ್ ಮೋಸ ಮಾಡಿದ ವ್ಯಕ್ತಿ. ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಇಮ್ರಾನ್, ನಸರುಲ್ಲಾ ಅವರಿಂದ ಆತ 11 ಲಕ್ಷ ರೂ, ಪಡೆದು ಕೆಲಸ ಕೊಡಿಸದೇ ಸ್ವಿಚ್ ಆಫ್ ಮಾಡಿಕೊಂಡಿದ್ದ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಕಲಿ ಚಿನ್ನ ನೀಡಿ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿ ವಂಚನೆ ಮಾಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನಗೆ ವಂಚನೆಗೆ ಒಳಗಾದ ವ್ಯಕ್ತಿ. ಗುತ್ತಿಗೆದಾರ ಗೋವರ್ಧನ್ ಕಳೆದ ಹಲವಾರು ದಿನಗಳಿಂದ ಚನ್ನಗಿರಿಯಲ್ಲಿ ವಿವಿಧ ಕಾಮಗಾರಿ ಮಾಡುತ್ತಿದ್ದ.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ 3 ಯುವಕರ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ: ಪ್ರಾಣಾಪಾಯದಿಂದ ಪಾರು
ಗೋವರ್ಧನ್ ಅವರ ಪರಿಚಯ ಮಾಡಿಕೊಂಡ ಕುಮಾರ ಹಾಗೂ ಮುದಕಪ್ಪ ಎಂಬ ಇಬ್ಬರು ವಂಚಿಸಿದ್ದಾರೆ. ನಮ್ಮ ಮನೆಯ ಪಾಯಾ ತೆಗೆಯುವಾಗಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಿ ಕುಮಾರ ಮತ್ತು ಮುದಕಪ್ಪ. ಇವರ ಮಾತು ನಂಬಿ 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದು 60 ಲಕ್ಷ ರೂ. ನೀಡಿದ್ದ ಗುತ್ತಿಗೆದಾರ ಗೋವರ್ಧನ್. ನಂತರ ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿಚಿನ್ನ ಎಂಬ ವಿಚಾರ ಬಯಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.