ಸಮುದ್ರದಲ್ಲಿ ಮುಳುಗುತ್ತಿದ್ದ 3 ಯುವಕರ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ: ಪ್ರಾಣಾಪಾಯದಿಂದ ಪಾರು

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಕಡಲತೀರದಲ್ಲಿ ಮುಳುಗುತ್ತಿದ್ದ ಮೂವರು ಯುವಕರ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಲೈಫ್‌ಗಾರ್ಡ್ ಸಿಬ್ಬಂದಿಗಳಿಂದ ಯುವಕರ ರಕ್ಷಣೆ ಮಾಡಿದ್ದು, ಅಸ್ವಸ್ಥಗೊಂಡ ಪ್ರವಾಸಿಗನಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸಮುದ್ರದಲ್ಲಿ ಮುಳುಗುತ್ತಿದ್ದ 3 ಯುವಕರ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ: ಪ್ರಾಣಾಪಾಯದಿಂದ ಪಾರು
ಪ್ರವಾಸಿಗರ ರಕ್ಷಣೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 23, 2023 | 3:45 PM

ಕಾರವಾರ, ಅಕ್ಟೋಬರ್​​​​ 23: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಕಡಲತೀರದಲ್ಲಿ ಮುಳುಗುತ್ತಿದ್ದ (drowning) ಮೂವರು ಯುವಕರ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಬಾಗಲಕೋಟೆಯ ಬಸವನಗೌಡ ಪಾಟೀಲ್, ಶರಣು, ರವಿಚಂದ್ರನ್ ರಕ್ಷಣೆಗೊಳಗಾದವರು. ಲೈಫ್‌ಗಾರ್ಡ್ ಸಿಬ್ಬಂದಿ ಶಶಿ, ಪಾಂಡು, ರಾಮಚಂದ್ರರಿಂದ ಮೂವರ ರಕ್ಷಣೆ ಮಾಡಿದ್ದು, ಅಸ್ವಸ್ಥಗೊಂಡ ಪ್ರವಾಸಿಗನಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಪತ್ತೆಯಾಗಿದ್ದ ಹೆಡ್​ ಕಾನ್ಸ್​ಟೇಬಲ್ ಶವವಾಗಿ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಹೆಡ್​ ಕಾನ್ಸ್​ಟೇಬಲ್ ಶವವಾಗಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಪುಲ್ಕೇರಿ ಗ್ರಾಮದಲ್ಲಿ ನಡೆದಿದೆ. ಪುಲ್ಕೇರಿ ಸಮೀಪ ಬಾವಿಯಲ್ಲಿ ಶೃತಿನ್ ಶೆಟ್ಟಿ(35) ಮೃತದೇಹ ಪತ್ತೆ ಆಗಿದೆ. ಮೃತ ಶೃತಿನ್ ಶೆಟ್ಟಿ ಕಾರ್ಕಳ ನಗರ ಠಾಣೆ ಹೆಡ್ ಕಾನ್ಸ್‌ಟೇಬಲ್ ಆಗಿದ್ದರು.

ಇದನ್ನೂ ಓದಿ: ಕೋಲಾರ: ಗೃಹಸಚಿವ ಪರಮೇಶ್ವರ್ ಆಪ್ತ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟ ಎಂ ಶ್ರೀನಿವಾಸ್ ಬರ್ಬರ ಹತ್ಯೆ

ಅ.19ರಂದು ನಾಪತ್ತೆಯಾಗಿದ್ದರು. ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2008ರ ಬ್ಯಾಚ್​ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಅಕ್ಟೋಬರ್ 18, 19ರಂದು ರಜೆ ಮೇಲೆ ತೆರಳಿದ್ದರು.

ಎತ್ತುಗಳ ಮೈ ತೊಳೆಯಲು ಹೋದ ಯುವಕ ನೀರು ಪಾಲು

ಗದಗ: ಎತ್ತುಗಳ ಮೈ ತೊಳೆಯಲು ಹೋದ ಯುವಕ ನೀರು ಪಾಲಾಗಿರುವಂತಹ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ. ಶಿರೋಳ ಗ್ರಾಮದ ಅನೀಲ ರಂಗಣ್ಣವರ (22) ನೀರು ಪಾಲಾದ ಯುವಕ. ಮುಂಜಾನೆ ಎದ್ದು ಎತ್ತಿನ ಮೈ ತೊಳೆದುಕೊಂಡು ಬರುತ್ತೇನೆಂದು ಹೋಗಿದ್ದ. ಎತ್ತಿನ ಮೈ ತೊಳೆಯುವ ವೇಳೆ ಕಾಲು ಜಾರಿ ಮಲಪ್ರಭಾ ನದಿಗೆ ಬಿದಿದ್ದಾನೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಸಿದ್ದು, ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ, ದಿನಕ್ಕೆ 10 ಮೊಬೈಲ್ ಕಳ್ಳತನ

ತುಮಕೂರು ತಾಲೂಕಿನ ಅರೆಯೂರು ಬಳಿ ದೇವರಹಟ್ಟಿ ಕಟ್ಟೆಯಲ್ಲಿ ಎಮ್ಮೆ ಮೈತೊಳೆಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಮನೋಜ್(12), ಚಿರಂತ್(14) ಮೃತರು. ಇಬ್ಬರು ಬಾಲಕರ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.