ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ, ದಿನಕ್ಕೆ 10 ಮೊಬೈಲ್ ಕಳ್ಳತನ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿದೆ. ರಾತ್ರಿ ವೇಳೆ ರೋಗಿಗಳ ಸಂಬಂಧಿಕರು ಮಲಗಿದ್ದಾಗ ಖದೀಮರು ಹೊಂಚು ಹಾಕಿ ಸದ್ದಿಲ್ಲದೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಸದ್ಯ ಖದೀಮರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಿನ 10ಕ್ಕೂ ಹೆಚ್ಚು ಮೊಬೈಲ್ಗಳನ್ನು ಖದೀಮರು ಕದಿಯುತ್ತಿದ್ದಾರೆ. ಹೀಗಾಗಿ ರೋಗಿಗಳ ಕುಟುಂಬಸ್ಥರಿಗೆ ಮೊಬೈಲ್ ಜೋಪಾನ ಮಾಡುವುದೇ ತಲೆ ನೋವಾಗಿದೆ.
ಹುಬ್ಬಳ್ಳಿ, ಅ.23: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (Hubli Kims Hospital) ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ (Theft). ಪ್ರತಿ ನಿತ್ಯ 10ಕ್ಕೂ ಹೆಚ್ಚು ಮೊಬೈಲ್ಗಳ ಕಳ್ಳತನವಾಗುತ್ತಿದೆ. ರಾತ್ರಿ ವೇಳೆ ರೋಗಿಗಳ ಸಂಬಂಧಿಕರು ಮಲಗಿದ್ದಾಗ ಖದೀಮರು ಹೊಂಚು ಹಾಕಿ ಸದ್ದಿಲ್ಲದೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಸದ್ಯ ಖದೀಮರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ನಿವಾಸಿ ಅಲ್ಲಾಭಕ್ಷಿ ಎಂಬುವವರ ಮೊಬೈಲ್ ಕಳ್ಳತನವಾಗಿದೆ.
ಅಲ್ಲಾಭಕ್ಷಿ ಸಂಬಂಧಿಕರು ಕಳೆದ 5 ದಿನದ ಹಿಂದೆ ಕಿಮ್ಸ್ಗೆ ದಾಖಲಾಗಿದ್ದರು. ಸಂಬಂಧಿಯನ್ನು ಮಾತನಾಡಿಸಲು ಆಸ್ಪತ್ರೆಗೆ ಬಂದಿದ್ದ ಅಲ್ಲಾಭಕ್ಷಿ ರಾತ್ರಿ ಆಸ್ಪತ್ರೆಯ್ಲಲೇ ಮಲಗಿದ್ದರು. ಈ ಮೇಳೆ ಮೊಬೈಲ್ ಕಳ್ಳತನವಾಗಿದ್ದು ಖದೀಮರ ಕೈ ಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಐವರು ದರೋಡೆಕೋರರನ್ನು ಬಂಧಿಸಿದ ನೆಲಮಂಗಲ ಗ್ರಾ. ಪೊಲೀಸರು
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿದ್ದಾರೆ. ಚಿಕ್ಕಮಾರನಹಳ್ಳಿಯ ಮಧುಸೂದನ್, ಕಾರ್ತಿಕ್, ಅಪ್ಪು, ತಿಮ್ಮರಾಜ್, ವೇಣುಗೋಪಾಲ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದರೋಡೆ ಮಾಡಲು ಬಳಸಿದ್ದ ಟೆಂಪೋ, ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮಾದನಾಯಕನಹಳ್ಳಿ, ನೆಲಮಂಗಲ ಸೇರಿದಂತೆ ಹಲವು ಕಡೆ ಆರೋಪಿಗಳ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಕಾರ್ತಿಕ್ ದರೋಡೆಗೊಳಗಾಗಿದ್ದ ಲಾರಿ ಚಾಲಕ ಮೋಹನ್ ಕಡೆಯಿಂದ ತಂದೆ ಮೊಬೈಲ್ ಗೆ 10 ಸಾವಿರ ಗೂಗಲ್ ಪೇ ಮಾಡಿಸಿದ್ದ, 8 ಸಾವಿರ ನಗದು, 10 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದ ಬಗ್ಗೆ ಚಾಲಕ ಠಾಣೆಗೆ ದೂರು ನೀಡಿದ್ದ. ಇದೇ ಸುಳಿವಿನ ಮೇಲೆ ಪೊಲೀಸರು ಬೆನ್ನಟ್ಟಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ವಿಐಪಿ ದರ್ಶನಕ್ಕಾಗಿ ಸುಳ್ಳು ಹೇಳಿದ ನಕಲಿ ಐಆರ್ಎಸ್ ಅಧಿಕಾರಿ ಬಂಧನ
ನಾಪತ್ತೆಯಾಗಿದ್ದ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ ಶವವಾಗಿ ಪತ್ತೆ
ನಾಪತ್ತೆಯಾಗಿದ್ದ ಕಾರ್ಕಳ ನಗರ ಠಾಣೆ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ(35) ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಲ್ಕೇರಿ ಸಮೀಪ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶೃತಿನ್ ಶೆಟ್ಟಿ ಅ.19ರಂದು ನಾಪತ್ತೆಯಾಗಿದ್ದರು. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2008ರ ಬ್ಯಾಚ್ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಮೃತ ಶೃತಿನ್, ಅಕ್ಟೋಬರ್ 18, 19ರಂದು ರಜೆ ಮೇಲೆ ತೆರಳಿದ್ದರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ