ಪ್ರೀತಿಸಿ ಮದುವೆಯಾದವನಿಂದಲೇ ಮಹಿಳಾ ಪೊಲೀಸ್ ಕೊಲೆ; ಸಿಂಧೂರವನ್ನು ಅಳಿಸಿ, ಶವ ಬೆತ್ತಲೆಗೊಳಿಸಿದ ಗಂಡ!

ಶೋಭಾ ಮತ್ತು ಆಕೆಯ ಗಂಡ ಜೆಹಾನಾಬಾದ್‌ನಲ್ಲಿ ನಡೆಸುತ್ತಿದ್ದ ಕೋಚಿಂಗ್ ತರಗತಿಯಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರಿಗೂ ಪ್ರೀತಿಯಾಗಿತ್ತು. ನಂತರ ಮನೆಯವರನ್ನು ಒಪ್ಪಿಸಿ ಮದುವೆಯನ್ನೂ ಆಗಿದ್ದರು. ಅವರಿಗೆ ಒಬ್ಬಳು ಮಗಳಿದ್ದಾಳೆ.

ಪ್ರೀತಿಸಿ ಮದುವೆಯಾದವನಿಂದಲೇ ಮಹಿಳಾ ಪೊಲೀಸ್ ಕೊಲೆ; ಸಿಂಧೂರವನ್ನು ಅಳಿಸಿ, ಶವ ಬೆತ್ತಲೆಗೊಳಿಸಿದ ಗಂಡ!
ಸಾಂದರ್ಭಿಕ ಚಿತ್ರ
Follow us
|

Updated on: Oct 22, 2023 | 7:32 PM

ಪಾಟ್ನಾ: ಇತ್ತೀಚೆಗಷ್ಟೇ ನೇಮಕವಾಗಿದ್ದ ಪಾಟ್ನಾದ ಮಹಿಳಾ ಕಾನ್‌ಸ್ಟೆಬಲ್ ಶೋಭಾ ಕುಮಾರಿ ಎಂಬುವವರನ್ನು ಅವರ ಪತಿ ಗಜೇಂದ್ರ ಯಾದವ್ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಆಕೆಗೆ ಕೆಲಸ ಸಿಕ್ಕ ನಂತರ ತನ್ನ ಕುಟುಂಬಕ್ಕೆ ಸಮಯವನ್ನೇ ನೀಡುತ್ತಿರಲಿಲ್ಲ ಎಂಬ ಕಾರಣಕ್ಕೆ ಆಕೆಯ ಗಂಡನಿಗೆ ಆಕೆಯ ಮೇಲೆ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​ಳನ್ನು ಆತ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಬೆತ್ತಲೆಗೊಳಿಸಿ, ಆಕೆಯ ಸಿಂಧೂರವನ್ನು ಅಳಿಸಿ, ರೂಮಿನಲ್ಲಿ ಬಿಸಾಡಿ ಹೋಗಿದ್ದಾನೆ.

ಶುಕ್ರವಾರ ಪಾಟ್ನಾದ ಹೋಟೆಲ್ ರೂಮಿನಲ್ಲಿ ಶೋಭಾ ಅವರ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆಯ ಶವದ ಮೇಲೆ ಬಟ್ಟೆಗಳಿರಲಿಲ್ಲ. ಇಡೀ ರೂಮಿನ ತುಂಬ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಬಹುಶಃ ಸಾಯುವ ಮುಂಚೆ ಆಕೆ ಜೋರಾಗಿ ಕಿರುಚಿ, ಗಲಾಟೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರಬಹುದು ಎನ್ನಲಾಗಿದೆ. ಶೋಭಾ ಅವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಕಲಬುರಗಿ: ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ; ಕಾರಣ?

23 ವರ್ಷದ ಶೋಭಾ ಅವರ ಪತಿ ಜೆಹಾನಾಬಾದ್ ಬಳಿ ವಾಸವಾಗಿದ್ದು, ತನ್ನ ಹೆಂಡತಿ ಕೆಲಸದ ಕಾರಣದಿಂದ ಕುಟುಂಬಕ್ಕೆ ಸಮಯವನ್ನೇ ಕೊಡುತ್ತಿಲ್ಲ ಎಂಬ ಕೋಪ ಅವರಿಗಿತ್ತು. ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಮತ್ತು ಆಕೆಯ ಗಂಡ ಜೆಹಾನಾಬಾದ್‌ನಲ್ಲಿ ನಡೆಸುತ್ತಿದ್ದ ಕೋಚಿಂಗ್ ತರಗತಿಯಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರಿಗೂ ಪ್ರೀತಿಯಾಗಿತ್ತು. ನಂತರ ಮನೆಯವರನ್ನು ಒಪ್ಪಿಸಿ ಮದುವೆಯನ್ನೂ ಆಗಿದ್ದರು. ಅವರಿಗೆ ಒಬ್ಬಳು ಮಗಳಿದ್ದಾಳೆ.

2 ದಿನಗಳ ಹಿಂದೆ ಪಾಟ್ನಾದ ಹೋಟೆಲ್‌ನಲ್ಲಿ ಶೋಭಾ ಅವರ ಶವ ಪತ್ತೆಯಾಗಿತ್ತು. ಆಕೆಯ ಪತಿ ಆ ರೂಮನ್ನು ಬುಕ್ ಮಾಡಿದ್ದರು. ಶೋಭಾ ಅವರನ್ನು ಭೇಟಿ ಮಾಡಲು ಬಂದಿದ್ದರು. ಕೊಲೆಯ ನಂತರ ಪತಿ ತನ್ನ ಫೋನ್ ಸ್ವಿಚ್ ಆಫ್ ಮಾಡುವ ಮೊದಲು 3 ಕರೆಗಳನ್ನು ಮಾಡಿದ್ದ ಎನ್ನಲಾಗಿದೆ. ಆತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ