AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಹೋಟೆಲ್​ನಲ್ಲಿ ಯುವತಿಯ ಶವ ಪತ್ತೆ

ಅನಂತ್ ಹೋಟೆಲ್ ಕೆಲವು ಸಮಯದಿಂದ ಈ ರೀತಿಯ ಹಲವು ಘಟನೆಗಳಿಂದಾಗಿ ಸುದ್ದಿಯಲ್ಲಿದೆ. ಈ ಹಿಂದೆ ಇದೇ ಹೋಟೆಲ್‌ನಲ್ಲಿ ಬಿಹಾರ ಮೂಲದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು.

ಉತ್ತರ ಪ್ರದೇಶದ ಹೋಟೆಲ್​ನಲ್ಲಿ ಯುವತಿಯ ಶವ ಪತ್ತೆ
ಕೊಲೆ
ಸುಷ್ಮಾ ಚಕ್ರೆ
|

Updated on: Oct 22, 2023 | 6:42 PM

Share

ಘಜಿಯಾಬಾದ್: ನವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಘಜಿಯಾಬಾದ್​ನ ಹೋಟೆಲ್‌ವೊಂದರಲ್ಲಿ ದುರ್ಗಾ ಪೂಜೆಯ ಬೆನ್ನಲ್ಲೇ 23 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಆ ಯುವತಿ ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಘಜಿಯಾಬಾದ್​ನ ಹೋಟೆಲ್ ಅನಂತ್‌ನಲ್ಲಿ 23 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದೆ. ಯುವತಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವೇವ್ ಸಿಟಿ ಠಾಣೆಯ ಪೊಲೀಸ್ ತಂಡ ಹೋಟೆಲ್‌ಗೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ ಎಂದು ಎಸಿಪಿ ಸಲೋನಿ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಇಬ್ಬರು ಸಲಿಂಗಿಗಳ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

ಮೃತ ಯುವತಿ ಮುಂದಿನ ತಿಂಗಳು ಮದುವೆಯಾಗಲು ನಿರ್ಧರಿಸಿದ್ದಳು. ಆಕೆಗೆ ನಿಶ್ಚಿತಾರ್ಥವೂ ಆಗಿತ್ತು. ಹೀಗಾಗಿ, ಈ ಸಾವಿನ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ. ಆ ಯುವತಿಗೆ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಯುವತಿ ಅನುಮಾನಾಸ್ಪದವಾಗಿ ಹೋಟೆಲ್‌ನಲ್ಲಿ ಸಾವನ್ನಪ್ಪಿದ ಬಗ್ಗೆ ಆಕೆಯನ್ನು ಮದುವೆಯಾಗಬೇಕಿದ್ದ ಯುವಕ ಅಜರುದ್ದೀನ್ ಆಕೆಯ ಕುಟುಂಬಕ್ಕೆ ತಿಳಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ನಿಮ್ಮ ಕಾಲುಗಳಲ್ಲಿನ ಈ 6 ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣಗಳಾಗಿರಬಹುದು, ಎಚ್ಚರ!

ಮೃತ ಯುವತಿಯ ಸಹೋದರ ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನಂತ್ ಹೋಟೆಲ್ ಕೆಲವು ಸಮಯದಿಂದ ಈ ರೀತಿಯ ಹಲವು ಘಟನೆಗಳಿಂದಾಗಿ ಸುದ್ದಿಯಲ್ಲಿದೆ. ಈ ಹಿಂದೆ ಇದೇ ಹೋಟೆಲ್‌ನಲ್ಲಿ ಬಿಹಾರ ಮೂಲದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ