ನಿಮ್ಮ ಕಾಲುಗಳಲ್ಲಿನ ಈ 6 ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣಗಳಾಗಿರಬಹುದು, ಎಚ್ಚರ!

ಅಧಿಕ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಆದರೂ ಜನರು ಸಾಮಾನ್ಯವಾಗಿ ತೂಕ ಹೆಚ್ಚಾದರೆ ಅದನ್ನು ಅಧಿಕ ಕೊಲೆಸ್ಟ್ರಾಲ್‌ ಎಂದು ಪರಿಗಣಿಸುತ್ತಾರೆ. ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರ ಕೆಲವು ಸೂಕ್ಷ್ಮ ಸಂಕೇತಗಳನ್ನು ನಿಮ್ಮ ಕಾಲು ನೀಡುತ್ತದೆ.

ನಿಮ್ಮ ಕಾಲುಗಳಲ್ಲಿನ ಈ 6 ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣಗಳಾಗಿರಬಹುದು, ಎಚ್ಚರ!
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Oct 12, 2023 | 5:48 PM

ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಹೃದಯರಕ್ತನಾಳದ ಕಾಯಿಲೆಗಳು, ಅಪಧಮನಿಯ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಕೊಲೆಸ್ಟ್ರಾಲ್​ಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಹೀಗಾಗಿ, ಅಧಿಕ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಆದರೂ ಜನರು ಸಾಮಾನ್ಯವಾಗಿ ತೂಕ ಹೆಚ್ಚಾದರೆ ಅದನ್ನು ಅಧಿಕ ಕೊಲೆಸ್ಟ್ರಾಲ್‌ ಎಂದು ಪರಿಗಣಿಸುತ್ತಾರೆ. ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರ ಕೆಲವು ಸೂಕ್ಷ್ಮ ಸಂಕೇತಗಳನ್ನು ನಿಮ್ಮ ಕಾಲು ನೀಡುತ್ತದೆ. ಹೀಗಾಗಿ, ಕಾಲಿನಲ್ಲಿ ಈ ಕೆಲವು ಬದಲಾವಣೆಗಳು ಉಂಟಾದರೆ ಅದನ್ನು ಕೊಲೆಸ್ಟ್ರಾಲ್ ಲಕ್ಷಣ ಎಂದು ಪರಿಗಣಿಸಬಹುದು.

ತಣ್ಣಗಾದ ಪಾದಗಳು ಮತ್ತು ಕಾಲುಗಳು:

ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾದಾಗ ಬೇಸಿಗೆಯಲ್ಲಿಯೂ ಸಹ ನಿಮ್ಮ ಪಾದಗಳು ಅಥವಾ ಕಾಲುಗಳನ್ನು ತಣ್ಣಗಾಗಬಹುದು. ನೀವು PAD ಹೊಂದಿರುವಿರಿ ಎಂಬುದಕ್ಕೆ ಇದು ಸೂಚಕವಾಗಿರಬಹುದು.

ಕಾಲು ನೋವು:

ಕಾಲು ನೋವು PADಯ ಸಾಮಾನ್ಯ ಲಕ್ಷಣವಾಗಿದೆ. ನೋವು ನೀವು ಕೆಲಸ ಮಾಡುವಾಗ ಬರಬಹುದು ಅಥವಾ ಸುಮ್ಮನೆ ಕುಳಿತಾಗಲೂ ಬರಬಹುದು. ನಿಮ್ಮ ಪೃಷ್ಠ, ಪಾದಗಳು ಅಥವಾ ತೊಡೆಗಳಲ್ಲಿ ನೋವು ಉಂಟಾಗಬಹುದು.

ಇದನ್ನೂ ಓದಿ: Body Pain: ವ್ಯಾಯಾಮದ ಬಳಿಕ ಸ್ನಾಯುಗಳು ನೋಯುತ್ತಿವೆಯೇ? ಈ ಸರಳ ಸಲಹೆಗಳನ್ನು ಪ್ರಯತ್ನಿಸಿ ಆರಾಮವಾಗಿರಿ

ಚರ್ಮದ ಬಣ್ಣ ಬದಲಾವಣೆ:

ಅಧಿಕ ಕೊಲೆಸ್ಟ್ರಾಲ್‌ನಿಂದ ರಕ್ತದ ಹರಿವು ಕಡಿಮೆಯಾಗುವುದರಿಂದ ನಿಮ್ಮ ಚರ್ಮದ ಬಣ್ಣ ಬದಲಾಗಬಹುದು. ಏಕೆಂದರೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವ ಅಸಮರ್ಪಕ ರಕ್ತದ ಹರಿವಿನಿಂದಾಗಿ ನಿಮ್ಮ ಜೀವಕೋಶಗಳು ಸಾಕಷ್ಟು ಪೋಷಣೆಯನ್ನು ಪಡೆಯುವುದಿಲ್ಲ. ಇದು ಕಾಲುಗಳ ಬಣ್ಣ ಬದಲಾಗಲು ಕಾರಣವಾಗುತ್ತದೆ.

ತೀವ್ರವಾದ ಕಾಲಿನ ಸೆಳೆತ:

ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರು ನಿದ್ರಿಸುವಾಗ ಕಾಲಿನ ಸೆಳೆತ ಅನುಭವಿಸುತ್ತಾರೆ. ಸಾಮಾನ್ಯವಾಗಿ ಹಿಮ್ಮಡಿ, ಮುಂಗಾಲು ಅಥವಾ ಕಾಲ್ಬೆರಳುಗಳಲ್ಲಿ ನೋವು, ಸೆಳೆತ ಕಾಣಿಸಿಕೊಳ್ಳುತ್ತದೆ. ರಾತ್ರಿ ಮಲಗುವಾಗ ಈ ನೋವು ಹೆಚ್ಚಾಗುತ್ತದೆ. ಪಾದವನ್ನು ಅಲುಗಾಡಿಸುವುದು ಅಥವಾ ಕುಳಿತುಕೊಳ್ಳುವುದರಿಂದ ನಿಮಗೆ ಕೊಂಚ ಆರಾಮ ಸಿಗುತ್ತದೆ.

ಕಾಲು ಅಥವಾ ಪಾದದ ಹುಣ್ಣುಗಳು:

ಕಾಲು ಅಥವಾ ಪಾದದ ಹುಣ್ಣುಗಳು ಸುಲಭವಾಗಿ ವಾಸಿಯಾಗುವುದಿಲ್ಲ. ಚಿಕಿತ್ಸೆ ನೀಡದಿದ್ದರೆ ಈ ಹುಣ್ಣುಗಳು ಮರುಕಳಿಸಬಹುದು. ಇದು ಸಾಮಾನ್ಯವಾಗಿ ಸರಿಯಾಗಿ ರಕ್ತ ಪರಿಚಲನೆಯಾಗದಿದ್ದರೆ ಉಂಟಾಗುತ್ತದೆ.

ಇದನ್ನೂ ಓದಿ: Bone Health: ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳಿವು

ವ್ಯಾಯಾಮದ ಸಮಯದಲ್ಲಿ ಮಾಂಸಖಂಡಗಳ ನೋವು:

ಅಧಿಕ ಕೊಲೆಸ್ಟ್ರಾಲ್​ನ ಸಾಮಾನ್ಯ ಲಕ್ಷಣವೆಂದರೆ ಸ್ನಾಯು ನೋವು. ಇದು ನೋವು, ಸೆಳೆತ, ಮರಗಟ್ಟುವಿಕೆ ಮತ್ತು ಆಯಾಸವನ್ನು ಒಳಗೊಂಡಿರುತ್ತದೆ.

ನಿಮಗೆ ಅಧಿಕ ಕೊಲೆಸ್ಟ್ರಾಲ್ ಇರುವ ಬಗ್ಗೆ ನಿಮಗೆ ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ವೈದ್ಯರು ಸೂಚಿಸಬಹುದು. ಅಗತ್ಯವಿದ್ದರೆ ಔಷಧಿಗಳನ್ನು ಸಹ ನೀಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್