ಮಗಳನ್ನೂ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗು ಹತ್ಯೆಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಚನ್ನಪಟ್ಟಣ ಲೇಔಟ್‌ನ ಡೇರಿ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ರೂಪ(38), ಬಿಂದು(7) ಮೃತ ದುರ್ದೈವಿಗಳು. ತಾಯಿ ರೂಪಾ 7 ವರ್ಷದ ಮಗಳಾದ ಬಿಂದುನ ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಾವಿಗೆ ಪತಿಯೇ ಕಾರಣ ಎಂದು ಗೋಡೆ ಮೇಲೆ ಡೆತ್ ನೋಟ್ ಬರೆದಿದ್ದಾಳೆ. ಪಾಪಿ ತಾಯಿಯ ಕ್ಷಮಿಸಪ್ಪ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನ ನಗರ ಪೊಲೀಸ್ ಠಾಣಾ […]
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗು ಹತ್ಯೆಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಚನ್ನಪಟ್ಟಣ ಲೇಔಟ್‌ನ ಡೇರಿ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ರೂಪ(38), ಬಿಂದು(7) ಮೃತ ದುರ್ದೈವಿಗಳು. ತಾಯಿ ರೂಪಾ 7 ವರ್ಷದ ಮಗಳಾದ ಬಿಂದುನ ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ.
ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಾವಿಗೆ ಪತಿಯೇ ಕಾರಣ ಎಂದು ಗೋಡೆ ಮೇಲೆ ಡೆತ್ ನೋಟ್ ಬರೆದಿದ್ದಾಳೆ. ಪಾಪಿ ತಾಯಿಯ ಕ್ಷಮಿಸಪ್ಪ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:33 am, Sun, 3 May 20