ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಮೇಲೆ ಖಾಕಿ ಫೈರಿಂಗ್
ಬೆಂಗಳೂರು: ಬೆಳಗಿನ ಜಾವವೇ ಪೊಲೀಸರ ಗನ್ ಸದ್ದು ಮಾಡಿದೆ. ಕೊಲೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಲಿಟ್ಕರ್ ಕಾಲೋನಿಯಲ್ಲಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಜಯ್ ಅಲಿಯಾಸ್ ಆ್ಯಂಡ್ರೂಸ್ ಕಾಲಿಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ರೌಡಿಶೀಟರ್ ಬಿಜು ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಂಜಯ್ ಬಂಧಿಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದಾನೆ. ಇನ್ಸ್ಪೆಕ್ಟರ್ ಅಜಯ್ ಸಾರಥಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು […]
ಬೆಂಗಳೂರು: ಬೆಳಗಿನ ಜಾವವೇ ಪೊಲೀಸರ ಗನ್ ಸದ್ದು ಮಾಡಿದೆ. ಕೊಲೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಲಿಟ್ಕರ್ ಕಾಲೋನಿಯಲ್ಲಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಜಯ್ ಅಲಿಯಾಸ್ ಆ್ಯಂಡ್ರೂಸ್ ಕಾಲಿಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ರೌಡಿಶೀಟರ್ ಬಿಜು ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಂಜಯ್ ಬಂಧಿಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದಾನೆ. ಇನ್ಸ್ಪೆಕ್ಟರ್ ಅಜಯ್ ಸಾರಥಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಶರಣಾಗದೇ ಹಲ್ಲೆಗೆ ಮುಂದಾದಾಗ ಆರೋಪಿಯ ಎಡಗಾಲಿಗೆ ಶೂಟ್ ಮಾಡಿದ್ದಾರೆ.
ನ್ಯೂ ಬಾಗಲೂರು ಲೇಔಟ್ನ ಬಿಜು ಮನೆ ಬಳಿಯೇ ಮೇ 2ರಂದು ಮಾರಕಾಸ್ತ್ರದಿಂದ ರೌಡಿಶೀಟರ್ ಬಿಜು (30) ಹತ್ಯೆಗೈಯ್ಯಲಾಗಿತ್ತು. ಹತ್ಯೆ ನಡೆಸಿ ಕೆಲವೇ ಕ್ಷಣಗಳಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಕೊಲೆ ಆರೋಪಿ ಸಂಜಯ್ ಮತ್ತವನ ಸಹಚರರನ್ನ ಬಂಧಿಸಲು ತೆರಳಿದ್ದಾಗ ಘಟನೆ ನಡೆದಿದೆ.