ಮುಂಬೈ: ಆನ್ಲೈನ್ ದಿನಸಿ ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್ ಮಹಿಳೆಯೊಬ್ಬರ ಕೈ ಮುಟ್ಟಿ, ಕಣ್ಣು ಹೊಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂಬೈನ ಕೋರ್ಟ್ ಆತನಿಗೆ ಶಿಕ್ಷೆ ವಿಧಿಸಿದೆ. ಆನ್ಲೈನ್ನಲ್ಲಿ ದಿನಸಿ ಆರ್ಡರ್ ಮಾಡಿದ್ದ 22 ವರ್ಷದ ಮಹಿಳೆಯ ಮನೆಗೆ ಡೆಲಿವರಿ ನೀಡಲು ಬಂದ ಯುವಕ ತನಗೆ ಬಾಯಾರಿಕೆ ಆಗಿದೆ ಎಂದು ನೀರು ಕೇಳಿದ್ದಾನೆ. ಆ ಮಹಿಳೆ ನೀರು ತಂದು ಕೊಟ್ಟಾಗ ಕಣ್ಣು ಮಿಟುಕಿಸಿ, ಆಕೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಆ ಯುವಕನನ್ನು ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಆತನ ವಿರುದ್ಧ ಯಾವುದೇ ಕ್ರಿಮಿನಲ್ ಹಿನ್ನಲೆಗಳಿಲ್ಲ ಎಂಬ ಅಂಶವನ್ನು ಪರಿಗಣಿಸಿ ಹೆಚ್ಚಿನ ಶಿಕ್ಷೆಯನ್ನು ವಿಧಿಸಿಲ್ಲ. ಆರೋಪಿ ಮೊಹಮ್ಮದ್ ಕೈಫ್ ಫಕೀರ್ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿಲ್ಲದ ಶಿಕ್ಷೆಗೆ ಅರ್ಹನಾಗಿದ್ದರೂ, ಅವನ ವಯಸ್ಸು ಮತ್ತು ಯಾವುದೇ ಅಪರಾಧದ ಪೂರ್ವಾಪರ ಇಲ್ಲದಿರುವ ಅಂಶವನ್ನು ಪರಿಗಣಿಸಿ, ಕಠಿಣ ಶಿಕ್ಷೆ ನೀಡಿಲ್ಲ ಎಂದು ಮ್ಯಾಜಿಸ್ಟ್ರೇಟ್ ಆರತಿ ಕುಲಕರ್ಣಿ ಹೇಳಿದ್ದಾರೆ.
ಇದನ್ನೂ ಓದಿ: Crime News: 13 ವರ್ಷದ ಮಗಳ ಮೇಲೆ ಅಪ್ಪನಿಂದ ಅತ್ಯಾಚಾರ; ಉತ್ತರ ಪ್ರದೇಶದಲ್ಲೊಂದು ಶಾಕಿಂಗ್ ಘಟನೆ
ಆಗಸ್ಟ್ 22ರಂದು ಈ ಕುರಿತು ಆದೇಶ ಹೊರಡಿಸಲಾಗಿದೆ. ಆರೋಪಿಯಿಂದಾಗಿ ಆ ಮಹಿಳೆ ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಿರುಕುಳವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ಆರೋಪಿಗೆ ಶಿಕ್ಷೆ ವಿಧಿಸುವುದು ಅವನ ಭವಿಷ್ಯ ಮತ್ತು ಸಮಾಜದಲ್ಲಿ ಅವನ ಇಮೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ 15,000 ಬಾಂಡ್ ಸಲ್ಲಿಸಿದ ನಂತರ ಫಕೀರ್‌ನನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಯಾವಾಗ ಕರೆದರೂ ಪ್ರೊಬೇಷನ್ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಇದನ್ನೂ ಓದಿ: Shocking Video: ದೇವಸ್ಥಾನದೊಳಗೆ ಅಶ್ಲೀಲ ಚಿತ್ರ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ; ಶಾಕಿಂಗ್ ವಿಡಿಯೋ ವೈರಲ್
ಏಪ್ರಿಲ್ 2022ರಲ್ಲಿ ದಕ್ಷಿಣ ಮುಂಬೈನ ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಪ್ರಕಾರ, ಮಹಿಳೆ ಸ್ಥಳೀಯ ಅಂಗಡಿಯಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅದನ್ನು ತಲುಪಿಸಲು ಅವರ ಮನೆಗೆ ಬಂದನು. ಆರೋಪಿ ಆ ಮಹಿಳೆಗೆ ಒಂದು ಲೋಟ ನೀರು ಕೊಡುವಂತೆ ಕೇಳಿದ್ದು, ಅದನ್ನು ಕೊಡುವಾಗ ಅನುಚಿತವಾಗಿ ಆಕೆಯ ಕೈಯನ್ನು ಸ್ಪರ್ಶಿಸಿ ಕಣ್ಣು ಮಿಟುಕಿಸಿದ್ದಾನೆ.
ದಿನಸಿ ಚೀಲವನ್ನು ಕೊಡುವಾಗ ಅವನು ಎರಡನೇ ಬಾರಿ ಅವರ ಕೈಯನ್ನು ಮುಟ್ಟಿದನು. ಮತ್ತೆ ಅವರತ್ತ ಕಣ್ಣು ಮಿಟುಕಿಸಿದನು ಎಂದು ಆ ಮಹಿಳೆ ಆರೋಪಿಸಿದ್ದರು. ಇದರಿಂದ ಆ ಮಹಿಳೆ ಗಲಾಟೆ ಮಾಡಿದಾಗ ಆರೋಪಿ ಓಡಿ ಹೋಗಿದ್ದಾನೆ. ನಂತರ ಆ ಮಹಿಳೆ ತನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದ್ದು, ಅವರು ಪೊಲೀಸ್ ದೂರು ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ