Mumbai Crime: ಲಿವ್​-ಇನ್​ ಸಂಗಾತಿಯ ದೇಹವನ್ನು ಕತ್ತರಿಸಿ ಕುಕ್ಕರ್​ನಲ್ಲಿ ಬೇಯಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​, ವಿಚಾರಣೆ ವೇಳೆ ವ್ಯಕ್ತಿ ಹೇಳಿದ್ದೇನು?

|

Updated on: Jun 09, 2023 | 8:31 AM

ವ್ಯಕ್ತಿಯು ತನ್ನ ಲಿವ್​-ಇನ್ ಸಂಗಾತಿಯ ದೇಹವನ್ನು ಕತ್ತರಿಸಿ 13 ತುಂಡುಗಳನ್ನಾಗಿ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ್ದ ಎನ್ನುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು, ಆದರೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ.

Mumbai Crime: ಲಿವ್​-ಇನ್​ ಸಂಗಾತಿಯ ದೇಹವನ್ನು ಕತ್ತರಿಸಿ ಕುಕ್ಕರ್​ನಲ್ಲಿ ಬೇಯಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​, ವಿಚಾರಣೆ ವೇಳೆ ವ್ಯಕ್ತಿ ಹೇಳಿದ್ದೇನು?
ಆರೋಪಿ ಮನೋಜ್ ಸಾನೆ
Follow us on

ವ್ಯಕ್ತಿಯು ತನ್ನ ಲಿವ್​-ಇನ್ ಸಂಗಾತಿಯ ದೇಹವನ್ನು ಕತ್ತರಿಸಿ 13 ತುಂಡುಗಳನ್ನಾಗಿ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ್ದ ಎನ್ನುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು, ಆದರೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. 32 ವರ್ಷದ ಸರಸ್ವತಿ ವೈದ್ಯ ಎಂಬುವವರ ಜತೆ ಮನೋಜ್ ಸಾನೆ ಕೆಲವು ವರ್ಷಗಳಿಂದ ಲಿವ್​ ಇನ್ ಸಂಬಂಧದಲ್ಲಿದ್ದರು. ಆಕೆಯನ್ನು ಹತ್ಯೆ ಮಾಡಿ ಬಳಿಕ ಆಕೆಯ ದೇಹವನ್ನು ಕತ್ತರಿಸಿ ಕುಕ್ಕರ್​ನಲ್ಲಿ ಬೇಯಿಸಿದ್ದ ಎಂದು ಆತನನ್ನು ಬಂಧಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.

ಸರಸ್ವತಿ ವೈದ್ಯ ಜೂನ್ 3 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಳು, ಆಕೆಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಸಂಶಯ ಪಡುತ್ತಾರೆ ಎನ್ನುವ ಭಯದಲ್ಲಿ ಆಕೆಯ ದೇಹವನ್ನು ಅಡಗಿಸುವ ಪ್ರಯತ್ನ ಮಾಡಿದ್ದೆ. ಹೀಗಾಗಿ ವಾಸನೆ ಬಾರದಂತೆ ತಡೆಯಲು ಆಕೆಯ ದೇಹವನ್ನು ಕತ್ತರಿಸಿ ಪ್ರೆಷರ್​ ಕುಕ್ಕರ್​ನಲ್ಲಿ ಬೇಯಿಸಿದ್ದೆ. ನಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ ಎಂದು ಮನೋಜ್ ಹೇಳಿದ್ದಾರೆ.

Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ

ಮೀರಾ ರೋಡ್ ಪ್ರದೇಶದಲ್ಲಿನ ಸೊಸೈಟಿಯಲ್ಲಿ ತುಂಡು ತುಂಡಾಗಿರುವ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಲ್ಲಿ ದಂಪತಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿತ್ತು. ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಿರಬಹುದು ಎಂದು ಹೇಳಲಾಗಿತ್ತು. . ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ