Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ

ಲಿವ್​ ಇನ್​ ಸಂಬಂಧದಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿದ್ದ 56 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ
ಪೊಲೀಸ್
Image Credit source: CNBCTV18.COM

Updated on: Jun 08, 2023 | 12:48 PM

ಲಿವ್​ ಇನ್​ ಸಂಬಂಧದಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿದ್ದ 56 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮನೋಜ್ ಸಹಾನಿ ಎಂದು ಗುರುತಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ಸರಸ್ವತಿ ವೈದ್ಯ ಅವರೊಂದಿಗೆ ವಾಸವಾಗಿದ್ದರು.

ವ್ಯಕ್ತಿಯು ಮಹಿಳೆಯನ್ನು ಕೊಂದು ಆಕೆಯ ದೇಹವನ್ನು 13 ಭಾಗಗಳಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿ, ನಾಯಿಗಳಿಗೆ ಹಾಕಿರುವ ವಿಚಾರ ಬೆಳಕಿಗೆ ಬಂದಿದ್ದು, ಘಟನೆ ಭಯಗೊಳಿಸುವಂತಿದೆ.

ಬುಧವಾರ ನಯಾನಗರ ಪೊಲೀಸ್ ಠಾಣೆಗೆ ಕಟ್ಟಡದ ನಿವಾಸಿಗಳಿಂದ ಕರೆ ಬಂದಿದ್ದು, ದಂಪತಿಯ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ದೂರಿದ್ದರು. ಪ್ರಾಥಮಿಕ ತನಿಖೆಯಿಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಲಿವಿಂಗ್​ ಟುಗೆದರ್​​ನಲ್ಲಿ ಏನಾಯ್ತೋ ಹೈದರಾಬಾದ್ ಟೆಕ್ಕಿ ಆಕಾಂಕ್ಷಾಳನ್ನು ಆಕೆಯ ಪ್ರಿಯಕರ ಹತ್ಯೆ ಮಾಡಿದ್ದ, ನಿಜವಾಗಿ ನಡೆದಿದ್ದೇನು?

ಮೀರಾ ರೋಡ್ ಪ್ರದೇಶದಲ್ಲಿನ ಸೊಸೈಟಿಯಲ್ಲಿ ತುಂಡು ತುಂಡಾಗಿರುವ ಮಹಿಳೆಯ ಶವವನ್ನು ಪತ್ತೆ ಮಾಡಿದ್ದಾರೆ. ಇಲ್ಲಿ ದಂಪತಿಗಳು ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆ ನಡೆಯುತ್ತಿದೆ ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಯಂತ್ ಬಜ್ಬಲೆ ಹೇಳಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ಅಫ್ತಾಬ್ ಪೂನಾವಾಲಾ ಎಂಬಾತ ತನ್ನ ಜತೆ ಲಿವ್ ಇನ್ ಸಂಬಂಧದಲ್ಲಿದ್ದ ಶ್ರದ್ಧಾ ವಾಕರ್ ಎಂಬಾಕೆಯನ್ನು ಹತ್ಯೆ ಮಾಡಿ ಹತ್ತಾರು ತುಂಡುಗಳನ್ನು ಮಾಡಿ, ಊರಿನ ಬೇರೆ ಬೇರೆ ಕಡೆ ಎಸೆದು ಬಂದಿದ್ದ ಘಟನೆ ನಡೆದಿತ್ತು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Published On - 7:53 am, Thu, 8 June 23