ದೀರ್ಘಕಾಲದವರೆಗೆ ಸಂಗಾತಿಗೆ ಲೈಂಗಿಕ ಸಂಬಂಧ ನಿರಾಕರಿಸುವುದು ಮಾನಸಿಕ ಕ್ರೌರ್ಯ: ಅಲಹಾಬಾದ್ ಹೈಕೋರ್ಟ್
ಮುಖ್ಯವಾಗಿ ಸಮುದಾಯ ಪಂಚಾಯತ್ ನಲ್ಲಿ ಈಗಾಗಲೇ ಪರಸ್ಪರ ಒಪ್ಪಿಗೆಯ ವಿಚ್ಛೇದನ ನಡೆದಿದೆ ಎಂಬ ಕಾರಣಕ್ಕೆ ರವೀಂದ್ರ ಪ್ರತಾಪ್ ಯಾದವ್ ವಿಚ್ಛೇದನ ಕೋರಿದ್ದರು. ಜತೆಯಾಗಿರುವುದನ್ನು ನಿರಾಕರಿಸುವುದು ಮತ್ತು ವೈವಾಹಿಕ ಜೀವನದ ಜವಾಬ್ದಾರಿಯನ್ನು ನಿರ್ವಹಿಸದೇ ಇರುವುದು ಮಾನಸಿಕ ಕ್ರೌರ್ಯ ಎಂದು ಆರೋಪಿಸಿರುವ ಯಾದವ್, ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ.
ದೆಹಲಿ: ಸಾಕಷ್ಟು ಕಾರಣವಿಲ್ಲದೆ ಸಂಗಾತಿಯು ದೀರ್ಘ ಕಾಲದವರೆಗೆ ಲೈಂಗಿಕ ಸಂಭೋಗಕ್ಕೆ ಅವಕಾಶ ನೀಡದಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಮೇಲ್ಮನವಿದಾರ ರವೀಂದ್ರ ಪ್ರತಾಪ್ ಯಾದವ್ ಅವರು ತಮ್ಮ ಪತ್ನಿ ಆಶಾದೇವಿಗೆ ವೈವಾಹಿಕ ಸಂಬಂಧದ ಬಗ್ಗೆ ಯಾವುದೇ ಗೌರವವಿಲ್ಲ, ವೈವಾಹಿಕ ಹೊಣೆಗಾರಿಕೆಯ ಹೊರಲು ನಿರಾಕರಿಸಿದ್ದಾರೆ. ಇದು ದಾಂಪತ್ಯ (marriage) ಮುರಿದು ಬೀಳಲು ಕಾರಣವಾಯಿತು ಎಂದು ಹೇಳಿದ್ದಾರೆ. ಯಾದವ್ ಅವರು ಸೆಕ್ಷನ್ 13 ಹಿಂದೂ ವಿವಾಹ ಕಾಯ್ದೆ, 1955 ಅನ್ನು ಉಲ್ಲೇಖಿಸಿ ತಮ್ಮ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ವಾರಣಾಸಿಯ (Varanasi) ಕೌಟುಂಬಿಕ ನ್ಯಾಯಾಲಯದ 2005 ರ ಆದೇಶವನ್ನು ಪ್ರಶ್ನಿಸಿದ್ದರು. ಕೆಳ ನ್ಯಾಯಾಲಯವು ಹೈಪರ್-ಟೆಕ್ನಿಕಲ್ ವಿಧಾನವನ್ನು ಅಳವಡಿಸಿಕೊಂಡಿದೆ ಎಂದ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದೆ.
ಮುಖ್ಯವಾಗಿ ಸಮುದಾಯ ಪಂಚಾಯತ್ ನಲ್ಲಿ ಈಗಾಗಲೇ ಪರಸ್ಪರ ಒಪ್ಪಿಗೆಯ ವಿಚ್ಛೇದನ ನಡೆದಿದೆ ಎಂಬ ಕಾರಣಕ್ಕೆ ರವೀಂದ್ರ ಪ್ರತಾಪ್ ಯಾದವ್ ವಿಚ್ಛೇದನ ಕೋರಿದ್ದರು. ಜತೆಯಾಗಿರುವುದನ್ನು ನಿರಾಕರಿಸುವುದು ಮತ್ತು ವೈವಾಹಿಕ ಜೀವನದ ಜವಾಬ್ದಾರಿಯನ್ನು ನಿರ್ವಹಿಸದೇ ಇರುವುದು ಮಾನಸಿಕ ಕ್ರೌರ್ಯ ಎಂದು ಆರೋಪಿಸಿರುವ ಯಾದವ್, ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ.
ಯಾದವ್ ಪ್ರಕಾರ ಇವರು ಮೇ 1979 ರಲ್ಲಿ ವಿವಾಹವಾದರು. ಸ್ವಲ್ಪ ಸಮಯದ ನಂತರ, ಅವರ ಪತ್ನಿಯ ನಡವಳಿಕೆಯು ಬದಲಾಯಿತು. ಆಕೆ ಅವರೊಂದಿಗೆ ಸಹಬಾಳ್ವೆ ಮಾಡಲು ನಿರಾಕರಿಸಿದರು. ನಂತರ, ಅವಳು ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಮದುವೆಯಾಗಿ ಆರು ತಿಂಗಳಾದ ಬಳಿಕ ಮತ್ತೆ ಬರುವಂತೆ ಪತ್ನಿಯನ್ನು ಕರೆದರೂ ಆಕೆ ಬರಲಿಲ್ಲ.
1994ರ ಜುಲೈನಲ್ಲಿ ಗ್ರಾಮದಲ್ಲಿ ಪಂಚಾಯತಿ ನಡೆದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದರು. ಅರ್ಜಿದಾರರು ತಮ್ಮ ಪತ್ನಿಗೆ ₹ 22,000 ಜೀವನಾಂಶ ನೀಡಿದ್ದರು. ಆದರೆ ಪತಿ ತನಗಾಗಿರುವ ಮಾನಸಿಕ ಕ್ರೌರ್ಯ, ತೊರೆದು ಹೋಗುವಿಕೆ ಮತ್ತು ವಿಚ್ಛೇದನದ ಆದೇಶವನ್ನು ಕೋರಿದಾಗ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.
ಇದನ್ನೂ ಓದಿ: Satyendra Jain: ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
ನಿಸ್ಸಂದೇಹವಾಗಿ, ಸಾಕಷ್ಟು ಕಾರಣಗಳಿಲ್ಲದೆ ಸಂಗಾತಿಯನ್ನು ಲೈಂಗಿಕ ಸಂಭೋಗಕ್ಕೆ ದೀರ್ಘಕಾಲದಿಂದ ನಿರಾಕರಿಸುವುದು ಸಂಗಾತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ. ಯಾಕೆಂದರೆ ಸಂಗಾತಿಯನ್ನು ಒತ್ತಾಯಿಸಲು ಯಾವುದೇ ಸ್ವೀಕಾರಾರ್ಹ ದೃಷ್ಟಿಕೋನವಿಲ್ಲ. ಸಂಗಾತಿಯೊಂದಿಗೆ ಜೀವನವನ್ನು ಪುನರಾರಂಭಿಸಿ, ಕಕ್ಷಿದಾರರನ್ನು ಮದುವೆ ಮೂಲಕ ಕಟ್ಟಿಹಾಕಲು ಪ್ರಯತ್ನಿಸುವುದರಿಂದ ಏನನ್ನೂ ನೀಡಲಾಗುವುದಿಲ್ಲ. ಯಾಕೆಂದರೆ ಇದು ಈಗಾಗಲೇ ಮುರಿದುಬಿದ್ದಿದೆ ಎಂದು ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಮತ್ತು ರಾಜೇಂದ್ರ ಕುಮಾರ್ ಅವರ ಪೀಠ ಹೇಳಿದೆ.
ಮಾನಸಿಕ ಕ್ರೌರ್ಯದ ಅಂಶದ ಕುರಿತು 2006 ರ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ದೋಷಗಳನ್ನು ಕಂಡುಹಿಡಿದು ಅದನ್ನು ರದ್ದುಗೊಳಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ