Sign In

By signing in or creating an account, you agree with Associated Broadcasting Company's Terms & Conditions and Privacy Policy.

Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಗೆ ವೇದಿಕೆ ಸಜ್ಜು; ಯಾವ ಪಕ್ಷಗಳಿಂದ ಬೆಂಬಲ? ಯಾರಿಂದ ವಿರೋಧ?

ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ (ಬುಧವಾರ) ಸಂಸತ್ತಿನಲ್ಲಿ ಚರ್ಚಿಸಲಾಗವುದು. ಈ ಮಸೂದೆಗೆ ಯಾರಿಂದ ಬೆಂಬಲವಿದೆ? ಯಾರು ವಿರೋಧಿಸುತ್ತಿದ್ದಾರೆ? ಎಂಬ ಕುರಿತು ಮಾಹಿತಿ ಇಲ್ಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದ್ದು, ವಿರೋಧ ಪಕ್ಷಗಳು ಈ ಮಸೂದೆಯನ್ನು "ಅಸಂವಿಧಾನಿಕ" ಎಂದು ಕರೆದಿದೆ. ಮೋದಿ ಸರ್ಕಾರ ಈ ಬಗ್ಗೆ ಚರ್ಚೆಗೆ ಮತ್ತು ಸದನದಲ್ಲಿ ಅಂಗೀಕಾರಕ್ಕೆ ಅವಕಾಶ ನೀಡಲಿದೆ. ಕೆಳಮನೆಯಲ್ಲಿ 293 ಸ್ಥಾನಗಳೊಂದಿಗೆ ಎನ್‌ಡಿಎ ಬಹುಮತ ಹೊಂದಿದೆ.

Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಗೆ ವೇದಿಕೆ ಸಜ್ಜು; ಯಾವ ಪಕ್ಷಗಳಿಂದ ಬೆಂಬಲ? ಯಾರಿಂದ ವಿರೋಧ?
Waqf Bill
Follow us
ಸುಷ್ಮಾ ಚಕ್ರೆ
| Updated By: Digi Tech Desk

Updated on:Apr 02, 2025 | 10:08 AM

ನವದೆಹಲಿ, ಏಪ್ರಿಲ್ 1: ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ, 2024 (Waqf Amendment Bill) ನಾಳೆ (ಬುಧವಾರ) ಲೋಕಸಭೆಯಲ್ಲಿ ಚರ್ಚಿಸಲಾಗುವುದು. ನಾಳೆ ಸದನದಲ್ಲಿ ಭಾರೀ ಗಲಾಟೆ ಉಂಟಾಗುವ ಸಾಧ್ಯತೆಯಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂಡಿಯಾ ಬ್ಲಾಕ್ ಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳ ಪುನರಾವರ್ತಿತ ಗದ್ದಲದ ನಡುವೆಯೂ ಇದನ್ನು ಸದನದಲ್ಲಿ ಮಂಡಿಸಿದೆ. ಪ್ರಸ್ತಾವಿತ ಶಾಸನವನ್ನು ಅಸಂವಿಧಾನಿಕ ಎಂದು ಕರೆದು ಇಂದು ವಿಪಕ್ಷಗಳ ಸಂಸದರು ಸದನದಿಂದ ಹೊರನಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ನಾಯಕರನ್ನು ಒಳಗೊಂಡ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ) 8 ಗಂಟೆಗಳ ಚರ್ಚೆಗೆ ಒಪ್ಪಿಗೆ ನೀಡಿದೆ, ಸದನದ ಅರ್ಥವನ್ನು ತೆಗೆದುಕೊಂಡ ನಂತರ ಅದನ್ನು ವಿಸ್ತರಿಸಬಹುದು ಎಂದಿದ್ದಾರೆ.

ಸಭೆಯಲ್ಲಿ ವಕ್ಫ್ ಮಸೂದೆಯ ಕುರಿತು ಖಜಾನೆ ಮತ್ತು ವಿರೋಧ ಪಕ್ಷದ ಪೀಠಗಳ ನಡುವೆ ಬಿಸಿ ಚರ್ಚೆಯ ಆರಂಭಿಕ ಲಕ್ಷಣಗಳು ಸ್ಪಷ್ಟವಾಗಿದ್ದವು. ಕಾಂಗ್ರೆಸ್ ಮತ್ತು ಇತರ ಹಲವಾರು ಇಡಿಯಾ ಬ್ಲಾಕ್ ಸದಸ್ಯರು ಸರ್ಕಾರವು ತಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಹೊರನಡೆದರು. ಆದರೆ, ರಾಜಕೀಯ ಉದ್ವಿಗ್ನತೆ ಮತ್ತು ಚರ್ಚೆಯ ಅವಧಿಯು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ, ಏಕೆಂದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಲೋಕಸಭೆಯಲ್ಲಿ ಬಲವಾದ ಬಹುಮತವನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಮಸೂದೆ ಕಾನೂನಾಗಲು, ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿಗಳು ಸಹಿ ಮಾಡುವ ಮೊದಲು ಲೋಕಸಭೆಯಲ್ಲಿ ಮತ್ತು ನಂತರ ರಾಜ್ಯಸಭೆಯಲ್ಲಿ ಅಂಗೀಕರಿಸಬೇಕಾಗುತ್ತದೆ.

ಇದನ್ನೂ ಓದಿ: ಏಪ್ರಿಲ್ 2ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ

ಇದನ್ನೂ ಓದಿ
Image
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
Image
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
Image
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
Image
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ

542 ಸಂಸದರ ಪ್ರಸ್ತುತ ಬಲವನ್ನು ಹೊಂದಿರುವ ಸದನದಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಆಗಾಗ ಸ್ವತಂತ್ರ ಸದಸ್ಯರು ಮತ್ತು ಸಣ್ಣ ಪಕ್ಷಗಳಿಂದ ಬೆಂಬಲವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ವಕ್ಫ್ ಮಸೂದೆಯನ್ನು ಬೆಂಬಲಿಸುವ ಪಕ್ಷಗಳು:

ಕಾನೂನು ಅಂಗೀಕರಿಸಲು 272 ಮತಗಳ ಅಗತ್ಯವಿರುವ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸುರಕ್ಷಿತ ಬಹುಮತವನ್ನು ಹೊಂದಿದೆ. ಎನ್‌ಡಿಎಯನ್ನು ಬೆಂಬಲಿಸುವ 293 ಸಂಸದರಲ್ಲಿ ಬಿಜೆಪಿ 240 ಸದಸ್ಯರನ್ನು ಹೊಂದಿದ್ದು, ತೆಲುಗು ದೇಶಂ ಪಕ್ಷ (ಟಿಡಿಪಿ)ದಿಂದ 16, ಜೆಡಿಯು ಪಕ್ಷದಿಂದ 12, ಶಿವಸೇನೆಯಿಂದ 7, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ದಿಂದ 5, ಮತ್ತು ಆರ್‌ಎಲ್‌ಡಿ, ಜೆಡಿಎಸ್, ಜೆಎಸ್‌ಪಿ, ಇತರ 7 ಪಕ್ಷಗಳಿಂದ ತಲಾ ಇಬ್ಬರು ಸದಸ್ಯರನ್ನು ಹೊಂದಿದೆ. ಲೋಕಸಭೆಯ ಒಟ್ಟು ಬಲ 542. ಬಿಜೆಪಿ ತನ್ನ ಮಿತ್ರಪಕ್ಷಗಳಿಂದ ಸಂಪೂರ್ಣ ಬೆಂಬಲ ಪಡೆಯುವ ವಿಶ್ವಾಸ ಹೊಂದಿದೆ. ಅದೇ ರೀತಿ, ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಮಸೂದೆಗೆ ತನ್ನ ಬೆಂಬಲವನ್ನು ಸೂಚಿಸಿದೆ.

ವಕ್ಫ್ ಮಸೂದೆಯನ್ನು ವಿರೋಧಿಸುವ ಪಕ್ಷಗಳು:

ವಿರೋಧ ಪಕ್ಷಗಳು ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಇದು ಅಸಂವಿಧಾನಿಕ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಖಂಡಿಸಿವೆ. ಹಲವಾರು ಪ್ರಮುಖ ಮುಸ್ಲಿಂ ಸಂಘಟನೆಗಳು ಮಸೂದೆಯ ವಿರುದ್ಧ ಸಕ್ರಿಯವಾಗಿ ಬೆಂಬಲವನ್ನು ಕ್ರೋಢೀಕರಿಸುತ್ತಿವೆ.

ವಕ್ಫ್ ಮಸೂದೆಯ ವಿರುದ್ಧದ ಇಂಡಿಯ ಬಣದ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್, ಲೋಕಸಭೆಯಲ್ಲಿ 99 ಸ್ಥಾನಗಳನ್ನು ಹೊಂದಿದ್ದು, ಸಮಾಜವಾದಿ ಪಕ್ಷ – 37, ಟಿಎಂಸಿ – 28, ಡಿಎಂಕೆ – 22, ಶಿವಸೇನೆ (ಯುಬಿಟಿ) – 9, ಎನ್‌ಸಿಪಿ-ಎಸ್‌ಪಿ – 8, ಸಿಪಿಐಎಂ – 4, ಆರ್‌ಜೆಡಿ – 4, ಎಎಪಿ – 3, ಜೆಎಂಎಂ – 3, ಐಯುಎಂಎಲ್ – 3, ಮತ್ತು ಜೆಕೆ ನ್ಯಾಷನಲ್ ಕಾನ್ಫರೆನ್ಸ್ – 2, ಮತ್ತು ಇತರ 13 ಸ್ಥಾನಗಳನ್ನು ಹೊಂದಿದೆ. ಇದು ಎನ್‌ಡಿಎಯ ಬಲವಾದ 293 ಸ್ಥಾನಗಳ ವಿರುದ್ಧ ಒಟ್ಟು 235 ಸ್ಥಾನಗಳನ್ನು ಹೊಂದಿದೆ. ಮತದಾನದ ಸಮಯದಲ್ಲಿ ಈ ಎಲ್ಲಾ ಪಕ್ಷಗಳ ನಾಯಕರು ಮಸೂದೆಯ ವಿರುದ್ಧ ಮತ ಚಲಾಯಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಐಎಂಐಎಂನ ಏಕೈಕ ಸಂಸದ ಅಸಾದುದ್ದೀನ್ ಓವೈಸಿ ಕೂಡ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಆದರೂ ಅವರು ಇಂಡಿಯಾ ಬಣದ ಭಾಗವಾಗಿಲ್ಲ.

ಇದನ್ನೂ ಓದಿ: Waqf Bill: ನಾಳೆ ವಕ್ಫ್ ಮಸೂದೆ ಮಂಡನೆ; ಮುಂದಿನ 3 ದಿನ ಕಾಂಗ್ರೆಸ್ ಲೋಕಸಭಾ ಸಂಸದರಿಗೆ ವಿಪ್ ಜಾರಿ

ಇನ್ನೂ ತಮ್ಮ ನಿಲುವನ್ನು ಬಹಿರಂಗಪಡಿಸದ ಇತರ ಕೆಲವು ಪಕ್ಷಗಳೆಂದರೆ, ವೈಎಸ್‌ಆರ್‌ಸಿಪಿ (4 ಸಂಸದರು) ಮತ್ತು ಶಿರೋಮಣಿ ಅಕಾಲಿ ದಳ (1 ಸಂಸದ).

ವಕ್ಫ್ ತಿದ್ದುಪಡಿ ಮಸೂದೆಯನ್ನು ಆರಂಭದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದರು. ಆಗಸ್ಟ್ 2024ರಲ್ಲಿ ಇದನ್ನು ಜೆಪಿಸಿಗೆ ಉಲ್ಲೇಖಿಸಲಾಯಿತು. ಸಮಿತಿಯಲ್ಲಿರುವ ಎಲ್ಲಾ 11 ವಿರೋಧ ಪಕ್ಷದ ಸಂಸದರ ಆಕ್ಷೇಪಣೆಗಳ ಹೊರತಾಗಿಯೂ ಸಂಸದೀಯ ಸಮಿತಿಯು ಬಹುಮತದ ಮತದಿಂದ ವರದಿಯನ್ನು ಅಂಗೀಕರಿಸಿತು. 655 ಪುಟಗಳ ಸಮಗ್ರ ವರದಿಯನ್ನು ಈ ತಿಂಗಳ ಆರಂಭದಲ್ಲಿ ಸಂಸತ್ತಿನ ಎರಡೂ ಸದನಗಳಿಗೆ ಮಂಡಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Tue, 1 April 25

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ