ಆಯುರ್ವೇದ, ಸಾಂಪ್ರದಾಯಿಕ ಔಷಧ ಕ್ಷೇತ್ರದ ಬಗ್ಗೆ ಪ್ರಧಾನಿ ಮೋದಿ- ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಚರ್ಚೆ
ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಇಂದು ಭಾರತಕ್ಕೆ 5 ದಿನಗಳ ಪ್ರವಾಸಕ್ಕೆ ಆಗಮಿಸಿದ್ದಾರೆ. ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲು ಚಿಲಿಯ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ. ಭಾರತ ಭೇಟಿಯಲ್ಲಿರುವ ಬೋರಿಕ್ ಅವರೊಂದಿಗೆ ಸರ್ಕಾರಿ ಅಧಿಕಾರಿಗಳು ಮತ್ತು ವ್ಯಾಪಾರ ಮುಖಂಡರು ಸೇರಿದಂತೆ ಉನ್ನತ ಮಟ್ಟದ ನಿಯೋಗವೂ ಭಾರತಕ್ಕೆ ಬಂದಿದೆ. ಮೋದಿ ಮತ್ತು ಬೋರಿಕ್ ಅವರ ಭೇಟಿಯ ಸಮಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು.

ನವದೆಹಲಿ, ಏಪ್ರಿಲ್ 1: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹೈದರಾಬಾದ್ ಹೌಸ್‌ನಲ್ಲಿ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ (Gabriel Boric) ಅವರನ್ನು ಬರಮಾಡಿಕೊಂಡರು. ಆರ್ಥಿಕ, ವಾಣಿಜ್ಯ ಮತ್ತು ಸಾಮಾಜಿಕ ವಲಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಬೋರಿಕ್ ತಮ್ಮ 5 ದಿನಗಳ ಭಾರತ ಭೇಟಿಯನ್ನು ಪ್ರಾರಂಭಿಸಿದರು. ಭಾರತ-ಚಿಲಿಯ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಕುರಿತು ಪ್ರಧಾನಿ ಮೋದಿ ಮತ್ತು ಚಿಲಿಯ ಅಧ್ಯಕ್ಷರು ಚರ್ಚೆ ನಡೆಸಿದರು.
ವೇಳಾಪಟ್ಟಿಯ ಪ್ರಕಾರ, ಚಿಲಿಯ ಅಧ್ಯಕ್ಷ ಬೋರಿಕ್ ಏಪ್ರಿಲ್ 5ರಂದು ಚಿಲಿಗೆ ತೆರಳುವ ಮೊದಲು ಆಗ್ರಾ, ಮುಂಬೈ ಮತ್ತು ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚಿಲಿಯ ಅಧ್ಯಕ್ಷರು ನವದೆಹಲಿಯ ಹೈದರಾಬಾದ್ ಹೌಸ್‌ನಿಂದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
Junto a nuestra delegación de ministros, parlamentarias y parlamentarios rendimos honores a Mahatma Gandhi en el Raj Ghat, memorial que se erige en su honor en Nueva Delhi. Su legado nos recuerda que con India no solo tenemos intereses en común y un futuro de grandes… pic.twitter.com/rKCPCfDOFG
— Gabriel Boric Font (@GabrielBoric) April 1, 2025
ಸಮಗ್ರ ವ್ಯಾಪಾರ ಮಾತುಕತೆಗಳ ಕುರಿತು ಮಾತುಕತೆ:
ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಲ್ಯಾಟಿನ್ ಅಮೆರಿಕಾದಲ್ಲಿ ಚಿಲಿ ಭಾರತದ ಪ್ರಮುಖ ಪಾಲುದಾರ ಎಂದು ಬಣ್ಣಿಸಿದರು. ಭಾರತವು ದೇಶವನ್ನು ಅಂಟಾರ್ಕ್ಟಿಕಾಗೆ ಪ್ರವೇಶ ದ್ವಾರವಾಗಿ ನೋಡುತ್ತದೆ. ಎರಡೂ ದೇಶಗಳು ಪರಸ್ಪರ ಪ್ರಯೋಜನಕಾರಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸುತ್ತವೆ. “ಇಂದು, ಪರಸ್ಪರ ಪ್ರಯೋಜನಕಾರಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಕುರಿತು ಚರ್ಚೆಗಳನ್ನು ಪ್ರಾರಂಭಿಸಲು ನಾವು ನಮ್ಮ ತಂಡಗಳಿಗೆ ನಿರ್ದೇಶನ ನೀಡಿದ್ದೇವೆ” ಎಂದು ಮೋದಿ ಮಾತುಕತೆಯ ನಂತರ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Desde Nueva Delhi, junto al Primer Ministro Narendra Modi, anunciamos el inicio de las negociaciones para llegar a un Acuerdo de Asociación Económica Integral, equivalente a un tratado de libre comercio con India, una tremenda noticia que viene a formalizar nuestro compromiso de… pic.twitter.com/0U1rPWCoeS
— Gabriel Boric Font (@GabrielBoric) April 1, 2025
ಇದನ್ನೂ ಓದಿ: ಭಾರತದ ಮೊದಲ ಖಾಸಗಿ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಇದಕ್ಕೂ ಮೊದಲು, ಫಾಂಟ್ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ಅವರು ಎಕ್ಸ್ನಲ್ಲಿ ತಮ್ಮ ಭೇಟಿಯ ಫೋಟೋಗಳನ್ನು ಹಂಚಿಕೊಂಡರು. “ನಮ್ಮ ಮಂತ್ರಿಗಳು ಮತ್ತು ಸಂಸದರ ನಿಯೋಗದೊಂದಿಗೆ ನಾವು ನವದೆಹಲಿಯಲ್ಲಿ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದ್ದೇವೆ. ಅವರ ಪರಂಪರೆಯು ಭಾರತದೊಂದಿಗೆ ನಾವು ಸಾಮಾನ್ಯ ಆಸಕ್ತಿಗಳು ಮತ್ತು ನಮ್ಮ ಜನರಿಗೆ ಉತ್ತಮ ಅವಕಾಶಗಳ ಭವಿಷ್ಯವನ್ನು ಹಂಚಿಕೊಳ್ಳುವುದಲ್ಲದೆ, ಮೂಲಭೂತ ಮೌಲ್ಯಗಳನ್ನು ಸಹ ಹಂಚಿಕೊಂಡಿದ್ದೇವೆ ಎಂದು ನಮಗೆ ನೆನಪಿಸುತ್ತದೆ” ಎಂದಿದ್ದಾರೆ.
Addressing the press meet with President @GabrielBoric of Chile. https://t.co/6Fr9K7dUQE
— Narendra Modi (@narendramodi) April 1, 2025
“ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸುತ್ತಾರೆ. ಅವರ ಶಾಂತಿ ಮತ್ತು ಅಹಿಂಸೆಯ ಶಾಶ್ವತ ಸಂದೇಶವನ್ನು ಗೌರವಿಸುತ್ತಾರೆ. ಮಹಾತ್ಮರ ಶಾಶ್ವತ ಪರಂಪರೆ ಮತ್ತು ಒಗ್ಗೂಡಿಸುವ ಹಂಚಿಕೆಯ ಮೌಲ್ಯಗಳ ಬಗ್ಗೆ ಒಂದು ಕ್ಷಣ ಚಿಂತನೆ” ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ನಮ್ಮ ತಂದೆಯಿದ್ದಂತೆ; ಪ್ರಧಾನಿಯ ನಿವೃತ್ತಿ ಬಗ್ಗೆ ಮಾತನಾಡಿದ ಸಂಜಯ್ ರಾವತ್ ವಿರುದ್ಧ ದೇವೇಂದ್ರ ಫಡ್ನವಿಸ್ ವಾಗ್ದಾಳಿ
ಚಿಲಿಯ ಅಧ್ಯಕ್ಷರೊಂದಿಗೆ ಸಚಿವರು, ಸಂಸತ್ ಸದಸ್ಯರು, ಹಿರಿಯ ಅಧಿಕಾರಿಗಳು, ವ್ಯಾಪಾರ ಮುಖಂಡರು, ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತ-ಚಿಲಿ ವಿನಿಮಯದಲ್ಲಿ ತೊಡಗಿರುವ ಸಾಂಸ್ಕೃತಿಕ ವ್ಯಕ್ತಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗವಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ