ಮೋದಿ ನಮ್ಮ ತಂದೆಯಿದ್ದಂತೆ; ಪ್ರಧಾನಿಯ ನಿವೃತ್ತಿ ಬಗ್ಗೆ ಮಾತನಾಡಿದ ಸಂಜಯ್ ರಾವತ್ ವಿರುದ್ಧ ದೇವೇಂದ್ರ ಫಡ್ನವಿಸ್ ವಾಗ್ದಾಳಿ
ಪ್ರಧಾನಿ ಮೋದಿ 11 ವರ್ಷಗಳ ಬಳಿಕ ಅದರಲ್ಲೂ ಭಾರತದ ಪ್ರಧಾನಿಯಾದ ನಂತರ ಮೊದಲ ಬಾರಿಗೆ ಭಾನುವಾರ ನಾಗ್ಪುರದ ಆರ್‌ಎಸ್‌ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು. ಈ ಬಗ್ಗೆ ಹೇಳಿಕೆ ನೀಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಪ್ರಧಾನಿ ಮೋದಿ ತಮ್ಮ ನಿವೃತ್ತಿಯ ಪ್ಲಾನ್ ಘೋಷಿಸಲು ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದರು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಜಯ್ ರಾವತ್ ಅವರದ್ದು 'ಮೊಘಲ್ ಸಂಸ್ಕೃತಿ' ಎಂದು ಟೀಕಿಸಿದ್ದಾರೆ. 'ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರು ಇರುವಾಗ ಕಿರಿಯರು ಉತ್ತರಾಧಿಕಾರದ ಬಗ್ಗೆ ಯೋಚಿಸುವುದಿಲ್ಲ. ಅದು ಮೊಘಲ್ ಸಂಸ್ಕೃತಿ' ಎಂದು ಫಡ್ನವೀಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಮಾರ್ಚ್ 31: ಭಾನುವಾರ ಪ್ರಧಾನಿ ನರೇಂದ್ರ ಮೋದಿ ನಾಗ್ಪುರದ ಆರ್‌ಎಸ್‌ಎಸ್ ಕಚೇರಿಗೆ ತೆರಳಿದ್ದರು. ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ ಮೊದಲ ಪ್ರಧಾನಿಯೆಂಬ ಹೆಗ್ಗಳಿಕೆ ಮೋದಿಯವರದ್ದು. ಆದರೆ, ಈ ಬಗ್ಗೆ ಟೀಕಿಸಿರುವ ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut), ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ಪಿಎಂ ಸ್ಥಾನ ತ್ಯಜಿಸುತ್ತಾರೆಯೇ, ನಿವೃತ್ತರಾಗುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಮುಂದಿನ ಪ್ರಧಾನಮಂತ್ರಿಯನ್ನು ಆರ್‌ಎಸ್‌ಎಸ್ ಆಯ್ಕೆ ಮಾಡುತ್ತದೆ. ಆರ್‌ಎಸ್‌ಎಸ್ ದೇಶದಲ್ಲಿ ಬದಲಾವಣೆ ಬಯಸುತ್ತಿದೆ. ಹೀಗಾಗಿ, ಮೋದಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂಬ ಹೇಳಿಕೆಯನ್ನೂ ಸಂಜಯ್ ರಾವತ್ ನೀಡಿದ್ದರು. ಇದನ್ನು ತಳ್ಳಿಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis), “ಮೋದಿ ತಮ್ಮ ಉತ್ತರಾಧಿಕಾರಿಯನ್ನು ಹುಡುಕುವ ಅಗತ್ಯವಿಲ್ಲ. ಅವರು ನಮ್ಮ ನಾಯಕ ಮತ್ತು ನಮ್ಮ ನಾಯಕರಾಗಿ ಮುಂದಿನ ಅವಧಿಗೂ ಮುಂದುವರಿಯುತ್ತಾರೆ” ಎಂದು ನಾಗ್ಪುರದಲ್ಲಿ ಘೋಷಿಸಿದರು.
ಸೆಪ್ಟೆಂಬರ್ 17ರಂದು 75 ವರ್ಷ ತುಂಬಲಿರುವ ಪ್ರಧಾನಿ ಮೋದಿ ಆಡಳಿತ ಪಕ್ಷದ ಅಘೋಷಿತ ನಿಯಮಕ್ಕೆ ಅನುಗುಣವಾಗಿ ಈ ವರ್ಷ ರಾಜೀನಾಮೆ ನೀಡುತ್ತಾರೆ ಎಂಬ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದ್ದಾರೆ. ಬಿಜೆಪಿಯಲ್ಲಿ ಅಂತಹ ಯಾವುದೇ ನಿಯಮ ಅಸ್ತಿತ್ವದಲ್ಲಿಲ್ಲ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಸದಸ್ಯರು ಆ ‘ವಯಸ್ಸಿನ ಮಿತಿ’ಯನ್ನು ಮೀರಿದ್ದಾರೆ ಎಂದು ಪಕ್ಷ ಹೇಳಿದೆ. 80 ವರ್ಷದ ಬಿಹಾರ ನಾಯಕ ಜಿತನ್ ರಾಮ್ ಮಾಂಝಿ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ಇತರರು ಆ ಮಿತಿಯ ಒಂದು ಅಥವಾ ಎರಡು ವರ್ಷಗಳ ಒಳಗೆ ಇದ್ದಾರೆ.
#WATCH | On Delhi CM Arvind Kejriwal’s ‘Amit Shah will be the PM, if BJP wins’ remark, Union Home Minister Amit Shah says “I want to say this to Arvind Kejriwal and company and INDI alliance that nothing as such is mentioned in BJP’s constitution. PM Modi is only going to… https://t.co/eJgCHox2Q7 pic.twitter.com/bKJQ4OtMhe
— ANI (@ANI) May 11, 2024
ಇದನ್ನೂ ಓದಿ: ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್‌ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಕಳೆದ ವರ್ಷದ ಚುನಾವಣೆಯ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿಯಾಗಿ ಘೋಷಿಸಲು ಸಿದ್ಧಪಡಿಸಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡಿತ್ತು.ಆಗ ಮೋದಿ ಅವರ ‘ಭವಿಷ್ಯ’ದ ಬಗ್ಗೆ ಗುಸುಗುಸು ಮೂಡಿತ್ತು. ಇದೀಗ ಪ್ರಧಾನಿ ಮೋದಿ ನಾಗ್ಪುರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಂತರ ಮತ್ತೆ ಆ ಬಗ್ಗೆ ಚರ್ಚೆಗಳು ಶುರುವಾಗಿವೆ. ಆರ್‌ಎಸ್‌ಎಸ್ ಅನ್ನು ಆಡಳಿತ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದೆ.
“PM #Modi went to RSS HQ to submit his resignation letter as RSS wants a change in leadership.”
A few words for this Joker Sanjay Raut please 🙏 pic.twitter.com/Wd3mZN7LWd
— BhikuMhatre (@MumbaichaDon) March 31, 2025
“ಪಿಎಂ ಮೋದಿ ಸೆಪ್ಟೆಂಬರ್‌ನಲ್ಲಿ ತಮ್ಮ ನಿವೃತ್ತಿ ಪ್ಲಾನ್ ಘೋಷಿಸಲು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹೋಗಿರಬಹುದು” ಎಂದು ಸಂಜಯ್ ರಾವತ್ ಘೋಷಿಸಿದ್ದರು. ಅವರ ಉತ್ತರಾಧಿಕಾರಿಯೂ ಮಹಾರಾಷ್ಟ್ರದವರಾಗಿರುತ್ತಾರೆ. ಮೋದಿಯವರ ಉತ್ತರಾಧಿಕಾರಿ ಮಹಾರಾಷ್ಟ್ರದವರಾಗಿರುತ್ತಾರೆ. ಆ ಬಗ್ಗೆ ಆರ್‌ಎಸ್‌ಎಸ್ ನಿರ್ಧರಿಸುತ್ತದೆ. ನಾನು ಅರ್ಥಮಾಡಿಕೊಂಡಂತೆ ‘ಸಂಘ ಪರಿವಾರ’ ದೇಶದ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತಿದೆ. ಪ್ರಧಾನಿ ಮೋದಿಯವರ ಸಮಯ ಮುಗಿದಿದೆ. ಅವರು ಬದಲಾವಣೆಯನ್ನು ಬಯಸುತ್ತಾರೆ ಮತ್ತು ಮುಂದಿನ ಬಿಜೆಪಿ ಮುಖ್ಯಸ್ಥರನ್ನು ಆಯ್ಕೆ ಮಾಡಲು ಬಯಸುತ್ತಾರೆ” ಎಂದು ಸಂಜಯ್ ರಾವತ್ ಹೇಳಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಇದಕ್ಕೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವೀಸ್, “2029ರಲ್ಲಿ ನಾವು ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡುತ್ತೇವೆ. ಮೋದಿ ನಮ್ಮ ತಂದೆಯಿದ್ದಂತೆ. ನಮ್ಮ ಸಂಸ್ಕೃತಿಯಲ್ಲಿ ತಂದೆ ಜೀವಂತವಾಗಿರುವಾಗ ಉತ್ತರಾಧಿಕಾರದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅದು ಮೊಘಲ್ ಸಂಸ್ಕೃತಿ. ಅದನ್ನು ಚರ್ಚಿಸಲು ಈಗ ಸಮಯ ಬಂದಿಲ್ಲ” ಎಂದು ಅವರು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Mon, 31 March 25