ಸೂಟ್‌ಕೇಸ್‌ನಲ್ಲಿ ಮುಂಬೈ ಬಾಲಕಿಯ ಶವ ಪತ್ತೆ: ಒಂದು ವಾರದ ನಂತರ ಇಬ್ಬರ ಬಂಧನ

ರಸ್ತೆಯ ಎಸೆದಿರುವ ಸೂಟ್‌ಕೇಸ್‌ನಲ್ಲಿ ಹದಿಹರೆಯದ ಹುಡುಗಿಯ ಶವ ಪತ್ತೆಯಾಗಿದೆ. ಇದೀಗ ಒಂದು ವಾರದ ನಂತರ, ಅಪರಾಧದ ತನಿಖೆ ನಡೆಸುತ್ತಿರುವ ಪೊಲೀಸರು

ಸೂಟ್‌ಕೇಸ್‌ನಲ್ಲಿ ಮುಂಬೈ ಬಾಲಕಿಯ ಶವ ಪತ್ತೆ:  ಒಂದು ವಾರದ ನಂತರ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Sep 03, 2022 | 12:47 PM

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಲಿವ್ ಪ್ರದೇಶದಲ್ಲಿ ರಸ್ತೆಯ ಎಸೆದಿರುವ ಸೂಟ್‌ಕೇಸ್‌ನಲ್ಲಿ ಹದಿಹರೆಯದ ಹುಡುಗಿಯ ಶವ ಪತ್ತೆಯಾಗಿದೆ. ಇದೀಗ ಒಂದು ವಾರದ ನಂತರ, ಅಪರಾಧದ ತನಿಖೆ ನಡೆಸುತ್ತಿರುವ ಪೊಲೀಸರು ಗುಜರಾತ್‌ನ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಮುಂಬೈನ ಅಂಧೇರಿಯ 14 ವರ್ಷದ ಶಾಲಾ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ವಿದ್ಯಾರ್ಥಿನಿಯ ದೇಹದಲ್ಲಿ ಅನೇಕ ಇರಿತದ ಗಾಯಗಳಾಗಿವೆ. ಆಗಸ್ಟ್ 26 ರಂದು ನೈಗಾಂವ್ ಬಳಿ ರಸ್ತೆ ಬದಿಯ ಪೊದೆಯಲ್ಲಿ ಸೂಟ್‌ಕೇಸ್‌ ಒಳಗೆ ಹೊದಿಕೆಯಲ್ಲಿ ಸುತ್ತಿ ತುಂಬಲಾಗಿತ್ತು. ಬಾಲಕಿ ಆಗಸ್ಟ್ 25 ರಂದು ಶಾಲೆಗೆ ತೆರಳಿದ ನಂತರ ನಾಪತ್ತೆಯಾಗಿದ್ದಳು, ನಂತರ ಮುಂಬೈ ಪೊಲೀಸರು ಅಪಹರಣದ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಕೊಲೆಯಲ್ಲಿ ಇಬ್ಬರ ಪಾತ್ರವಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೀರಾ ಭಯಂದರ್ ವಸೈ ವಿರಾರ್ (MBVV) ಪೊಲೀಸರು ಸುಮಾರು 21 ವರ್ಷ ವಯಸ್ಸಿನ ಇಬ್ಬರು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆರೋಪಿ ಇಬ್ಬರನ್ನು ಶುಕ್ರವಾರ ರಾತ್ರಿ ಗುಜರಾತ್‌ನ ಪಾಲನ್‌ಪುರದಲ್ಲಿ ಬಂಧಿಸಲಾಗಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Published On - 12:47 pm, Sat, 3 September 22