ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಲು ಮುಂಬೈ ಹೈಕೋರ್ಟ್ ಆದೇಶ, ಜೊತೆಗೆ ಜಾಮೀನು ಸಹ ಪ್ರಾಪ್ತಿ!

| Updated By: ಸಾಧು ಶ್ರೀನಾಥ್​

Updated on: Oct 17, 2022 | 1:23 PM

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಇದಕ್ಕೆ ಕೋರ್ಟ್ ಷರತ್ತು ವಿಧಿಸಿದೆ. ಅತ್ಯಾಚಾರ ಬಾಧಿತ ಮಹಿಳೆಯನ್ನು ಮದುವೆಯಾಗಬೆಕೆಂದು ಮುಂಬೈ ಕೋರ್ಟ್ ಆದೇಶ ನೀಡಿದೆ! ಆರೋಪಿಯೂ ಸಹ ಮದುವೆಯಾಗುವುದಾಗಿ ಕೋರ್ಟ್​ಗೆ ತಿಳಿಸಿದ್ದಾನೆ.

ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಲು ಮುಂಬೈ ಹೈಕೋರ್ಟ್ ಆದೇಶ, ಜೊತೆಗೆ ಜಾಮೀನು ಸಹ ಪ್ರಾಪ್ತಿ!
ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಲು ಮುಂಬೈ ಕೋರ್ಟ್ ಆದೇಶ, ಜೊತೆಗೆ ಜಾಮೀನು ಸಹ ಪ್ರಾಪ್ತಿ!
Follow us on

ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ (Bombay High Court) ಜಾಮೀನು ನೀಡಿದೆ. ಆದರೆ ಇದಕ್ಕೆ ಕೋರ್ಟ್ ಷರತ್ತು ವಿಧಿಸಿದೆ. ಅತ್ಯಾಚಾರ ಬಾಧಿತ ಮಹಿಳೆಯನ್ನು ಮದುವೆಯಾಗಬೆಕೆಂದು ಮುಂಬೈ ಹೈಕೋರ್ಟ್ ಆದೇಶ ನೀಡಿದೆ! ಆರೋಪಿಯೂ ಸಹ ಮದುವೆಯಾಗುವುದಾಗಿ ಕೋರ್ಟ್​ಗೆ ತಿಳಿಸಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಇದಕ್ಕೆ ಕೋರ್ಟ್ ಷರತ್ತು ವಿಧಿಸಿದೆ. ರೇಪ್ ಸಂತ್ರಸ್ತೆ ಒಂದು ವರ್ಷದೊಳಗೆ ಪತ್ತೆಯಾದರೆ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂದು ಷರತ್ತು ವಿಧಿಸಿದೆ. ಆದರೆ, ಒಂದು ವರ್ಷದ ಬಳಿಕ ಬಾಧಿತ ಯುವತಿ ಪತ್ತೆಯಾಗದಿದ್ದಲ್ಲಿ ಆರೋಪಿಯು ಈ ಷರತ್ತಿಗೆ ಬದ್ಧವಾಗಿರಬೇಕಿಲ್ಲ ಎಂದೂ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಪೀಠವು ಅಕ್ಟೋಬರ್ 12 ರಂದು ನೀಡಿದ ಆದೇಶದಲ್ಲಿ ಹೇಳಿದೆ.

ಈ ಹಿಂದೆ ಆರೋಪಿ ಮತ್ತು 22 ವರ್ಷದ ಮಹಿಳೆ (ಸಂತ್ರಸ್ತೆ) ಒಮ್ಮತದ ಸಂಬಂಧದಲ್ಲಿದ್ದರು (consensual relationship). ಆದರೆ ಆ ಯುವತಿ ಗರ್ಭಿಣಿ ಎಂದು ತಿಳಿದ ನಂತರ ಆರೋಪಿಯು ಆಕೆಯನ್ನು ದೂರ ಮಾಡಲು ಶುರು ಮಾಡಿದ. ಆ ವೇಳೆ, ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಬಾಧಿತ ಮಹಿಳೆ 2020 ರ ಫೆಬ್ರವರಿಯಲ್ಲಿ ಆರೋಪಿಯ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿತ್ತು. ತಮ್ಮ ದೂರಿನಲ್ಲಿ, ಇಬ್ಬರೂ 2018 ರಿಂದ ಪರಸ್ಪರ ಸಂಬಂಧ ಹೊಂದಿದ್ದೆವು. ಈ ವಿಷಯ ತಮ್ಮ ತಮ್ಮ ಕುಟುಂಬಗಳಿಗೆ ತಿಳಿದಿತ್ತು. ಮತ್ತು ಅದನ್ನು ಕುಟುಂಬವರ್ಗ ವಿರೋಧಿಸಲಿಲ್ಲ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದರು.

2019 ರಲ್ಲಿ, ಬಾಧಿತ ಮಹಿಳೆಯು ತಾನು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅದನ್ನು ಆರೋಪಿಗೆ ತಿಳಿಸಿದ್ದರು. ಆದರೆ ಆತ ಯುವತಿಯನ್ನು ಅವಾಯ್ಡ್​ ಮಾಡಲು ಪ್ರಾರಂಭಿಸಿದ. ಸರಿಯಾಗಿ ಇದೇ ವೇಳೆ ಬಾಧಿತ ಮಹಿಳೆಯು ಗರ್ಭಾವಸ್ಥೆ ಬಗ್ಗೆ ತನ್ನ ಕುಟುಂಬದ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ತನ್ನ ಮನೆಯನ್ನು ತೊರೆದು ದೂರವಾಗಿದ್ದಾಳೆ. ಅದಾದ ಮೇಲೆ ಜನವರಿ 27, 2020 ರಂದು ಬಾಧಿತ ಮಹಿಳೆಯು ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು.

ಜನವರಿ 30 ರಂದು ಮಹಿಳೆಯು ಮಗುವನ್ನು ಒಂದು ಭವನದ ಮುಂದೆ ಬಿಟ್ಟು ಹೋಗಿದ್ದರು. ಈ ವಿಷಯವಾಗಿ, ಮಗುವನ್ನು ತ್ಯಜಿಸಿದ್ದಕ್ಕೆ ಆಕೆಯ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. “ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಅರಿತು ಮಹಿಳೆ ಬಹುಶಃ ನ್ಯಾಯದ ಹಾದಿಯಿಂದ ಪಲಾಯನ ಮಾಡಲು ಕಾರಣವಾಗಿರಬಹುದು” ಎಂದು ನ್ಯಾಯಮೂರ್ತಿ ಡಾಂಗ್ರೆ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ!

ಮಹಿಳೆಯನ್ನು ಮದುವೆಯಾಗಲು ಮತ್ತು ಮಗುವಿನ ಪಿತೃತ್ವ ಜವಾಬ್ದಾರಿಯನ್ನು ಅಂಗೀಕರಿಸಲು ತಾನು ಸಿದ್ಧನಿದ್ದೇನೆ ಎಂದು ಆರೋಪಿಯು ಹೈಕೋರ್ಟ್‌ಗೆ ಭರವಸೆ ನೀಡಿದ್ದಾನೆ. ಆದರೆ ಮಹಿಳೆ ಪತ್ತೆಯಾಗಿಲ್ಲ ಮತ್ತು ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗಿದ್ದ ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ಸಂತ್ರಸ್ತೆಯನ್ನು ಶೀಘ್ರವೇ ಪತ್ತೆ ಹಚ್ಚಿದರೆ, ಅಂದರೆ ಒಂದು ವರ್ಷದ ಅವಧಿಯಲ್ಲಿ ಪತ್ತೆಯಾದರೆ ಆರೋಪಿಯು ಆಕೆಯೊಂದಿಗೆ ವಿವಾಹವಾಗುತ್ತಾನೆ. ಆದರೆ ಒಂದು ವರ್ಷ ಬಳಿಕ ಆರೋಪಿಯು ಈ ಷರತ್ತಿಗೆ ಬದ್ಧವಾಗಿರಬೇಕಿಲ್ಲ” ಎಂದು ಕೋರ್ಟ್​ ಆದೇಶದಲ್ಲಿ ಉಲ್ಲೇಖಿಸಿದೆ.

Published On - 1:21 pm, Mon, 17 October 22