ಮುಂಬೈ: ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಇದ್ದಾಗಿನ ಖಾಸಗಿ ಕ್ಷಣಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪುರುಷನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮತ್ತು ಅವುಗಳನ್ನು ಡಿಲೀಟ್ ಮಾಡುವ ನೆಪದಲ್ಲಿ ಆಕೆಯಿಂದ 50,000 ರೂ. ಹಣವನ್ನು ಪಡೆದಿದ್ದ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಆರೋಪಿ ಜೋಶುವಾ ಫ್ರಾನ್ಸಿಸ್ ದಂಪತಿಯ ಸ್ನೇಹಿತ. ಆ ಮಹಿಳೆಯ ಗಂಡ ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದ. ಅವನು ಮದ್ಯವ್ಯಸನಿಯಾಗಿದ್ದ.
ಆ ಮಹಿಳೆ ತಮ್ಮ ಖಾಸಗಿ ಕ್ಷಣಗಳನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿ ಗೆಳೆಯ ಫ್ರಾನ್ಸಿಸ್‌ಗೆ ಕಳುಹಿಸಿದ್ದಳು. ಬಳಿಕ ಆತ ಆ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡುವಂತೆ ಆಕೆ ಮನವಿ ಮಾಡಿದ್ದಳು. ಅದಕ್ಕೆ ಆತ 50 ಸಾವಿರ ರೂ. ಬೇಡಿಕೆಯಿಟ್ಟಿದ್ದ.
ಇದನ್ನೂ ಓದಿ: Shocking News: ಗೆಳೆಯನ ತಾಯಿಯ ಮೇಲೆ ಯುವಕನಿಂದ ಅತ್ಯಾಚಾರ; ಹೇಯ ಕೃತ್ಯ ಬಯಲು
ಇದರಿಂದ ಆಕೆಗೆ ಬಹಳ ಆತಂಕವಾಗಿತ್ತು. ತನ್ನ ಸ್ನೇಹಿತರಲ್ಲಿ ಒಬ್ಬರಾದ ವಿಕಾಸ್ ಅವರು ಸೈಬರ್‌ಸ್ಪೇಸ್‌ನಲ್ಲಿ ಪರಿಣಿತರಾಗಿದ್ದಾರೆ ಮತ್ತು ಅವರನ್ನು ಅದನ್ನು ಡಿಲೀಟ್ ಮಾಡಬಲ್ಲರು ಎಂದು ಫ್ರಾನ್ಸಿಸ್ ಆ ಮಹಿಳೆಗೆ ಹೇಳಿದ್ದ. ಬಳಿಕ ಫ್ರಾನ್ಸಿಸ್ ವಾಟ್ಸಾಪ್ನಲ್ಲಿ ತಾನೇ ಆಕೆಗೆ ಕರೆ ಮಾಡಿ ವಿಕಾಸ್ ಎಂದು ಪರಿಚಯಿಸಿಕೊಂಡಿದ್ದ. ಕಂಟೆಂಟ್ ತೆಗೆದು ಹಾಕುವುದಾಗಿ ಹೇಳಿ 50 ಸಾವಿರ ರೂ. ನೀಡಬೇಕೆಂದು ಹೇಳಿದ್ದ.
ಇದನ್ನೂ ಓದಿ: ಹೆತ್ತ ತಾಯಿಯನ್ನೇ ಕೊಂದು ನೇಣು ಹಾಕಿದ ಮಕ್ಕಳು; ಆ ಒಂದು ತಪ್ಪಿನಿಂದ ಕೊಲೆ ಬಯಲು
ಆದರೆ ಅದಾದ ಕೆಲವು ದಿನಗಳ ನಂತರ, ಆ ಫೋಟೋಗಳು ಮತ್ತು ವೀಡಿಯೊಗಳು ಇನ್ಸ್ಟಾಗ್ರಾಂನಲ್ಲಿ ಹರಿದಾಡತೊಡಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ಫ್ರಾನ್ಸಿಸ್ ವಿರುದ್ಧ ದೂರು ನೀಡಿದ್ದಾರೆ. ಫ್ರಾನ್ಸಿಸ್ ಆ ಮಹಿಳೆಯ ಪತಿಯ ವಿಡಿಯೋ, ಫೋಟೋಗಳನ್ನು ಪಡೆದುಕೊಂಡಿದ್ದಾಗಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ