Murder: ಲವರ್ ಜೊತೆ ಮಾತಾಡಿದ್ದಕ್ಕೆ ಯುವಕನ ಕಗ್ಗೊಲೆ; ಹಂತಕನನ್ನು ಪತ್ತೆಹಚ್ಚಿದ್ದೇ ಒಂದು ರೋಚಕ ಕತೆ

Crime News Today | ಆರೋಪಿಗಳನ್ನು ಹಿಡಿಯಲು 170 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿರುವ ಪೊಲೀಸರು 230ಕ್ಕೂ ಹೆಚ್ಚು ಜನರ ಬಳಿ ಮಾಹಿತಿ ಕಲೆಹಾಕಿದ್ದಾರೆ. ಕೊಲೆ ನಡೆದ 5 ದಿನಗಳ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ.

Murder: ಲವರ್ ಜೊತೆ ಮಾತಾಡಿದ್ದಕ್ಕೆ ಯುವಕನ ಕಗ್ಗೊಲೆ; ಹಂತಕನನ್ನು ಪತ್ತೆಹಚ್ಚಿದ್ದೇ ಒಂದು ರೋಚಕ ಕತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 12, 2021 | 7:30 PM

ನವದೆಹಲಿ: ಆತನ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮಾತನಾಡಿದ ಒಂದೇ ಒಂದು ತಪ್ಪಿಗೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ತನ್ನ ಮಾಜಿ ಪ್ರೇಯಸಿಯೊಂದಿಗೆ ಕ್ಲೋಸ್ ಆಗಿದ್ದ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಯುವಕರನ್ನು ಹಿಡಿಯಲು ಪೊಲೀಸರು ಬರೋಬ್ಬರಿ 600 ಕಿ.ಮೀ. ಸಂಚರಿಸಿದ್ದಾರೆ. ಆ ಕೊಲೆಗಾರರು ಸೆರೆ ಸಿಕ್ಕಿದ್ದು ಹೇಗೆಂಬ ರೋಚಕ ಕತೆ ಇಲ್ಲಿದೆ…

ಆಗಸ್ಟ್​ 4ರಂದು ನಡೆದಿದ್ದ ಕೊಲೆಯ ಬಗ್ಗೆ ಪೊಲೀಸರಿಗೆ ಫೋನ್ ಬಂದಿತ್ತು. ಹಂತಕರಿಗಾಗಿ ಉತ್ತರ ಪ್ರದೇಶದ 6 ಜಿಲ್ಲೆಗಳನ್ನು ಸುತ್ತಿದ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಹಿಡಿದಿದ್ದಾರೆ. ಮಂಗೋಲಿ ಏರಿಯಾದಲ್ಲಿ ನಡೆದಿದ್ದ ಕೊಲೆಯ ಆರೋಪಿಗಳನ್ನು ಬಂಧಿಸಲಾಗಿದೆ. ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಗಾಗ ಮಾತನಾಡುತ್ತಿದ್ದ ಆ ಯುವಕನಿಂದಲೇ ತಮ್ಮಿಬ್ಬರ ಬ್ರೇಕಪ್ ಆಗಿರಬಹುದು ಎಂದು ಅನುಮಾನಗೊಂಡ ಯುವಕ ತನ್ನ ತಮ್ಮನ ಜೊತೆ ಸೇರಿ ಆ ಯುವಕನ್ನೇ ಕೊಲೆ ಮಾಡಲು ನಿರ್ಧರಿಸಿದ್ದ. ಆದರೆ, ಆ ಯುವಕ ನನಗೆ ಒಂದೆರಡು ಬಾರಿ ಸಿಕ್ಕು ಪರಿಚಿತನಾಗಿದ್ದ, ಆತನ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹಂತಕನ ಮಾಜಿ ಪ್ರೇಯಸಿ ಹೇಳಿದ್ದಾಳೆ. ಕೊಲೆಗಾರನ ಅನುಮಾನದಿಂದ ಅಮಾಯಕ ಯುವಕನ ಜೀವ ಹೋಗಿದೆ.

23 ವರ್ಷದ ಯುವಕನೊಬ್ಬನನ್ನು ಇಬ್ಬರು ಬೈಕ್​ನಲ್ಲಿ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದರು. ಅಲ್ಲಿದ್ದ ಪಾರ್ಕ್​ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಇಬ್ಬರ ಮುಖ ಸೆರೆಯಾಗಿತ್ತು. ಆ ಇಬ್ಬರು ಉತ್ತರ ಪ್ರದೇಶದ ನಿವಾಸಿಗಳೆಂಬುದು ಪೊಲೀಸರಿಗೆ ತನಿಖೆ ಬಳಿಕ ಗೊತ್ತಾಗಿತ್ತು. ಅವರನ್ನು ಹಿಡಿಯಲು ಉತ್ತರ ಪ್ರದೇಶಕ್ಕೆ ಹೊರಟ ದೆಹಲಿ ಪೊಲೀಸರಿಗೆ ಆ ಆರೋಪಿಯ ಮನೆಯವರು ಅವರಿಬ್ಬರೂ ಕೆಲವು ತಿಂಗಳಿಂದ ಮನೆಗೆ ಬಂದೇ ಇಲ್ಲ ಎಂದು ಹೇಳಿದ್ದರು. ಅವರ ಸುಳಿವು ಹಿಡಿದು 600 ಕಿ.ಮೀ. ಸುತ್ತಾಡಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳ ಮೊಬೈಲ್ ನೆಟ್​ವರ್ಕ್ ಆಧರಿಸಿ ಫಾಲೋ ಮಾಡಿದ ಪೊಲೀಸರ ಕಣ್ತಪ್ಪಿಸಿ ಹಲವು ಬಾರಿ ಆರೋಪಿಗಳು ತಪ್ಪಿಸಿಕೊಂಡರು. ಕೊನೆಗೆ ಬಸ್​ವೊಂದರಲ್ಲಿ ಬೇರೆ ಊರಿಗೆ ಪರಾರಿಯಾಗುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಹಿಡಿಯಲು 170 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿರುವ ಪೊಲೀಸರು 230ಕ್ಕೂ ಹೆಚ್ಚು ಜನರ ಬಳಿ ಮಾಹಿತಿ ಕಲೆಹಾಕಿದ್ದಾರೆ. ಕೊಲೆ ನಡೆದ 5 ದಿನಗಳ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ

Murder: ಗೆಳೆಯನನ್ನೇ ಬರ್ಬರವಾಗಿ ಕೊಂದು, ರೂಮ್ ಕ್ಲೀನ್ ಮಾಡಿ ಮಲಗಿದ ಕೊಲೆಗಾರ

(Murder After 600 km chase Delhi Police Arrested Murder accused Who Killed Man for Speaking with his Lover)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್