ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರು ಹೀಗಾ ಮಾಡೋದು!?

ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಲೆಕ್ಷನ್ ವಿಚಾರವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಮಂಗಳಮುಖಿಯರನ್ನ ಆರ್ ಎಮ್ ಸಿ‌ ಯಾರ್ಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಿತ್ರ, ರೇಣುಕಾ, ಬಬ್ಲು‌ ಸೇರಿ 12ಜನ ಮಂಗಳಮುಖಿಯರನ್ನ ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 25ರಂದು ಮಂಗಳಮುಖಿಯರ ಎರಡು ಗುಂಪುಗಳ‌ ನಡುವೆ ಗಲಾಟೆ ನಡೆದಿತ್ತು. ವಾಣಿಶ್ರೀ, ಪ್ರೀತಿ ಗುಂಪು ಹಾಗೂ ಸುಮಿತ್ರ, ರೇಣುಕಾ ಗುಂಪುಗಳ ನಡುವೆ ಈ ಗಲಾಟೆ ನಡೆದಿತ್ತು. ದೀಪಾವಳಿ ಹಬ್ಬದ ಕಲೆಕ್ಷನ್ ವಿಚಾರವಾಗಿ ಶ್ರೀರಾಮಪುರದಿಂದ, ಆರ್ ಎಮ್ ಸಿ‌ […]

ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರು ಹೀಗಾ ಮಾಡೋದು!?
ಸಾಧು ಶ್ರೀನಾಥ್​

Updated on: Oct 28, 2019 | 1:17 PM

ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಲೆಕ್ಷನ್ ವಿಚಾರವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಮಂಗಳಮುಖಿಯರನ್ನ ಆರ್ ಎಮ್ ಸಿ‌ ಯಾರ್ಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಿತ್ರ, ರೇಣುಕಾ, ಬಬ್ಲು‌ ಸೇರಿ 12ಜನ ಮಂಗಳಮುಖಿಯರನ್ನ ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ 25ರಂದು ಮಂಗಳಮುಖಿಯರ ಎರಡು ಗುಂಪುಗಳ‌ ನಡುವೆ ಗಲಾಟೆ ನಡೆದಿತ್ತು. ವಾಣಿಶ್ರೀ, ಪ್ರೀತಿ ಗುಂಪು ಹಾಗೂ ಸುಮಿತ್ರ, ರೇಣುಕಾ ಗುಂಪುಗಳ ನಡುವೆ ಈ ಗಲಾಟೆ ನಡೆದಿತ್ತು. ದೀಪಾವಳಿ ಹಬ್ಬದ ಕಲೆಕ್ಷನ್ ವಿಚಾರವಾಗಿ ಶ್ರೀರಾಮಪುರದಿಂದ, ಆರ್ ಎಮ್ ಸಿ‌ ಯಾರ್ಡ್ ವರೆಗೂ ಬಂದಿದ್ದ ಸುಮಿತ್ರ ಗುಂಪು ಆರ್ ಎಮ್ ಸಿ ಯಾರ್ಡ್ ಬಳಿ ದಬ್ಬಾಳಿಕೆ ನಡೆಸಿ, ಜನರಿಂದ ಹೆಚ್ಚಿನ ಹಣ ಕಲೆಕ್ಷನ್ ಮಾಡುತ್ತಿತ್ತು. ಈ ವಿಚಾರ‌ ತಿಳಿದು ವಾಣಿಶ್ರೀ ತನ್ನ ಗುಂಪಿನೊಂದಿಗೆ ಬಂದು ನಮ್ಮ ಏರಿಯಾಗೆ ಬಂದು ಹಣ ಕಲೆಕ್ಟ್ ಮಾಡಬೇಡಿ ಎಂದಿದ್ರು.

ಮುಂದುವರಿದು ಇದೇ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ‌ ನಡೆದಿತ್ತು. ಸುಮಿತ್ರ ಗ್ಯಾಂಗ್, ನಂತರ ಆರ್ ಎಮ್ ಸಿ ಯಾರ್ಡ್ ನಿಂದ ಶ್ರೀರಾಮ್ ಪುರಕ್ಕೆ ವಾಪಸ್‌ ತೆರಳಿತ್ತು. ಆದ್ರೆ ಸುಮಿತ್ರಾ ಗುಂಪು ಅಲ್ಲಿಂದ ತನ್ನ ಸ್ನೇಹಿತರ ಗುಂಪಿನೊಂದಿಗೆ ಆಟೋದಲ್ಲಿ‌ ಆರ್ ಎಮ್ ಸಿ ಯಾರ್ಡ್ ಗೆ ಮತ್ತೆ ಬಂದಿದೆ. ವಾಣಿಶ್ರೀ ಪ್ರೀತಿ ಇದ್ದ ಜಾಗಕ್ಕೆ ಹೋಗಿ, ಸುಮಿತ್ರಾ ಗುಂಪು ಹಲ್ಲೆ ಮಾಡಿ ಚಾಕುವಿನಿಂದ ಕೊಲೆಗೆ ಯತ್ನಿಸಿದೆ.

ಬಳಿಕ ಸುಮಿತ್ರಾ ಗುಂಪು, ವಾಣಿಶ್ರಿ ಗುಂಪಿನ ಸದಸ್ಯರ ಕೂದಲು ಕಟ್‌ ಮಾಡಿ ವಿಕೃತಿ ಮೆರೆದು ಎಸ್ಕೇಪ್ ಆಗಿತ್ತು. ಈ ಬಗ್ಗೆ ಆರ್ ಎಮ್ ಸಿ‌ ಯಾರ್ಡ್ ಪೊಲೀಸ್‌ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು.

Published On - 12:50 pm, Mon, 28 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us