ಸಿನಿಮೀಯ ರೀತಿಯಲ್ಲಿ.. ಇಂದು ಬೆಳಗ್ಗೆ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ, ಎಷ್ಟು ಚಿನ್ನ ದೋಚಿದ್ದಾರೆ ಗೊತ್ತಾ?

|

Updated on: Jan 22, 2021 | 5:15 PM

ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಹಾಡಹಗಲೇ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 25 ಕೆಜಿ ಚಿನ್ನ ಮತ್ತು ನಗದು ದರೋಡೆ ಮಾಡಿರುವ ಘಟನೆ ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ನಡೆದಿದೆ.

ಸಿನಿಮೀಯ ರೀತಿಯಲ್ಲಿ.. ಇಂದು ಬೆಳಗ್ಗೆ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ, ಎಷ್ಟು ಚಿನ್ನ ದೋಚಿದ್ದಾರೆ ಗೊತ್ತಾ?
ಹಾಡಹಗಲೇ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ
Follow us on

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಹಾಡಹಗಲೇ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 25 ಕೆಜಿ ಚಿನ್ನ ಮತ್ತು ನಗದು ದರೋಡೆ ಮಾಡಿರುವ ಘಟನೆ ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ನಡೆದಿದೆ. ಇಂದು ಬೆಳಗ್ಗೆ 9:30 ರ ಸುಮಾರಿಗೆ ಘಟನೆ ನಡೆದಿದೆ.
ಇದನ್ನೂ ಓದಿ: ಇಂದು ಕೊಂಚ ಇಳಿಕೆ ಕಂಡ ಚಿನ್ನದ ದರ: ಇಂದಿನ ಚಿನ್ನ-ಬೆಳ್ಳಿ ದರದ ಮಾಹಿತಿ ಇಲ್ಲಿದೆ

ಕಚೇರಿಯ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ದುಷ್ಕರ್ಮಿಗಳು ಚಿನ್ನ ದೋಚಿ ಪರಾರಿಯಾಗಿದ್ದಾರೆ. ಸಿಬ್ಬಂದಿಯ ಕೈಕಾಲನ್ನು ಹಗ್ಗದಿಂದ ಕಟ್ಟಿದ ಐವರು ದರೋಡೆಕೋರರಿಂದ ಕೃತ್ಯ ಎಸಗಲಾಗಿದೆ. ಇದಲ್ಲದೆ, ಕಚೇರಿಯ ವ್ಯವಸ್ಥಾಪಕ ಶ್ರೀನಿವಾಸ್ ರಾಘವ್ ಮತ್ತು ಕೆಲ ಸಿಬ್ಬಂದಿಯ ಮೇಲೆ ದರೋಡೆಕೋರರು ಹಲ್ಲೆ ಸಹ ನಡೆಸಿದ್ದಾರೆ.

ಸದ್ಯ, 25 ಕೆ.ಜಿ ಚಿನ್ನಾಭರಣ ಹಾಗೂ 96 ಸಾವಿರ ರೂಪಾಯಿ ನಗದನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಬಾಗಲೂರು ಪೊಲೀಸರು ಪರಿಶೀಲನೆ ನಡೆಸಿದರು.

 

ಬೈಕ್​ಗೆ ದಾರಿ ಬಿಡಲಿಲ್ಲ ಅಂತಾ.. KSRTC ಬಸ್ ಚಾಲಕನ ಮೇಲೆ ಭೀಕರ ಹಲ್ಲೆ

Published On - 5:11 pm, Fri, 22 January 21