Crime News: ರಸ್ತೆ ಕಾಮಗಾರಿ ವೇಳೆ ಶ್ರೀಗಂಧ ಮರಗಳ ಹನನ; ಗುತ್ತಿಗೆದಾರನ ವಿರುದ್ಧ ದೂರು ದಾಖಲು

| Updated By: Rakesh Nayak Manchi

Updated on: Sep 24, 2022 | 7:17 AM

ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಶ್ರೀಗಂಧದ ಮರಗಳ ನಾಶ ಪ್ರಕರಣ ಸಂಬಂಧ ಗುತ್ತಿಗೆದಾರನ ವಿರುದ್ಧ ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Crime News: ರಸ್ತೆ ಕಾಮಗಾರಿ ವೇಳೆ ಶ್ರೀಗಂಧ ಮರಗಳ ಹನನ; ಗುತ್ತಿಗೆದಾರನ ವಿರುದ್ಧ ದೂರು ದಾಖಲು
ರಸ್ತೆ ಕಾಮಗಾರಿ ವೇಳೆ ಶ್ರೀಗಂಧ ಮರಗಳ ನಾಶ
Follow us on

ಮೈಸೂರು: ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಶ್ರೀಗಂಧದ ಮರಗಳ ನಾಶ ಪ್ರಕರಣ ಸಂಬಂಧ ಗುತ್ತಿಗೆದಾರನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್ ಮಾಲೀಕ ಲಕ್ಷ್ಮೇಗೌಡ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಶ್ರೀಗಂಧದ ಮರ ನಾಶದ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ದೂರನ್ನು ಆಧರಿಸಿ ಅಧಿಕಾರಿಗಳು ಗುತ್ತಿಗೆದಾರ ಲಕ್ಷ್ಮೇಗೌಡ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ಅದರಂತೆ ಲಕ್ಷ್ಮೇಗೌಡ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ಮೇಟಗಳ್ಳಿ ಬಡಾವಣೆಯ ರೈಲ್ವೆ ಹಳಿ ಪಕ್ಕದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸುವ ಸಲುವಾಗಿ ಮೈಸೂರು ನಗರಾಭಿವೃದ್ದಿ ವತಿಯಿಂದ ಕಾಮಗಾರಿ ಗುತ್ತಿಗೆಯನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್​ಗೆ ನೀಡಲಾಗಿತ್ತು. ಅದರಂತೆ ರಸ್ತೆ ಕಾಮಗಾರಿ ವೇಳೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಶ್ರೀಗಂಧದ ಮರ ಹನನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಗುತ್ತಿಗೆದಾರನ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಮಗಾರಿ ಮುಗಿದು ಮೂರೇ ತಿಂಗಳಿಗೆ ಕಿತ್ತು ಬಂದ ರಸ್ತೆಯ ಡಾಂಬರ್

ಮೈಸೂರು: ಕಾಮಗಾರಿ ಮುಗಿದು ಮೂರೇ ತಿಂಗಳಿಗೆ ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಬಂದ ಘಟನೆ ಸರಗೂರು ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ನಡೆದಿದೆ. ಮೊಳೆಯೂರು ಮತ್ತು ಬಿ.ಮಟಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗುತ್ತಿಗೆದಾರನ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಮೊಳೆಯೂರು ಗ್ರಾಮದ ರಸ್ತೆ ಡಾಂಬರೀಕರಣ ಮುಕ್ತಾಯವಾಗಿ ಕೇವಲ ಮೂರು ತಿಂಗಳು ಆಗಿವೆ. ಅಷ್ಟರಲ್ಲಾಗಲೇ ಡಾಂಬರು ಕಿತ್ತು ಬರಲು ಆರಂಭಿಸಿದೆ. ಕಿತ್ತು ಬಂದ ಡಾಂಬರ್ ಅನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದು, ಗುತ್ತಿಗೆದಾರನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದರ ಜೊತೆಗೆ ಗ್ರಾಮಕ್ಕೆ ಹೊಸದಾಗಿ ಡಾಂಬರೀಕರಣ ಮಾಡವಂತೆ ಆಗ್ರಹಿಸುತ್ತಿದ್ದಾರೆ.

ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆ

ಕೊಡಗು: ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಮದಿದೆ. ಪವನ್ (23) ನಾಪತ್ತೆಯಾದ ಅರಣ್ಯ ವೀಕ್ಷಕ. ಮೂಲತಃ ಬಾಳೆಲೆ ಗ್ರಾಮದ ಪವನ್ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ  ಕರ್ತವ್ಯನಿರತರಾಗಿದ್ದಾಗಲೇ ನಾಪತ್ತೆಯಾಗಿದ್ದು, ಕಾಲು ಜಾರಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ಪವನ್​ಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 am, Sat, 24 September 22