ಮೈಸೂರು: ಮೈಸೂರಿನಲ್ಲಿ ನಕಲಿ ಟಿಟಿ(Travelling Ticket Examiner) ಮಲ್ಲೇಶ್ನನ್ನು ಪೊಲೀಸರು ಅರೆಸ್ಟ್(Arrest) ಮಾಡಿದ್ದಾರೆ. ದೂರದ ಊರುಗಳ ರೈಲುಗಳನ್ನೇ ಟಾರ್ಗೆಟ್ ಮಾಡಿ ಅಸಲಿ ಟಿಟಿ ರೀತಿ ಐಡಿ ಕಾರ್ಡ್ ಕೈಯಲ್ಲಿ ವಾಕಿ ಟಾಕಿ ಹಿಡಿದು ರೈಲಿನಲ್ಲಿ ಸಂಚಾರ ಮಾಡುತ್ತ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಟಿಟಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಮಲ್ಲೇಶ್ ವಾರಕ್ಕೆ ಒಮ್ಮೆ ಟಿಟಿಯಾಗುತ್ತಿದ್ದ. ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಲ್ಲೇಶ್, ಇಂದು ಅಜ್ಮೀರ್ ರೈಲಿನಲ್ಲಿ ನಕಲಿ ಟಿಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸತತ ಆರು ತಿಂಗಳಿನಿಂದ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಮಲ್ಲೇಶ್ ಸೀಟ್ ಇಲ್ಲದವರಿಗೆ ದುಡ್ಡು ಪಡೆದು ಸೀಟ್ ನೀಡುತ್ತಿದ್ದನಂತೆ. ಹಾಗೂ ಕಳೆದ ಆರು ತಿಂಗಳಿನಿಂದ 60 ರಿಂದ 70 ಸಾವಿರ ಹಣ ಸಂಪಾದನೆ ಮಾಡಿದ್ದಾನಂತೆ. ಬಂದ ಹಣದಿಂದ ಕುಡಿದು ಮಜಾ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ನಾನು ಪ್ರಭಾಕರ್ ತೊಡೆಯಮೇಲೆ ಆಡಿ ಬೆಳೆದವನು ಎಂದ ರವಿಚಂದ್ರನ್
ಬೀದಿ ನಾಯಿಗಳ ದಾಳಿಗೆ 10 ಕುರಿ ಸಾವು
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ರೈತ ಕೃಷ್ಣಪ್ಪ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ಸುಮಾರು 10 ಕುರಿಗಳು ಮೃತಪಟ್ಟಿವೆ. ಕುರಿಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತ ಕಣ್ಣೀರು ಹಾಕಿದ್ದು ಸ್ಥಳಕ್ಕೆ ಬಂದ ಶಾಸಕ ಕೆ.ವೈ.ನಂಜೇಗೌಡ ರೈತನಿಗೆ 25 ಸಾವಿರ ನೆರವು ನೀಡಿದ್ದಾರೆ. ದಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾ ಜಲಾಂದರ್ ಕೂಡ 20 ಸಾವಿರ ನೆರವು ನೀಡಿ ಸಾಂತ್ವನ ಮಾಡಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.