2 ತಿಂಗಳಲ್ಲಿ 9 ಡ್ರಗ್ಸ್‌ ಪ್ರಕರಣ ಭೇದಿಸಿದ ಎನ್​ಸಿಬಿ, 27 ಜನ ಆರೋಪಿಗಳು ಅಂದರ್​​

| Updated By: ವಿವೇಕ ಬಿರಾದಾರ

Updated on: Dec 02, 2022 | 7:40 PM

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬೆಂಗಳೂರು ವಲಯದ ಅಧಿಕಾರಿಗಳು 2 ತಿಂಗಳಲ್ಲಿ 9 ಡ್ರಗ್ಸ್‌ ಪ್ರಕರಣ ಭೇದಿಸಿದ್ದಾರೆ.

2 ತಿಂಗಳಲ್ಲಿ 9 ಡ್ರಗ್ಸ್‌ ಪ್ರಕರಣ ಭೇದಿಸಿದ ಎನ್​ಸಿಬಿ, 27 ಜನ ಆರೋಪಿಗಳು ಅಂದರ್​​
ವಶಪಡಿಸಿಕೊಳ್ಳಲಾದ ಡ್ರಗ್ಸ್​
Follow us on

ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬೆಂಗಳೂರು ವಲಯದ ಅಧಿಕಾರಿಗಳು 2 ತಿಂಗಳಲ್ಲಿ 9 ಡ್ರಗ್ಸ್‌ ಪ್ರಕರಣ ಭೇದಿಸಿ ವಿದೇಶಿಗರು ಸೇರಿದಂತೆ ಒಟ್ಟು 27 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ 20 ರಿಂದ 25 ವರ್ಷದ ವಿದ್ಯಾರ್ಥಿಗಳು, ಟೆಕ್ಕಿಗಳಾಗಿದ್ದಾರೆ. ಆರೋಪಿಗಳಿಂದ 15 ಲಕ್ಷ ರೂಪಾಯಿ ಮೌಲ್ಯದ ಹೈಡ್ರೊ ಗಾಂಜಾ, ಎಲ್​ಎಸ್​ಡಿ, ಕೊಕೇನ್, ಹ್ಯಾಶಿಸ್​ ಆಯಿಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಡಾರ್ಕ್ ನೆಟ್, ವಾಟ್ಸಾಪ್‌, ಟೆಲಿಗ್ರಾಮ್‌ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದು, ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿ ಮಾಡುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ