ಛತ್ತೀಸ್‌ಗಡ: ತನ್ನ ಗರ್ಲ್ಫ್ರೆಂಡ್ನ್ನು ಕೊಲೆ ಮಾಡಿ ಶವ ಸುಟ್ಟು ಕಾಡಿನಲ್ಲಿ ಎಸೆದ ಒಡಿಶಾದ ವ್ಯಕ್ತಿ ಬಂಧನ
ಸಚಿನ್ ಹತ್ಯೆಗೀಡಾದ ತನ್ನ ಪ್ರೇಯಸಿಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು ಅವರನ್ನು ದಾರಿತಪ್ಪಿಸಲು ಮಹಿಳೆ ಜೀವಂತವಾಗಿದ್ದಾಳೆ ಎಂದು ಸುಳ್ಳು ಕತೆ ಹೆಣೆದಿದ್ದಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾವಿರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ, ಹಾಗಾಗಿ ತಮ್ಮ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸಬಾರದು ಎಂದು ಆಕೆಯ ಕುಟುಂಬದವರಿಗೆ ಹೇಳಿದ್ದಾನೆ.
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ (Shraddha Walkar) ಕೊಲೆಯಂತೆಯೇ ಒಡಿಶಾದ(Odisha) ವ್ಯಕ್ತಿಯೊಬ್ಬ ತನ್ನ ಗರ್ಲ್ಫ್ರೆಂಡ್ನ್ನು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ ಪ್ರಕರಣ ವರದಿ ಆಗಿದೆ. ಛತ್ತೀಸ್‌ಗಡ (Chhattisgarh)ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ಆತ ಗರ್ಲ್ಫ್ರೆಂಡ್ನ್ನು ಕೊಂದು, ಶವವನ್ನು ಸುಟ್ಟು, ಶವವನ್ನು ಕಾಡಿನಲ್ಲಿ ಎಸೆದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ತನ್ನ ಗರ್ಲ್ಫ್ರೆಂಡ್ ಬೇರೊಬ್ಬರ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಕೊಂದಿರುವುದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿ ಒಡಿಶಾದಲ್ಲಿ ತನ್ನ ಗರ್ಲ್ಫ್ರೆಂಡ್ಗೆ ಗುಂಡು ಹಾರಿಸಿದ್ದಾನೆ. ಸಾಕ್ಷ್ಯವನ್ನು ಮರೆಮಾಚುವ ಪ್ರಯತ್ನದಲ್ಲಿ ಆಕೆಯ ದೇಹವನ್ನು ಸುಟ್ಟು ಹಾಕಿದ್ದಾನೆ. ಮೃತ ಮಹಿಳೆಯ ಸಂಬಂಧಿಕರು ರಾಯ್‌ಪುರದ ಪಂಡ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಒಡಿಶಾದ ಬಲಂಗೀರ್ ನಿವಾಸಿ ಸಚಿನ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಒಡಿಶಾ ಪೊಲೀಸರು ಆತನನ್ನು ಬಂಧಿಸಿದ್ದು, ರಾಯ್‌ಪುರದಲ್ಲಿ ಛತ್ತೀಸ್‌ಗಢ ಪೊಲೀಸರಿಗೆ ಹಸ್ತಾಂತರಿಸುವ ಮೊದಲು ಅವರು ಜೀರೋ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಸಚಿನ್ ತನ್ನ ಗೆಳತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪ್ರಿಯತಮೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಆಕೆಯನ್ನು ಕೊಂದಿರುವುದಾಗಿ ಸಚಿನ್ ಪೊಲೀಸರಿಗೆ ತಿಳಿಸಿದ್ದಾರೆ. ನವೆಂಬರ್ 21 ರಂದು ರಾಯ್‌ಪುರದಿಂದ ಬಲಂಗೀರ್‌ಗೆ ಮಹಿಳೆಯನ್ನು ಕರೆದೊಯ್ದಿದ್ದಾಗಿ ಅಧಿಕಾರಿಗಳಿಗೆ ತಿಳಿಸಿದ್ದ ಆತ, ಆಕೆಯನ್ನು ಮೊದಲು ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು 200 ಕಿ.ಮೀ ದೂರದ ಕಾಡಿಗೆ ಕೊಂಡೊಯ್ದು ದೇಹದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ಹೇಳಿದ್ದಾನೆ.
ಹತ್ಯೆಗೀಡಾದ ಮಹಿಳೆಯ ಕುಟುಂಬದಿಂದ ದೂರನ್ನು ಸ್ವೀಕರಿಸಿದ ನಂತರ ಛತ್ತೀಸ್‌ಗಢ ಪೊಲೀಸರು ಒಡಿಶಾ ಪೊಲೀಸರಿಗೆ ಪ್ರಕರಣದ ಮಾಹಿತಿ ನೀಡಿದ್ದರು. ನಂತರ ಅರಣ್ಯ ಪ್ರದೇಶದಲ್ಲಿ ಅರ್ಧ ಸುಟ್ಟ ದೇಹವೊಂದು ಪತ್ತೆಯಾಗಿತ್ತು. ಮೃತಳ ಚಿತ್ರವನ್ನು ಕುಟುಂಬಸ್ಥರು ಸ್ಕ್ಯಾನ್ ಮಾಡಿ ಆಕೆಯನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದೆ.
ಸಚಿನ್ ಹತ್ಯೆಗೀಡಾದವರ ತನ್ನ ಪ್ರೇಯಸಿಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು ಅವರನ್ನು ದಾರಿತಪ್ಪಿಸಲು ಮಹಿಳೆ ಜೀವಂತವಾಗಿದ್ದಾಳೆ ಎಂದು ಸುಳ್ಳು ಕತೆ ಹೆಣೆದಿದ್ದಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾವಿರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ, ಹಾಗಾಗಿ ತಮ್ಮ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸಬಾರದು ಎಂದು ಆಕೆಯ ಕುಟುಂಬದವರಿಗೆ ಹೇಳಿದ್ದಾನೆ.
ಕೊಲೆಯಾದ ಮಹಿಳೆಯನ್ನು ತನು ಕುರ್ರೆ ಎಂದು ಗುರುತಿಸಲಾಗಿದ್ದು ಈಕೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ನಿವಾಸಿ.ಅಪರಾಧ ನಡೆದ ನಂತರ ಸಚಿನ್ ತನ್ನ ಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.
“ಬಲಂಗೀರ್ ಜಿಲ್ಲೆಯ ಪುರೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಶವ ಪತ್ತೆಯಾಗಿರುವ ಬಗ್ಗೆ ನನ್ನ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಇದಾದ ನಂತರ, ಅದು ಮಹಿಳೆಯ ಶವ ಎಂಬುದು ಗೊತ್ತಾಯಿತು. ಆರೋಪಿ ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದ. ಇದರ ಆಧಾರದ ಮೇಲೆ, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಏತನ್ಮಧ್ಯೆ, ಮಹಿಳೆ ರಾಯ್‌ಪುರದ ಖಾಸಗಿ ಬ್ಯಾಂಕ್‌ನಲ್ಲಿ ಮಾರಾಟ ತಂಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಎಸ್‌ಎಸ್‌ಪಿ ಪ್ರಶಾಂತ್ ಅಗರ್ವಾಲ್ ಹೇಳಿದ್ದಾರೆ. ಆಕೆಯ ಸಂಬಂಧಿಕರು ನಾಪತ್ತೆ ದೂರು ದಾಖಲಿಸಿದ್ದರು. ಮಹಿಳೆ ಕೊರ್ಬಾ ಮೂಲದವರಾಗಿದ್ದು, ಕೆಲವು ವರ್ಷಗಳಿಂದ ರಾಯ್‌ಪುರದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
Published On - 8:32 pm, Fri, 2 December 22