ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್​ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್

ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. ಅಫ್ತಾಬ್ ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದನಂತೆ. ದೇಹವನ್ನು ತುಂಡರಿಸಿದ ಬಳಿಕ ಪ್ರತಿದಿನ ಶ್ರದ್ಧಾ ಮುಖ ನೋಡುತ್ತಿದ್ದನಂತೆ.

ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್​ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್
ಅಫ್ತಾಬ್ ಅಮೀನ್ ಪೂನಾವಾಲಾ- ಶ್ರದ್ಧಾ ವಾಕರ್
Follow us
| Updated By: ಆಯೇಷಾ ಬಾನು

Updated on:Nov 16, 2022 | 8:37 AM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರೋ ಶ್ರದ್ಧಾ ವಾಲ್ಕರ್(Shraddha Walker) ಮರ್ಡರ್ ಪ್ರಕರಣ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಜೀವನ ಪೂರ್ತಿ ಸಂಗಾತಿಯಾಗಿ ಸುಖ ಜೀವನ ನಡೆಸಲು ಪೋಷಕರಿಂದ ಜಗಳವಾಡಿಕೊಂಡು ದೂರವಾಗಿದ್ದ ಶ್ರದ್ಧಾ ತನ್ನ ಪ್ರಿಯತಮನ ಕೈಯಿಂದಲೇ 35 ತುಂಡುಗಳಾಗಿದ್ದಾಳೆ. ಸದ್ಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು(Aaftab Ameen Poonawala) ಪೊಲೀಸರು ಬಂಧಿಸಿ ಶ್ರದ್ಧಾಳ ಮೃತದೇಹದ ತುಂಡುಗಳನ್ನ ಎಸೆದ ಅರಣ್ಯ ಪ್ರದೇಶಕ್ಕೆಲ್ಲ ಕರೆದುಕೊಂಡು ಹೋಗಿ ಮಹಜರು ಮಾಡಿಸಿದ್ದಾರೆ. ಇದರ ನಡುವೆ ಹಂತಕ ಹಾಗೂ ಈ ಪ್ರಕರಣದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಬಯಲಾಗಿವೆ.

ದೆಹಲಿಯಲ್ಲಿ 6 ತಿಂಗಳ ಹಿಂದೆ ನಡೆದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ಆರೋಪಿ ಅರೆಸ್ಟ್ ಬಳಿಕ ಬೆಚ್ಚಿಬೀಳಿಸುವ ಅನೇಕ ಸಂಗತಿಗಳು ಬಯಲಾಗುತ್ತಿವೆ. ಅಪ್ತಾಬ್ ಎಂಬ ಹಂತಕನ ಮೆಂಟಾಲಿಟಿ ನೋಡಿದ್ರೆ ಎಂತವರಿಗೂ ಶಾಕ್ ಆಗುತ್ತೆ. ಈತ ತನ್ನ ಪ್ರೇಯಸಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ಗೆ ತುಂಬಿಸಿದರೂ ಕೊಂಚವೂ ಭಯವಿಲ್ಲದೆ ಮತ್ತೊಬ್ಬ ಯುವತಿಯ ಜೊತೆ ತನ್ನ ರೂಮಿನಲ್ಲೇ ಸರಸ ಸಲ್ಲಾಪವಾಡುತ್ತಿದ್ದ. ಈಗ ಇವನ ಮತ್ತೊಂದು ಕ್ರೌರ್ಯ ಅನಾವರಣಗೊಂಡಿದೆ. ಅಫ್ತಾಬ್ ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದನಂತೆ. ದೇಹವನ್ನು ತುಂಡರಿಸಿದ ಬಳಿಕ ಪ್ರತಿದಿನ ಶ್ರದ್ಧಾ ಮುಖ ನೋಡುತ್ತಿದ್ದನಂತೆ. ಫ್ರಿಡ್ಜ್ ಬಾಗಿಲು ತೆಗೆದು ಪದೆ ಪದೆ ಶ್ರದ್ಧಾ ಮುಖ ನೋಡುತ್ತಿದ್ದ. ಅಷ್ಟೇ ಅಲ್ಲ ಶ್ರದ್ಧಾ ಗುರುತು ಅಳಿಸಲು ದೇಹದ ಭಾಗಗಳನ್ನು ಸುಟ್ಟಿದ್ದಾನೆ. ಮೆಹ್ರೌಲಿ ಮಾರುಕಟ್ಟೆಯಿಂದ ಬ್ಲೋವರ್ ಖರೀದಿಸಿ ಕೈ ಬೆರಳು ಸೇರಿದಂತೆ ಹಲವು ಭಾಗಗಳನ್ನು ಬ್ಲೋವರ್ ನಿಂದ ಸುಟ್ಟು ಹಾಕಿದ್ದಾನೆ. ಕೊನೆಯದಾಗಿ ಶ್ರದ್ಧಾಳ ತಲೆಯನ್ನು ಕಾಡಿಗೆ ಎಸೆದಿದ್ದಾನೆ.

ಶ್ರದ್ಧಾ ಮರ್ಡರ್ ಯಾಕೆ ಮಾಡ್ದೆ? ಹೇಗೆ ಮಾಡ್ದೆ ಅಂತಾ ಬಾಯ್ಬಿಟ್ಟ ಅಫ್ತಾಬ್

ದೆಹಲಿ ಪೊಲೀಸರ ಎದುರು ಅಫ್ತಾಬ್ ಪೂನಾವಾಲಾ ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. “ನನಗೂ ಶ್ರದ್ಧಾಗೂ ತಿಂಗಳಾನುಘಟ್ಟಲೆ ಆಗಾಗ ಜಗಳ ಆಗ್ತಿದ್ದೇ ನಾನು ಅವಳನ್ನು ಕೊಲ್ಲಲು ಕಾರಣ” “ನಾನು ಬೇರೆ ಹುಡುಗಿಯರ ಜೊತೆ ಮಾತಾಡೋದು ಶ್ರದ್ಧಾ ವಾಲ್ಕರ್ ಗೆ ಇಷ್ಟ ಇರದೇ ಜಗಳ ಮಾಡ್ತಿದ್ಳು” “ನಾನು ಬೇರೆ ಹುಡುಗಿಯರೊಂದಿಗೆ ಫೋನ್ ನಲ್ಲಿ ಮಾತಾಡಲು ಶ್ರದ್ಧಾ ಬಿಡ್ತಿರಲಿಲ್ಲ!” “ನಾನು ಬೇರೆ ಹುಡುಗಿಯರೊಂದಿಗೆ ಮಾತಾಡ್ತಿದ್ದನ್ನು ಅನುಮಾನಿಸಿ, ಕೋಪಗೊಳ್ತಿದ್ಳು” – “ಕೊಲೆಯಾದ ಮೇ 18ಕ್ಕಿಂತ ಒಂದು ವಾರದ ಮುನ್ನವೇ ಅವಳನ್ನು ಕೊಲ್ಲಬೇಕಿತ್ತು, ಆದ್ರೆ ಮಿಸ್ ಆಯ್ತು” ಎಂದು ದೆಹಲಿ ಪೊಲೀಸ್ ಅಧಿಕಾರಿಗಳ ಮುಂದೆ ಅಫ್ತಾಬ್ ಪೂನಾವಾಲಾ ಬಾಯ್ಬಿಟ್ಟಿದ್ದಾನೆ. “ಜಗಳ ಮಾಡ್ತಾ ಮಾಡ್ತಾ ಎಮೋಷನ್ ಆದ್ಳು, ಅಳೋದಕ್ಕೆ ಶುರು ಮಾಡಿದ್ಳು..ಅದಕ್ಕೆ ಬಿಟ್ಟಿದ್ದೆ” “ಆದ್ರೆ ಮೇ 18ಕ್ಕೆ ನಾನು ಶ್ರದ್ಧಾ ವಾಲ್ಕರ್ ಪ್ರಾಣ ತೆಗೆದೆ ಅಂತಾ ಒಪ್ಪಿಕೊಂಡಿದ್ದಾನೆ. “ಮೇ 18ರಂದು ಮತ್ತೆ ಜಗಳ ಆಯ್ತು, ಮಾತಿಗೆ ಮಾತು ಬೆಳೆದಿದ್ದರಿಂದ ಶ್ರದ್ಧಾಳ ಕಥೆ ಮುಗಿಸಿದೆ”. ನಾನೇ ಶ್ರದ್ಧಾ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆಂದು ಟಿವಿ9ಗೆ ನವದೆಹಲಿ ಪೊಲೀಸರ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಇಂಥಾ ಪ್ರಕರಣಗಳಲ್ಲಿ ಸೀರಿಯಲ್​ ಕಿಲ್ಲರ್​ ಹೇಗಿರುತ್ತಾರೆ? ಅವರ ಮನಸ್ಥಿತಿ ಹೇಗಿರುತ್ತದೆ?

ಶ್ರದ್ಧಾ ಕೊಲೆ ಮಾಡಿದ ಬಳಿಕ ಹಂತಕ ಅಫ್ತಾಬ್ ಏನೆಲ್ಲಾ ಮಾಡಿದ್ದಾನೆ ಗೊತ್ತಾ?

ಕೊಲೆ ನಂತರ ಅಫ್ತಾಬ್ ಬಚಾವಾಗಲು ಸಿನಿಮೀಯ ಶೈಲಿಯಲ್ಲಿ ರೋಚಕ ರೀತಿಯ ಆಪರೇಷನ್ ಮಾಡಿದ್ದಾನೆ. ಶ್ರದ್ಧಾಳ ಮೇಲೆ ಕುಳಿತು ಕತ್ತು ಹಿಸುಕಿ ಅಮಾನುಷವಾಗಿ ಕೊಂದ ನಂತರ ಆತ ಮಾಡಿದ ಕೃತ್ಯದ ಕ್ರೈಮ್ ಕಹಾನಿಯನ್ನು ದೆಹಲಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.ಶ್ರದ್ಧಾ ಶವವನ್ನು ಹಾಗೆಯೇ ಎಲ್ಲಿಯಾದರೂ ಬಿಸಾಡಿದ್ರೆ ತಾನು ಸಿಕ್ಕಿಬೀಳುವ ಭಯದಲ್ಲಿ ಸಾಕ್ಷಿ ಸಿಗದಂತೆ ಡೆಡ್ ಬಾಡಿ ಡಿಸ್ಪೋಸಲ್ ಮಾಡೋದು ಹೇಗೆ ಅಂತಾ ಮೇ 18ರಂದು ಇಡೀ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮೇಲೆ ಸರ್ಚ್ ಮಾಡಿದ್ದಾನೆ. ಸಾಕ್ಷಿನೇ ಸಿಗದಂತೆ ಮಾಡಲು ಹೇಗೆಲ್ಲಾ ಶವ ಕತ್ತರಿಸಬೇಕು ಅಂತಾ ಗೂಗಲ್, ಯೂಟ್ಯೂಬ್ ನಲ್ಲೂ ತಲಾಶ್ ಮಾಡಿದ್ದಾನೆ. “ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್ಸ್ ನೋಡ್ತಿದ್ದರಿಂದ ಡೆಡ್ ಬಾಡಿ ಡಿಸ್ಪೋಸಲ್ ಹೇಗೆಂದು ಪ್ಲ್ಯಾನ್ ಮಾಡಿದೆ”. ಶ್ರದ್ಧಾ ಬಾಡಿ ತುಂಡು ತುಂಡಾಗಿ ನಾನೇ ಕತ್ತರಿಸಿ ಹಾಕಿದ್ದೆ ಎಂದು ಹಂತಕ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ನಂತರದ ದಿನಗಳಲ್ಲಿ ಶ್ರದ್ಧಾ ಇನ್ಸ್ಟಾಗ್ರಾಮ್ ಅಕೌಂಟ್ ಆಪರೇಟ್ ಮಾಡ್ತಿದ್ದೆ. ಶ್ರದ್ಧಾ ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ಸ್ ಮಾಡ್ತಾ, ಶ್ರದ್ಧಾ ಫ್ರೆಂಡ್ಸ್ ಜತೆಗೂ ಚಾಟಿಂಗ್ ಮಾಡ್ತಿದ್ದೆ. ಶ್ರದ್ಧಾ ಬದುಕಿದ್ದಾಳೆ ಅಂತಾ ಬಿಂಬಿಸಲು ಶ್ರದ್ಧಾ ಅಕೌಂಟ್ ಆಪರೇಟ್ ಮಾಡ್ತಿದ್ದೆ ಎಂದಿದ್ದಾನೆ.

ಶ್ರದ್ಧಾ ಕೊಲೆಯಿಂದ ಎಸ್ಕೇಪ್ ಆಗೋಕೆ ಅಫ್ತಾಬ್ ಮಾಡಿದ ಖತರ್ನಾಕ್ ಪ್ಲಾನ್​ಗಳೇನು?

ಡೆಡ್ ಬಾಡಿ ವಾಸನೆ ಬರದಂತೆ ನೋಡಿಕೊಳ್ಳಲು ಹಂತಕ ಅಫ್ತಾಬ್ ಹೊಸ ಫ್ರಿಡ್ಜ್ ಖರೀದಿಸಿದ್ದ. ದೆಹಲಿಯ ಛತ್ತರ್ ಪುರ ನ್ಯೂ ಬಸ್ ಸ್ಟ್ಯಾಂಡ್ ಬಳಿಯ ತಿಲಕ್ ಎಲೆಕ್ಟ್ರಾನಿಕ್ಸ್ ಶೋರೂಮ್ ನಲ್ಲಿ ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದ್ದ. ಮೇ 18ಕ್ಕೆ ಶ್ರದ್ಧಾ ಕೊಲೆ ಮಾಡಿ ಬಾತ್ ರೂಮ್​ನಲ್ಲಿ ಡೆಡ್ ಬಾಡಿ ಬಚ್ಚಿಟ್ಟಿದ್ದ. ಮೇ 19ರಂದೇ ಹೋಗಿ ಕ್ರೆಡಿಟ್ ಕಾರ್ಡ್ ಮೂಲಕ 22 ಸಾವಿರ ರೂಪಾಯಿ ಕೊಟ್ಟು ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದ್ದ. ಬಳಿಕ ಅಲ್ಲೇ ತಿಲಕ್ ಎಲೆಕ್ಚ್ರಾನಿಕ್ಸ್ ಎದುರುಗಡೆ ಅಂಗಡಿಯಲ್ಲಿ ಡೆಡ್ ಬಾಡಿ ಕಟ್ ಮಾಡಲು ಚಾಕು ಖರೀದಿಸಿದ್ದ. ಬಾಡಿ ಕಟ್ ಮಾಡೋಕೆ ಚಾಕು, ಕಟ್ ಮಾಡಿದ ಪೀಸ್ ಗಳನ್ನು ತುಂಬೋಕೆ ಚೀಲಗಳನ್ನೂ ಖರೀಸಿದ್ದಾನೆ. ಈ ಬಗ್ಗೆ ಪೊಲೀಸರು ಅಂಗಡಿ ಮಾಲೀಕರು, ಸಿಬ್ಬಂದಿಗಳ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.

ಶ್ರದ್ಧಾ ಡೆಡ್ ಬಾಡಿ ಕಟ್ ಮಾಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಂತಕ ಅಫ್ತಾಬ್

ಹಂತಕ ಅಫ್ತಾಬ್ ಶ್ರಾದ್ಧಾ ದೇಹ ಕತ್ತರಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ. ಬಳಿಕ ಛತ್ತರ್ ಪುರದಲ್ಲಿ ಡಾ.ಅನಿಲ್ ಸಿಂಗ್ ಬಳಿ ಚಿಕಿತ್ಸೆಗೆ ತೆರಳಿದ್ದ. ಆ ವೇಳೆ ಗಾಯ ಹೇಗೆಯ್ತು ಎಂಬ ವೈದ್ಯರ ಪ್ರಶ್ನೆಗೆ ಹಣ್ಣು ಕೊಯ್ಯುವಾಗ ಬೆರಳಿಗೆ ಗಾಯ ಆಯ್ತು ಎಂದಿದ್ದ. ಅಫ್ತಾಬ್ ಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಅನಿಲ್ ಸಿಂಗ್ ಸ್ಟೇಟ್ಮೆಂಟ್ ಕೂಡ ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ. ತುಂಬಾ ಅವಸರದಲ್ಲೇ ಬಂದವನಂತೆ ಕಂಡರೂ ಸಹ ಬಹಳ ಅಗ್ರೆಸಿವ್ ಹಾಗೂ ಕಾನ್ಫಿಡೆಂಟಾಗಿದ್ದನಂತೆ ಅಫ್ತಾಬ್. ನಾನು ಮುಂಬೈನವನು ಆದ್ರೆ ನೋಯ್ಡಾದ ಗುರುಗ್ರಾಮದಲ್ಲಿ ಐಟಿ ಸೆಕ್ಟರ್ ನಲ್ಲಿ ಅವಕಾಶ ಹೆಚ್ಚಿದಮ ಅಂತಾ ಇಲ್ಲಿ ಬಂದೆ ಎಂದನಂತೆ. ಕೈಬೆರಳಿಗೆ ಚಿಕಿತ್ಸೆಗೆ ಹೋಗಿ ಡಾಕ್ಟರ್ ಮುಂದೆ ಡ್ರಾಮಾ ಮಾಡಿದ್ದನಂತೆ. ಬಳಿಕ ಶ್ರದ್ಧಾ ಶವ ಪೀಸ್ ಪೀಸ್ ಮಾಡಲು ಹೊಸ ಚಾಕು, 35 ಪೀಸ್ ತುಂಬಲು ಹೊಸ ಬ್ಯಾಗ್ ಖರೀದಿಸಿರುವುದಾಗಿ ಪೊಲೀಸರಿಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ.

ಶ್ರದ್ಧಾ ವಾಲ್ಕರ್ ಕೊಂದ ಅಫ್ತಾಬ್ ಕ್ರೂರತೆ ತಿಳಿದು ದೆಹಲಿ ಪೊಲೀಸರು ಶಾಕ್

ಕ್ರೂರಿ ಅಫ್ತಾಬ್ ಶ್ರದ್ಧಾ ಡೆಡ್ ಬಾಡಿ ವಿಲೇವಾರಿಗೆ ಖತರ್ನಾಕ್ ಪ್ಲಾನ್ ಮಾಡಿದ್ದ. ಯಾವುದೇ ಕಾರಣಕ್ಕೂ ತಾನೂ ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ಎಚ್ಚರಿಕೆ ವಹಿಸಿದ್ದ. ಡೆಡ್ ಬಾಡಿಯನ್ನು 35 ಪೀಸ್ ಮಾಡಿ ಲಿವರ್, ಕರುಳು ವಿಲೇವಾರಿಗೆ ಬೇರೆ ಪ್ಲಾನ್ ಮಾಡಿದ್ದ. ಲಿವರ್ ಹಾಗೂ ಕರುಳನ್ನು ಕೈಮಾದಂತೆ ಸಣ್ಣ ಸಣ್ಣದಾಗಿ ಕತ್ತರಿಸಿದ್ದನಂತೆ. ಹಂತಕ ಅಫ್ತಾಬ್ ಅಮಾನುಷತೆ, ಕ್ರೂರತೆ ಕೃತ್ಯ ಕಂಡು ದೆಹಲಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಶವ ಕಟ್ ಮಾಡೋದು ಹೇಗೆ? ಶವ ವಿಲೇವಾರಿ ಹೇಗೆ? ಸಾಕ್ಷ್ಯ ಸಿಗದಂತೆ ಮಾಡೋದು ಹೇಗೆ? ಹೀಗೆ ಶ್ರದ್ಧಾ ಕೊಲೆಯಿಂದ ಪಾರಾಗಲೂ ಗೂಗಲ್, ಯೂಟ್ಯೂಬ್ ನಲ್ಲಿ ದಿನಗಟ್ಟಲೇ ಅಫ್ತಾಬ್ ಸರ್ಚ್ ಮಾಡಿ ಮಾಹಿತಿ ಕಲೆ ಹಾಕಿದ್ದ. ಕೈಮಾದಂತೆ ಸಣ್ಣಗೆ ತುಂಡರಿಸಿದ ಲಿವರ್ ಹಾಗೂ ಕರುಳನ್ನು ಛತ್ತರ್ ಪುರ ಹಾಗೂ ಮೆಹ್ರೌಲಿ ಕಾಡಲ್ಲಿ ಬಿಸಾಡಿದ್ದಾನೆ. ಪೊಲೀಸರು ಸದ್ಯ ಹಂತಕ ಅಫ್ತಾಬ್​ನನ್ನು ಕಾಡಿಗೆ ಕರೆದೊಯ್ದು ಮಹಜರ್ ಮಾಡಿಸಿದ್ದಾರೆ. ಮಹಜರು ವೇಳೆ ಸಿಕ್ಕಿರುವ ಮನುಷ್ಯ ದೇಹ ಹೋಲುವ 10 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಡಿಎನ್ಎಗೆ ಮ್ಯಾಚ್ ಆಗುತ್ತಾ ಅಂತಾ ವಿಧಿವಿಜ್ಞಾನ ತಜ್ಞರು ಪರೀಕ್ಷಿಸಲಿದ್ದಾರೆ.

Published On - 8:37 am, Wed, 16 November 22

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ