ಗಂಡ -3 ಮಕ್ಕಳು ಇದ್ರೂ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಬೆಳೆಸಿದಳು, ಕೊನೆಗೆ ಅಡ್ಡ ಬಂದ ಗಂಡನ ಕೊಲೆಗೆ ಮುಹೂರ್ತ ಇಟ್ಟುಬಿಟ್ಟರು!

Illicit relationship: ಹೆಂಡತಿ ಅಲಿವೇಲು ನೇರವಾಗಿ ಚೇಳೂರು ಪೊಲೀಸ್ ಠಾಣೆಗೆ ಹೋಗಿ ನ. 29ರಿಂದ ಗಂಡ ಮಿಸ್ಸಿಂಗ್ ಎಂದು ದೂರು ನೀಡಿದ್ದಳು. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ದೂರು ನೀಡಿದವಳ ಮೇಲೆಯೇ ಅನುಮಾನ ಬಂದಿತ್ತು. ಠಾಣೆಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಂತೆ...

ಗಂಡ -3 ಮಕ್ಕಳು ಇದ್ರೂ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಬೆಳೆಸಿದಳು, ಕೊನೆಗೆ ಅಡ್ಡ ಬಂದ ಗಂಡನ ಕೊಲೆಗೆ ಮುಹೂರ್ತ ಇಟ್ಟುಬಿಟ್ಟರು!
ಗಂಡ -3 ಮಕ್ಕಳು ಇದ್ರೂ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಬೆಳೆಸಿದಳು, ಕೊನೆಗೆ ಅಡ್ಡ ಬಂದ ಗಂಡನ ಕೊಲೆಗೆ ಮುಹೂರ್ತ ಇಟ್ಟುಬಿಟ್ಟರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 03, 2022 | 10:36 AM

ಗಂಡ (husband) ಹಾಗೂ ಮೂವರು ಮಕ್ಕಳು (children) ಇದ್ರೂ… ಇಲ್ಲೊಬ್ಬ ವಿವಾಹಿತ ಮಹಿಳೆ (wife), ಬೇರೊಬ್ಬ ವ್ಯಕ್ತಿಯ ಜೊತೆ ಪ್ರೀತಿ ಪ್ರೇಮ ಅಂತ ಅನೈತಿಕ ಸಂಬಂಧ ಬೆಳೆಸಿದ್ದಳು. ಮುಂದೆ… ತಮ್ಮ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಂತ ಭಾವಿಸಿ.. ಗಂಡನ ಕೊಲೆಗೆ ಮೂಹೂರ್ತ ಇಟ್ಟುಬಿಟ್ಟರು. ಪ್ರಿಯಕರ (paramour) ಹಾಗೂ ಆತನ ಸ್ನೇಹಿತ ಸೇರಿ ಆಕೆಯ ಗಂಡನನ್ನು ಕೊಂದು ಶವ ಹೂತು ಹಾಕಿದ್ದು ಗೊತ್ತಿದ್ರೂ… ಏನು ಗೊತ್ತಿಲ್ಲದ ಹಾಗೆ ಪೊಲೀಸ್ ಠಾಣೆಗೆ ಹೋಗಿ ಗಂಡ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿಸಿದ್ದಳು. ಆದ್ರೆ ಪೊಲೀಸರ ತನಿಖೆಯಲ್ಲಿ ದೂರು ನೀಡಿದವಳೆ ಕೊಲೆಯ ಸೂತ್ರಧಾರಿ ಅಂತ ಗೊತ್ತಾಗಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!!

ಮೇಲಿನ ಚಿತ್ರದಲ್ಲಿರುವ ಮಹಿಳೆಯನ್ನೊಮ್ಮೆ ನೋಡಿ ಬಿಡಿ, ಈಕೆಯ ಹೆಸರು ಅಲಿವೇಲು. ಈಕೆಯ ಗಂಡನ ಹೆಸರು ನರಸಿಂಹಪ್ಪ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಬಾಗೇಪಲ್ಲಿ (bagepalli) ತಾಲೂಕಿನ ಪೋಲನಾಯಕನಪಲ್ಲಿ ನಿವಾಸಿಗಳು. ಮದುವೆಯಾಗಿ ಎರಡು ಹೆಣ್ಣು ಒಂದು ಗಂಡು ಮಗು ಇದೆ. ಕೂಲಿ ಮಾಡಿಕೊಂಡು ಬದುಕುತ್ತಿದ್ರೂ… ಸುಖ ಸಂಸಾರಕ್ಕೆ ಏನೂ ಕೊರತೆ ಇರಲಿಲ್ಲ. ಆದ್ರೆ ನವೆಂಬರ್ 24ರಂದು ಈಕೆಯ ಗಂಡ ನರಸಿಂಹಪ್ಪ ಅಂಗಡಿಗೆ ಹೋಗಿ ಬರ್ತಿನಿ ಅಂತ ಹೋದವನು 5 ದಿನಗಳು ಕಳೆದ್ರೂ ವಾಪಸ್ ಮನೆಗೆ ಬಂದಿರಲಿಲ್ಲ.

ಇದ್ರಿಂದ ಭಯ ಆತಂಕಗೊಂಡ ಅಲಿವೇಲು ನೇರವಾಗಿ ಚೇಳೂರು ಪೊಲೀಸ್ ಠಾಣೆಗೆ ಹೋಗಿ ನವೆಂಬರ್ 29ರಿಂದ ಗಂಡ ಮಿಸ್ಸಿಂಗ್ ಎಂದು ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ದೂರು ನೀಡಿದವಳ ಮೇಲೆಯೇ ಅನುಮಾನ ಬಂದಿತ್ತು. ಠಾಣೆಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಂತೆ… ದೂರು ನೀಡಿದವಳೆ ಸತ್ಯ ಬಾಯಿ ಬಿಟ್ಟಿದ್ದಳು. ಅದೇನು ಅಂತ ಸ್ವತಃ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಸುದ್ದಿಗಾರರಿಗೆ ವಿವರಿಸಿದ್ದಾರೆ.

ಹೌದು! ಅಸಲಿಗೆ ಪೋಲನಾಯಕನಪಲ್ಲಿ ಗ್ರಾಮದ ವೆಂಕಟೇಶ ಎನ್ನುವ ವ್ಯಕ್ತಿಯ ಜೊತೆಗೆ ಅಲಿವೇಲುಗೆ ಅನೈತಿಕ ಸಂಬಂಧ ಇತ್ತಂತೆ. ಇದ್ರಿಂದ ಮನೆಯಲ್ಲಿ ಪದೆ ಪದೆ ಗಲಾಟೆ ಆಗ್ತಿತ್ತಂತೆ. ಇದ್ರಿಂದ ಕೆರಳಿದ ಅಲಿವೇಲು, ತನ್ನ ಗಂಡನ ಕಥೆ ಮುಗಿಸುವಂತೆ ತನ್ನ ಪ್ರಿಯಕರ ವೆಂಕಟೇಶಗೆ ಹೇಳಿದ್ದಳಂತೆ.

ಇದ್ರಿಂದ ವೆಂಕಟೇಶ, ತನ್ನ ಸ್ನೇಹಿತ ಶ್ರೀನಾಥ್ ಜೊತೆ ಸೇರಿಕೊಂಡು ನರಸಿಂಹಪ್ಪನನ್ನು ಮದ್ಯಪಾನ ಮಾಡಲು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ನಂತರ ಅಲ್ಲೆ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಶವವನ್ನು ಪಕ್ಕದ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಸದ್ಯ ಪೊಲೀಸರು ನರಸಿಂಹಪ್ಪನ ಶವವನ್ನು ಹೊರಕ್ಕೆ ತೆಗೆದು, ತನಿಖೆ ಚುರುಕುಗೊಳಿಸಿದ್ದಾರೆ.

ಗಂಡ ಮೂವರು ಸುಂದರ ಮಕ್ಕಳಿದ್ರೂ, ಪತ್ನಿಯಾದವಳು… ತನ್ನ ಪಾಡಿಗೆ ತಾನು ಇರದೆ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಬೆಳೆಸಿ, ಅದಕ್ಕಾಗಿ ತನ್ನ ಸಂಸಾರವನ್ನು ತಾನೆ ಹಾಳು ಮಾಡಿಕೊಂಡಿದ್ದಾಳೆ. ಇನ್ನು ತಂದೆಯು ಸಾವಿನ ಮನೆ ಸೇರಿದ್ದರೆ, ತಾಯಿ ಜೈಲು ಪಾಲಾಗಿದ್ದಾಳೆ, ತಮ್ಮದಲ್ಲದ ತಪ್ಪಿಗೆ ಮೂವರು ಮಕ್ಕಳು ಅನಾಥರಾಗಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಹೆಚ್ಚಿನ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ