Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!

Crime News: ಹಿಂದಿಯ ‘ಕಬೂಲ್ ಹೈ’ ಧಾರಾವಾಹಿ ನೋಡಿದ ಹುಡುಗಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಸಾವಿನ ಕತೆ ಕಟ್ಟಿದ್ದಾಳೆ. ತನ್ನಷ್ಟೇ ಎತ್ತರದ ಇನ್ನೊಬ್ಬ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು, ಆಕೆಯನ್ನು ಕೊಂದಿದ್ದಾಳೆ.

Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!
ಪಾಯಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 02, 2022 | 6:28 PM

ತನ್ನ ಮನೆಯವರ ಸಾವಿಗೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ತಾನು ಆತ್ಮಹತ್ಯೆ (Suicide) ಮಾಡಿಕೊಂಡಿದ್ದೇನೆ ಎಂದು ಕುಟುಂಬಸ್ಥರನ್ನು ನಂಬಿಸಲು ಪ್ಲಾನ್ ಮಾಡಿದಳು. ಅದಕ್ಕಾಗಿ ತನ್ನ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ ಆಕೆ ತನ್ನಷ್ಟೇ ಎತ್ತರವಿದ್ದ ಯುವತಿಯನ್ನು ಕರೆದುಕೊಂಡು ಬಂದು, ಕೊಂದು, ಆಕೆಯ ಮುಖಕ್ಕೆ ಆ್ಯಸಿಡ್ (Acid) ಹಾಕಿ ತಾನೇ ಸಾವನ್ನಪ್ಪಿರುವಂತೆ ಎಲ್ಲರನ್ನೂ ನಂಬಿಸಿದ್ದಾಳೆ. ಆಕೆಯ ಅಂತ್ಯಸಂಸ್ಕಾರವೂ ಆದ ಬಳಿಕ ಸತ್ತಿದ್ದು ಆಕೆಯಲ್ಲ, ಇನ್ನೊಬ್ಬಳು ಯುವತಿ ಎಂಬುದು ಬಯಲಾಗಿದೆ. ಆತ್ಮಹತ್ಯೆಯ ಜಾಡನ್ನು ಹಿಡಿದ ಪೊಲೀಸರು ನಿಗೂಢ ಕೊಲೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಆ ಯುವತಿಯ ಈ ಖತರ್ನಾಕ್ ಪ್ಲಾನ್​ಗೆ ಸ್ಫೂರ್ತಿ ನೀಡಿದ್ದು ಹಿಂದಿಯ ಧಾರಾವಾಹಿ.

ಹಿಂದಿಯ ‘ಕಬೂಲ್ ಹೈ’ ಧಾರಾವಾಹಿ ನೋಡಿದ ಹುಡುಗಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಸಾವಿನ ಕತೆ ಕಟ್ಟಿದ್ದಾಳೆ. ತನ್ನಷ್ಟೇ ಎತ್ತರದ ಇನ್ನೊಬ್ಬ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು, ಆಕೆಯನ್ನು ಕೊಂದಿದ್ದಾಳೆ. ಕೊಲೆಯಾದ ಬಳಿಕ ಆ ಯುವತಿಯ ಮುಖವನ್ನು ಗುರುತು ಹಿಡಿಯದಂತೆ ಆ್ಯಸಿಡ್‌ನಿಂದ ಸುಟ್ಟು ಹಾಕಿದ್ದಾಳೆ. ಆಕೆಯ ದೇಹದ ಪಕ್ಕದಲ್ಲಿ ತಾನೇ ಬರೆದ ಸೂಸೈಡ್ ನೋಟ್ ಇಟ್ಟು, ತಾನು ಹಾಕುತ್ತಿದ್ದ ರೀತಿಯ ಬಟ್ಟೆಯನ್ನು ಆಕೆಗೆ ಹಾಕಿ ಎಲ್ಲರನ್ನೂ ನಂಬುವಂತೆ ಮಾಡಿದ್ದಾಳೆ.

ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿ ಆಕೆಯ ಸಹೋದರ ಆ ದೇಹಕ್ಕೆ ಅಂತ್ಯಕ್ರಿಯೆಯನ್ನೂ ಮಾಡಿದ್ದಾನೆ. ಇದೆಲ್ಲ ನಡೆದು ಬಹಳ ಸಮಯದ ನಂತರ ಅಸಲಿ ಸತ್ಯ ಏನೆಂಬುದು ಬಯಲಾಗಿದೆ. ಆ ಯುವತಿಯ ಆತ್ಮಹತ್ಯೆಯ ನಾಟಕಕ್ಕೆ ಅಮಾಯಕ ಯುವತಿಯೊಬ್ಬಳ ಕೊಲೆ ನಡೆದಿದೆ. ನೊಯ್ಡಾದ ಬಿಸ್ರಖ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಇದನ್ನೂ ಓದಿ: ನಟಿ ಸೋನಾಲಿ ಸಾವಿಗೆ ಬಿಗ್ ಟ್ವಿಸ್ಟ್​; ಮರಣೋತ್ತರ ಪರೀಕ್ಷೆಯಿಂದ ಹೊರ ಬಂತು ಶಾಕಿಂಗ್ ವಿಚಾರ

ನವೆಂಬರ್ 12ರಂದು ಈ ಘಟನೆ ನಡೆದಿದ್ದು, ದಾದ್ರಿ ಪೊಲೀಸರಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಬಂದಿತ್ತು. ಆಕೆಗೆ 21 ವರ್ಷ ವಯಸ್ಸಾಗಿತ್ತು. ಯುವತಿಯ ಮುಖ ಸುಟ್ಟು ಕರಕಲಾಗಿದ್ದು, ಮೃತದೇಹದ ಬಳಿ ಸೂಸೈಡ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ನನ್ನ ಮೈ, ಮುಖವೆಲ್ಲ ಸುಟ್ಟುಹೋಗಿದೆ. ಈ ಮುಖ ಹೊತ್ತುಕೊಂಡು ನನಗೆ ಬದುಕಲು ಇಷ್ಟವಿಲ್ಲ ಎಂದು ಬರೆಯಲಾಗಿತ್ತು. ಹೀಗಾಗಿ, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಪೊಲೀಸರು ಕೂಡ ನಂಬಿದ್ದರು. ಆಕೆಯ ಮನೆಯವರೂ ಹಾಗೇ ಅಂದುಕೊಂಡಿದ್ದರು.

ತನ್ನ ಇಬ್ಬರು ಅನ್ಣಂದಿರೊಂದಿಗೆ ವಾಸಿಸುತ್ತಿದ್ದ ಪಾಯಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಲಾಗಿತ್ತು. ಆದರೆ, ಅದು ಪಾಯಲ್ ಶವವಲ್ಲ, ಹೇಮಲತಾಳದ್ದು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಬಯಲಾಗಿದೆ.

ಸತ್ಯ ಬೆಳಕಿಗೆ ಬಂದಿದ್ದು ಹೇಗೆ?: ನವೆಂಬರ್ 12ರಂದು ನಡೆದ ಈ ಪ್ರಕರಣದಲ್ಲಿ ಇದೀಗ ಹೊಸ ತಿರುವು ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಯುವತಿ ಇನ್ನೂ ಬದುಕಿಯೇ ಇದ್ದಾಳೆ. ಅಲ್ಲಿ ಪತ್ತೆಯಾದ ಶವ ಬೇರೆ ಯುವತಿಯದ್ದು ಎಂಬುದು ಬಯಲಾಗಿದೆ. ಹೇಮಲತಾ ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸರು ಹೇಮಲತಾಳ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದಾಗ, ಅವರಿಗೆ ಅಜಯ್ ಎಂಬುವವರ ನಂಬರ್ ಸಿಕ್ಕಿತು. ಆತ ಪಾಯಲ್​ಳ ಪ್ರೇಮಿಯಾಗಿದ್ದ. ಹೇಮಲತಾ ಎಲ್ಲಿ ಹೋದಳೆಂದು ಅಜಯ್‌ನನ್ನು ವಿಚಾರಣೆಗೊಳಪಡಿಸಿದಾಗ ಆತ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಹಿಂದಿಯ ಕಬೂಲ್ ಹೈ ಧಾರಾವಾಹಿಯನ್ನು ನೋಡಿ ಈ ಪ್ಲಾನ್ ಮಾಡಿದ್ದಾಗಿ ಆತ ಹೇಳಿದ್ದಾನೆ.

ಇದನ್ನೂ ಓದಿ: Viral Video: ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ಯುವಕ; ಮೊಬೈಲ್​ನಲ್ಲಿ ಸೆರೆಯಾಯ್ತು ಶಾಕಿಂಗ್ ವಿಡಿಯೋ

ಹೇಮಲತಾ ಕೊಲೆ ಯಾಕೆ?: ಪಾಯಲ್​ಳ ತಂದೆ-ತಾಯಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೆ ಕಾರಣವಾದ ತನ್ನ ಮಾವ- ಅತ್ತೆಯ ಮೇಲೆ ಪಾಯಲ್​ಗೆ ಕೋಪವಿತ್ತು. ಅವರನ್ನು ಕೊಲ್ಲಬೇಕೆಂದು ಆಕೆ ನಿರ್ಧರಿಸಿದ್ದಳು. ಆದರೆ, ತಾನೇ ಕೊಂದಿದ್ದು ಎಂದು ಗೊತ್ತಾದರೆ ತಾನು ಕೂಡ ಜೈಲು ಸೇರಬೇಕೆಂಬ ಕಾರಣಕ್ಕೆ ತಾನೇ ಮೊದಲು ಸಾವನ್ನಪ್ಪಿರುವಂತೆ ಎಲ್ಲರನ್ನೂ ನಂಬಿಸಿ, ನಂತರ ತೆರೆಮರೆಯಲ್ಲಿ ನಿಂತು ಆಟವಾಡಲು ನಿರ್ಧರಿಸಿದ್ದಳು. ಅವಳು ಇಡೀ ಕಲ್ಪನೆಯನ್ನು ಟಿವಿ ಧಾರಾವಾಹಿ ‘ಕಬೂಲ್ ಹೈ’ ನೋಡಿ ಪ್ಲಾನ್ ಮಾಡಿದ್ದಳು.

ಇದಕ್ಕಾಗಿ ಪಾಯಲ್ ತನ್ನಂತೆಯೇ ಕಾಣುತ್ತಿದ್ದ ಹೇಮಲತಾಳನ್ನು ಬದ್ಪುರದಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದಳು. ಹೇಮಲತಾ ಹತ್ಯೆಯ ನಂತರ ಪಾಯಲ್ ತನ್ನ ಸೋದರ ಮಾವಂದಿರನ್ನು ಕೊಲ್ಲಲು ಯೋಜಿಸಿದ್ದಳು. ತಾನು ಸತ್ತುಹೋಗಿರುವುದಾಗಿ ಎಲ್ಲರೂ ನಂಬಿದರೆ ತಾನೇ ಕೊಲೆ ಮಾಡಿದರೂ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಆಕೆಯ ಯೋಚನೆಯಾಗಿತ್ತು. ಹಾಗೇ, ಪಾಯಲ್ ಮತ್ತು ಅಜಯ್​ನ ಮದುವೆಗೆ ಆಕೆಯ ಅಣ್ಣಂದಿರಿಂದ ವಿರೋಧವಿತ್ತು. ಈ ಆತ್ಮಹತ್ಯೆ ನಾಟಕದ ನಂತರ ಅಜಯ್​ನನ್ನು ಮದುವೆಯಾಗಿ ದೂರದಲ್ಲಿ ಎಲ್ಲಾದರೂ ಹೋಗಿ ಸೆಟಲ್ ಆಗಲು ಆಕೆ ಬಯಸಿದ್ದಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್