ಬೆಂಗಳೂರು: ಪೊಲೀಸರ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನೆಲಮಂಗಲದ ದರೋಡೆಕೋರ ಯೋಗಾನಂದ ಅಲಿಯಾಸ್ ನೈಟ್ಶಿಫ್ಟ್ ಯೋಗಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಪೊಲೀಸರು ಎಚ್ಚರಿಸಿದರು. ರೌಡಿ ಹೆದರದಿದ್ದಾಗ ಕಾಲಿಗೆ ಗುಂಡು ಹಾರಿಸಿದರು ಎಂದು ಮೂಲಗಳು ಹೇಳಿವೆ. ನೆಲಮಂಗಲದ ದಾನೋಜಿಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ಈತ ಕುಖ್ಯಾತ ದರೋಡೆಕೋರನಾಗಿದ್ದ. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಾಲೋಬ್ರಿಕ್ಸ್ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ. ಕಾನ್ಸ್‌ಟೆಬಲ್ ಹನುಮಂತ ಹಿಪ್ಪರಗಿ ಅವರ ಕೈಗಳಿಗೆ ಗಾಯವಾಯಿತು. ಈ ಸಂದರ್ಭದಲ್ಲಿ ನೆಲಮಂಗಲ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಶಶಿಧರ್‌ರಿಂದ ಗುಂಡು ಹಾರಿಸಿದರು. ಆರೋಪಿಯ ಮೇಲೆ 18 ಪ್ರಕರಣಗಳಿವೆ.
ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ
ಬೆಂಗಳೂರು ನಗರದಲ್ಲಿ 86 ರೌಡಿಶೀಟರ್ಗಳಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರೌಡಿಸಂನಲ್ಲಿ ಆ್ಯಕ್ಟೀವ್ ಆಗಿರುವ ರೌಡಿಶೀಟರ್ ಮನೆಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಎಲ್ಲಾ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಐವರು ಎಸಿಪಿ, 20 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ನಗರದ ಪ್ರಮುಖ ರೌಡಿಶೀಟರ್ಗಳ ಮನೆಗಳ ಮೇಲೆ ರೇಡ್ ನಡೆಸಿ ಸಿಸಿಬಿ ಪರಿಶೀಲನೆ ನಡೆಸಿದೆ.
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗನ ಮನೆ ಮೇಲೂ ದಾಳಿ ನಡೆಸಿದ್ದು ಸಿಸಿಬಿ ದಾಳಿ ವೇಳೆ ಇಬ್ಬರು ರೌಡಿಗಳು ಮನೆಗಳಲ್ಲಿ ಇರಲಿಲ್ಲ. ರೇಡ್ ವೇಳೆ ರೌಡಿಶೀಟರ್ಗಳಾದ ಕೋತಿರಾಮ, ಆರ್.ಟಿ.ನಗರದ ವೆಂಕಟೇಶ್ ಸೇರಿ 26 ರೌಡಿಶೀಟರ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಬೆಂಗಳೂರು ರೌಡಿಶೀಟರ್ಗಳಿಗೆ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Published On - 9:46 am, Wed, 23 November 22