ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದ, ಆದ್ರೆ ಆಪರೇಶನ್ ಮಾಡಿದ್ದು ಬೆಂಗಳೂರು ಪೊಲೀಸರು!

ಕೊವಿಡ್ ಸೋಂಕಿನ ಹೊಸ ತಳಿ ಒಮಿಕ್ರಾನ್ ಕಾಲಿಟ್ಟಿದ್ದು ಈ ಬಾರಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಮಂಕು ಕವಿದಿದೆ. ಆದರೆ ಮಾದಕವಸ್ತು ಪ್ರಿಯರ ಮೇಲೆ ಅದೇನೂ ಎಫೆಕ್ಟ್ ಇಲ್ಲವೆನಿಸುತ್ತಿದೆ. ​ ಏಕೆಂದರೆ ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಮಾದಕವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವಂತಾಗಿದೆ. ಆದರೆ ಬೆಂಗಳೂರಲ್ಲಿ ಮಾದಕವಸ್ತು ಮಾರಾಟ ಜಾಲ ಫುಲ್ ಆಕ್ವೀವ್ ಹಿನ್ನೆಲೆ ಬೆಂಗಳೂರು ಪೊಲೀಸರು ನಗರದಾದ್ಯಂತ ಫುಲ್ ಅಲರ್ಟ್ ಆಗಿದ್ದಾರೆ.

ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದ, ಆದ್ರೆ ಆಪರೇಶನ್ ಮಾಡಿದ್ದು ಬೆಂಗಳೂರು ಪೊಲೀಸರು!
ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಮಾದಕವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಡು! ಬೆಂಗಳೂರಲ್ಲಿ ಮಾರಾಟ ಜಾಲ ಫುಲ್ ಆಕ್ವೀವ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 15, 2021 | 10:50 AM

ಬೆಂಗಳೂರು: ಕೊವಿಡ್ ಸೋಂಕಿನ ಹೊಸ ತಳಿ ಒಮಿಕ್ರಾನ್ ಕಾಲಿಟ್ಟಿದ್ದು ಈ ಬಾರಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಮಂಕು ಕವಿದಿದೆ. ಆದರೆ ಮಾದಕವಸ್ತು ಪ್ರಿಯರ ಮೇಲೆ ಅದೇನೂ ಎಫೆಕ್ಟ್ ಇಲ್ಲವೆನಿಸುತ್ತಿದೆ. ​ ಏಕೆಂದರೆ ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಮಾದಕವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವಂತಾಗಿದೆ. ಬೆಂಗಳೂರಲ್ಲಿ ಮಾದಕವಸ್ತು ಮಾರಾಟ ಜಾಲ ಫುಲ್ ಆಕ್ವೀವ್ ಹಿನ್ನೆಲೆ ಬೆಂಗಳೂರು ಪೊಲೀಸರು ನಗರದಾದ್ಯಂತ ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಆಗಿದ್ದಾರೆ. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಸದ್ಯ ಅಂದರ್ ಆಗಿದೆ.

ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ರಚನೆಯಾಗಿದ್ದ ಕೋಣನಕುಂಟೆ ಕೆ.ಎಸ್. ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ ಭರ್ಜಿ ಕಾರ್ಯಾಚರಣೆ ನಡೆಸಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸ್ತಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ನ್ಯೂ ಇಯರ್ ಹಿನ್ನೆಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕೋಣನಕುಂಟೆ ಪೊಲೀಸರ ಕಾರ್ಯಾಚರಣೆ

ಕೋಣನಕುಂಟೆ ಪೊಲೀಸರಿಂದ ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಮಣಿಪುರಿ ಗ್ಯಾಂಗ್ ಅಂದರ್ ಆಗಿದ್ದು, ಮಾದಕವಸ್ತು ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರ ಬಂಧನವಾಗಿದೆ. ಮೊಯಿನ್ ಅಲಾಂ, ಮೊಹದ್ ಸಯಿದುರ್ ಮತ್ತು ವಾಕೀಮ್ ಯೂನಸ್ ಬಂಧಿತ ಮಣಿಪುರಿ ಪೆಡ್ಲರ್ ಗಳು. ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಈ ಗ್ಯಾಂಗ್​ನವರು ಒಂದು ಗ್ರಾಂ ಹೆರಾಯಿನ್ ನನ್ನ ಇಪ್ಪತ್ತರಿಂದ ಇಪ್ಪತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬಂಧಿತ ಮಣಿಪುರಿ ಗ್ಯಾಂಗ್ ವಿರುದ್ದ ಕೋಣನಕುಂಟೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಎಸ್. ಲೇಔಟ್ ಠಾಣೆ ಪೊಲೀಸರ ಕಾರ್ಯಾಚರಣೆ

ಕೆ.ಎಸ್. ಲೇಔಟ್ ಠಾಣೆ ಪೊಲೀಸರು ವಿದೇಶಿ ಡ್ರಗ್ ಪೆಡ್ಲರ್ ನೈಜೀರಿಯಾ ಮೂಲದ ಡೊಲೊಬಥ್ಲೆಮಿ ಎಂಬುವನನ್ನು ಬಂಧಿಸಿದ್ದಾರೆ. ಈತ ನಗರದ HRBR ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಪೂರ್ವ ವಿಭಾಗದಲ್ಲಿ ವಾಸವಿದ್ದು ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಡ್ರಗ್ ಪೆಡ್ಲಿಂಗ್ ನಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ಕಂಡುಕೊಂಡಿದ್ದ. ಬಂಧಿತನಿಂದ 1.30 ಲಕ್ಷ ಮೌಲ್ಯದ 20 ಗ್ರಾಂ ಎಂಡಿಎಂಎ ಸಿಂಥೆಟಿಕ್ ಡ್ರಗ್ ವಶ ಪಡಿಸಿಕೊಳ್ಳಲಾಗಿದೆ. ಬಂಧಿತ ಡ್ರಗ್ ಪೆಡ್ಲರ್ ವಿರುದ್ದ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನಶಂಕರಿ ಠಾಣೆ ಪೊಲೀಸರ ಕಾರ್ಯಾಚರಣೆ

ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನವಾಗಿದೆ. ಶಸ್ತ್ರಚಿಕಿತ್ಸೆ ಮಾಡಿಸ್ಕೊಳೋಕೆ ಅಂತಾ ಬಂದೋನು ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದಾನೆ. ಗಂಟಲ ಶಸ್ತ್ರಚಿಕಿತ್ಸೆಗೆಂದು ಬಂದು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಗಂಟಲ ಚಿಕಿತ್ಸೆಗೆಂದು ಮೆಡಿಕಲ್ ವೀಸಾದಡಿ ಬಂದಿದ್ದ ಆರೋಪಿ ಇವನು. ನೈಜೀರಿಯಾ ಮೂಲದ ಪ್ರಿನ್ಸ್ ಅನಿ ಚಿಡೋಜಿ ಬಂಧಿತ ಆರೋಪಿ.

ಮತ್ತೋರ್ವ ಆರೋಪಿ ಫೊಫಾನ ಅಹಮದ್ ಬಿಜಿನೆಸ್ ವೀಸಾದಡಿ ಭಾರತಕ್ಕೆ ಬಂದು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ. ಆರೋಪಿಗಳಿಬ್ಬರೂ ತಮ್ಮ ವೀಸಾ ಅವಧಿ ಮುಕ್ತಾಯವಾಗಿದ್ರು ಅಕ್ರಮವಾಗಿ ವಾಸವಿದ್ದರು. ಬಂಧಿತರಿಂದ 1.80 ಲಕ್ಷ ಮೌಲ್ಯದ ಎಂಡಿಎಂಎ ಸಿಂಥೆಟಿಕ್ ಡ್ರಗ್, 7 ಸಾವಿರ ನಗದು ಹಣ, 1 ಮೊಬೈಲ್, 1 ಬೈಕ್ ವಶಕ್ಕೆ ಪಡೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಆರೋಪಿಗಳು ಸಿಂಥೆಟಿಕ್ ಡ್ರಗ್ ಸಪ್ಲೈ ಮಾಡ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Published On - 9:09 am, Wed, 15 December 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ