ಕುಖ್ಯಾತ ರೌಡಿಶೀಟರ್ ‘ಮಿಂಡ’ಗೆ ಗೂಂಡಾ ಕಾಯ್ದೆ ಗುನ್ನಾ..

ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ರೌಡಿಶೀಟರ್​ನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಕುಮಾರ್ (30) ಅಲಿಯಾಸ್​ ಮಿಂಡ ಬಂಧಿತ ರೌಡಿಶೀಟರ್. ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್ ಬಂಧನವಾಗಿದ್ದು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. 2010ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ವಿನಯ್ ಕುಮಾರ್ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಸಂಚು ಸೇರಿದಂತೆ ಮತ್ತಿತರ ಪ್ರಕರಣಗಳು ದಾಖಲಾಗಿದೆ. 2015ರಲ್ಲಿ‌ ಗೂಂಡಾ ಕಾಯ್ದೆಯಡಿ‌ ಬಂಧನವಾಗಿದ್ದ ಆರೋಪಿ 2016ರಲ್ಲಿ‌ ಬಿಡುಗಡೆಯಾಗಿದ್ದ ವೇಳೆ ಮತ್ತೆ ಅಪರಾಧ […]

ಕುಖ್ಯಾತ ರೌಡಿಶೀಟರ್ ‘ಮಿಂಡ’ಗೆ ಗೂಂಡಾ ಕಾಯ್ದೆ ಗುನ್ನಾ..
Edited By:

Updated on: Sep 03, 2020 | 4:15 PM

ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ರೌಡಿಶೀಟರ್​ನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಕುಮಾರ್ (30) ಅಲಿಯಾಸ್​ ಮಿಂಡ ಬಂಧಿತ ರೌಡಿಶೀಟರ್.

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್ ಬಂಧನವಾಗಿದ್ದು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. 2010ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ವಿನಯ್ ಕುಮಾರ್ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಸಂಚು ಸೇರಿದಂತೆ ಮತ್ತಿತರ ಪ್ರಕರಣಗಳು ದಾಖಲಾಗಿದೆ.

2015ರಲ್ಲಿ‌ ಗೂಂಡಾ ಕಾಯ್ದೆಯಡಿ‌ ಬಂಧನವಾಗಿದ್ದ ಆರೋಪಿ 2016ರಲ್ಲಿ‌ ಬಿಡುಗಡೆಯಾಗಿದ್ದ ವೇಳೆ ಮತ್ತೆ ಅಪರಾಧ ಚಟುವಟಿಕೆಗಳನ್ನ ಮುಂದುವರೆಸಿದ್ದ ಎಂದು ತಿಳಿದುಬಂದಿದೆ.