ಕಲಬುರಗಿ: ದೇವರ ಹೆಸರಿನಲ್ಲಿ ಭವಿಷ್ಯ ಹೇಳುತ್ತಿದ್ದ ವೃದ್ಧೆಯ ಕೊಲೆ

| Updated By: ವಿವೇಕ ಬಿರಾದಾರ

Updated on: Nov 22, 2023 | 8:29 AM

ಮಾರಕಾಸ್ತ್ರಗಳಿಂದ ಕೊಚ್ಚಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಸಂತೋಷ್ ಕಾಲೋನಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಅತ್ಯಾಚಾರವೆಸಗಿ ವೃದ್ದೆಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿ: ದೇವರ ಹೆಸರಿನಲ್ಲಿ ಭವಿಷ್ಯ ಹೇಳುತ್ತಿದ್ದ ವೃದ್ಧೆಯ ಕೊಲೆ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ ನ.22: ಮಾರಕಾಸ್ತ್ರಗಳಿಂದ ಕೊಚ್ಚಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯ (Kalaburagi) ಸಂತೋಷ್ ಕಾಲೋನಿಯಲ್ಲಿ ನಡೆದಿದೆ. ರತ್ನಾಬಾಯಿ (65) ಕೊಲೆಯಾದ ವೃದ್ದೆ. ಮೃತ ರತ್ನಾಬಾಯಿ ದೇವರ ಹೆಸರಿನಲ್ಲಿ ಭವಿಷ್ಯ ಹೇಳುತ್ತಿದ್ದು, ಸಂತೋಷ್ ಕಾಲೋನಿಯಲ್ಲಿ ಒಂಟಿಯಾಗಿ ಶೆಡ್​ನಲ್ಲಿ ವಾಸವಾಗಿದ್ದಳು. ದುಷ್ಕರ್ಮಿಗಳು ಅತ್ಯಾಚಾರವೆಸಗಿ ವೃದ್ದೆಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿಯ ಆರ್‌.ಜೆ.ನಗರ ಪೋಲಿಸ್ (Police)​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವ ವಿಚಾರಕ್ಕೆ ಚಾಕು ಇರಿತ

ಬೆಂಗಳೂರು: ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವ ವಿಚಾರಕ್ಕೆ ವ್ಯಕ್ತಿಗೆ ಚಾಕುವಿನಿಂದ ಇರಿದಿರುವ ಘಟನೆ ನ್ಯೂ ಬಾಗಲೂರು ಲೇಔಟ್​ನಲ್ಲಿ ನಡೆದಿದೆ. ಸ್ಟೀಫನ್ (23) ಗಾಯಗೊಂಡ ವ್ಯಕ್ತಿ.  ನವೆಂಬರ್​ 13 ರಂದು ರಾತ್ರಿ 9:30ರ ಸುಮಾರಿಗೆ ಸ್ಟೀಫನ್ ಸಹೋದರನನ್ನು ಪಿಕ್ ಮಾಡಲು ತೆರಳುತಿದ್ದರು. ಈ ವೇಳೆ ಆರೋಪಿಗಳು ಪಟಾಕಿ ಹಚ್ಚಿ ರಸ್ತೆಗೆ ಎಸೆಯುತಿದ್ದರು. ಇದನ್ನು ಕಂಡ ಸ್ಟೀಫನ್​​ ರಸ್ತೆ ಪಕ್ಕಕ್ಕೆ ಹೋಗಿ ಪಟಾಕಿ ಸಿಡಿಸಿ ಎಂದು ಹೇಳಿದ್ದಾರೆ. ಇಷ್ಟಕ್ಕೆನೇ ಆರೋಪಿಗಳು ಚಾಕುವಿನಿಂದ ಇರಿದು, ಬಳಿಕ ಕೈ ಮತ್ತು ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಕೆಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸತ್ತು ಹೋಗಿದ್ದೇನೆ ಎಂದು ನಂಬಿಸಿ 2 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಅರೆಸ್ಟ್!‌

ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳ್ಳತನ

ನೆಲಮಂಗಲ: ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ವ್ಯಕ್ತಿ ಕಾಪರ್​ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಆರೋಪಿ ಪ್ರದೀಪ್ ಹೀಟರ್ ಕಂಪನಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಯಲ್ಲಿ 100 ಕೆಜಿಗೂ ಹೆಚ್ಚು ಕಾಪರ್ ಕದ್ದು ಗುಜರಿ ಹಾಕುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ