ಸೆನ್ಸೇಷನಲ್ ಕ್ರೈಮ್: 45ರ ಮನೆಕೆಲಸದವನೊಂದಿಗೆ 14ರ ಪ್ರಾಯದ ಮಗಳನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ತಲ್ವಾರ್ ದಂಪತಿ ಇಬ್ಬರನ್ನೂ ಕೊಂದುಬಿಟ್ಟರೆ?

| Updated By: Digi Tech Desk

Updated on: Oct 19, 2022 | 9:51 AM

ತೀರ್ಪಿನ ವಿರುದ್ಧ ತಲ್ವಾರ್ ದಂಪತಿ ಅಲಹಾಬಾದ್ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದರು. 2017 ಅಕ್ಟೋಬರ್ ನಲ್ಲಿ ಕೋರ್ಟ್ ದಂಪತಿಯನ್ನು ಖುಲಾಸೆಗೊಳಿಸಿತು ಮತ್ತು ಇವತ್ತಿನವರೆಗೆ ಅವರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

ಸೆನ್ಸೇಷನಲ್ ಕ್ರೈಮ್: 45ರ ಮನೆಕೆಲಸದವನೊಂದಿಗೆ 14ರ ಪ್ರಾಯದ ಮಗಳನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ತಲ್ವಾರ್ ದಂಪತಿ ಇಬ್ಬರನ್ನೂ ಕೊಂದುಬಿಟ್ಟರೆ?
ನೂಪುರ್, ಆರುಷಿ ಮತ್ತು ರಾಜೇಶ್ ತಲ್ವಾರ್
Follow us on

ಸೆನ್ಸೇಷನಲ್ ಕ್ರೈಮ್ ಕತೆಗಳ ಇವತ್ತಿನ ಭಾಗದಲ್ಲಿ ನಾವು ಭಾರತದಲ್ಲಿ ತೀವ್ರ ಸಾರ್ವಜನಿಕ ಕುತೂಹಲ ಕೆರಳಿಸಿದ್ದ ಆರುಷಿ ತಲ್ವಾರ್ (Aarushi Talwar) ಹತ್ಯೆ ಪ್ರಕರಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅಸಲಿಗೆ ಇದೊಂದು ಡಬಲ್ ಮರ್ಡರ್ ಕೇಸ್. ಹೌದು, ಆರುಷಿಯ ಜೊತೆ ಅವರ ಮನೆಕೆlದವನಾಗಿದ್ದ ಹೇಮರಾಜ್ (Hemraj) ಕೊಲೆಯೂ ನಡೆದಿತ್ತು. ಈ ಪ್ರಕರಣ ಯಾಕೆ ಅಷ್ಟೆಲ್ಲ ಕುತೂಹಲ ಕೆರಳಿಸಿತ್ತೆಂದರೆ, ವರ್ಷಗಟ್ಟಲೆ ನಡೆದ ತನಿಖೆಯ ನಂತರ ಆರುಷಿಯ ತಂದೆ ತಾಯಿಗಳೇ ಜೋಡಿ ಕೊಲೆ ಮಾಡಿದ್ದು ಅಂತ ಸಾಬೀತಾಗಿತ್ತು. ಅಂದಹಾಗೆ, ಆರುಷಿಯ ಮಮ್ಮಿ-ಡ್ಯಾಡಿ ಡಾ ನೂಪುರ್ ತಲ್ವಾರ್ (Dr Nupur Talwar) ಮತ್ತು ಡಾ ರಾಜೇಶ್ ತಲ್ವಾರ್ (Dr Rajesh Talwar) ಇಬ್ಬರೂ ದಂತ ವೈದ್ಯರಾಗಿದ್ದರು ಹಾಗೂ ದೆಹಲಿಯ ಪ್ರತಿಷ್ಠಿತ ಮಾರ್ಕೆಟ್ ಪ್ರದೇಶವೊಂದರಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಪ್ರ್ಯಾಕ್ಟೀಸ್ ಜೋರಾಗಿದ್ದರಿಂದ ಸಂಪಾದನೆಯೂ ಹೇರಳವಾಗಿತ್ತು. 2008ರಲ್ಲಿ ಆರುಷಿಯ ಕೊಲೆ ನಡೆದಾಗ ಅವಳಿಗೆ ಕೇವಲ 14 ರ ಪ್ರಾಯ ಮತ್ತು ನೋಯ್ಡಾದ ಡೆಲ್ಲಿ ಪಬ್ಲಿಕ್ ಸ್ಕೂಲಲ್ಲಿ 8 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಅಸಲಿಗೆ ನಡೆದಿದ್ದೇನು?

ಮೇ 16, 2008 ರಂದು ಆರುಷಿಯ ತಲ್ವಾರ್ ಳ ರಕ್ತಸಿಕ್ತ ದೇಹ ನೋಯ್ಡಾದ ಅವಳ ಕುಟುಂಬ ವಾಸವಾಗಿದ್ದ ಫ್ಲ್ಯಾಟೊಂದರ ಬಾತ್ ರೂಮಲ್ಲಿ ಸಿಕ್ಕಿತ್ತು. 14ರ ಬಾಲೆಯ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಅವಳ ಕೊಲೆಯ ಪ್ರಮುಖ ಶಂಕಿತ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮತ್ತು ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದ 45-ವರ್ಷ-ವಯಸ್ಸಿನ ಹೇಮರಾಜ್ ಆಗಿದ್ದ.

ಆದರೆ ಮರುದಿನವೇ ಅವನ ಮೃತದೇಹವೂ ತಲ್ವಾರ್ ಗಳ ಮನೆ ಮಾಳಿಗೆ ಮೇಲೆ ಸಿಕ್ಕಿತು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರೂ ಹೇಮರಾಜ್ ಕೊಲೆ ಹೇಗೆ ನಡೆಯಿತು ಅಂತ ಪೊಲೀಸರು ತುಂಬಾನೇ ತಲೆಕೆಡಿಸಿಕೊಂಡರು. ಅರು ದಿನಗಳ ತನಿಖೆ ನಡೆಸಿದ ಬಳಿಕ ಪೊಲೀಸರು ಆರುಷಿಯ ‘ಮರ್ಯಾದಾ ಹತ್ಯೆ’ ನಡೆದಿದೆ ಎಂಬ ನಿರ್ಣಯಕ್ಕೆ ಬಂದರು. ತನ್ನ ಮಗಳನ್ನು ಮನೆಕೆಲಸದವನೊಂದಿಗೆ ನೋಡಲಾಗದ ಸ್ಥಿತಿಯಲ್ಲಿ ನೋಡಿಬಿಟ್ಟ ಅವಳ ತಂದೆ ರಾಜೇಶ್ ತಲ್ವಾರ್ ಇಬ್ಬರನ್ನೂ ಕೊಂದುಬಿಟ್ಟ ಅಂತ ಪೊಲೀಸರು ಹೇಳಿದರು.

ಪ್ರಕರಣ ಇವತ್ತು ಯಾವ ಹಂತದಲ್ಲಿದೆ?

ಪೊಲೀಸರು ಮೇ 23 ರಂದು ರಾಜೇಶ್ ತಲ್ವಾರ್ ನನ್ನು ಜೋಡಿ ಕೊಲೆ ಆರೋಪದಲ್ಲಿ ಬಂಧಿಸಿದ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತು. ಅಧಿಕಾರಿಗಳು ರಾಜೇಶ್ ಮತ್ತು ನೂಪುರ್ ಇಬ್ಬರನ್ನು ಲೈ ಡಿಟೆಕ್ಟರ್ ಟೆಸ್ಟ್ ಗೆ ಒಳಪಡಿಸಿದರು. ಸುಮಾರು ಎರಡೂವರೆ ವರ್ಷ ತನಿಖೆ ನಡೆಸಿ ಸಿಬಿಐ ಡಿಸೆಂಬರ್ 2010 ರಲ್ಲಿ ‘ಸಾಕ್ಷ್ಯದ ಕೊರತೆ’ ಅಂತ ಹೇಳಿ ಪ್ರಕರಣವನ್ನು ಕ್ಲೋಸ್ ಮಾಡಿತು.

ಆದರೆ, ನಂತರ ಅಪರಾಧ ಸನ್ನಿವೇಶವನ್ನು ಮರುಸೃಷ್ಟಿಸಲಾಯಿತು. ಕ್ರೈಮ್ ನಡೆದ ಸ್ಥಳದಲ್ಲಿ ಬೇರೆ ಯಾರದ್ದೇ ಪ್ರವೇಶ ಶಕ್ಯವಿರದ ಕಾರಣ ಫೆಬ್ರುವರಿ 2011ರಲ್ಲಿ ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ತಲ್ವಾರ್ ದಂಪತಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಸಿಬಿ ಐ ಕೋರ್ಟ್ ನಲ್ಲಿ ವಾದ ವಿವಾದ ನಡೆದ ನಂತರ ಅಂತಿಮವಾಗಿ ನವೆಂಬರ್ 25, 2013 ರಲ್ಲಿ ತಲ್ವಾರ್ ದಂಪತಿಗೆ ಜೋಡಿ ಕೊಲೆ ಮತ್ತು ಸಾಕ್ಷ್ಯ ನಾಶಮಾಡಿದ ಅಪರಾಧದಲ್ಲಿ ದೋಷಿಗಳೆಂದು ಘೋಷಿಸಿತು. ಒಂದು ದಿನ ತರುವಾಯ ಸಿಬಿಐ ಕೋರ್ಟ್ ರಾಜೇಶ್ ಮತ್ತು ನೂಪುರ್ ತಲ್ವಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು.

ಅಲಹಾಬಾದ್ ಹೈಕೋರ್ಟ್​ಗೆ ಮೇಲ್ಮನವಿ

ತೀರ್ಪಿನ ವಿರುದ್ಧ ತಲ್ವಾರ್ ದಂಪತಿ ಅಲಹಾಬಾದ್ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದರು. 2017 ಅಕ್ಟೋಬರ್ ನಲ್ಲಿ ಕೋರ್ಟ್ ದಂಪತಿಯನ್ನು ಖುಲಾಸೆಗೊಳಿಸಿತು ಮತ್ತು ಇವತ್ತಿನವರೆಗೆ ಅವರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

2015 ರಲ್ಲಿ ಖ್ಯಾತ ನಿರ್ದೇಶಕಿ ಮೇಘನಾ ಗುಲ್ಜಾರ್ ತಲ್ವಾರ್ ಗಳ ಕತೆಯನ್ನಾಧರಿಸಿ ‘ತಲ್ವಾರ್’ ಹೆಸರಲ್ಲಿ ಒಂದು ಕಮರ್ಷಿಯಲ್ ಸಿನಿಮಾ ತಯಾರಿಸಿದರು. ವಿಶಾಲ್ ಭಾರದ್ವಾಜ್ ಚಿತ್ರ ಕಥೆ ಬರೆದ ಸಿನಿಮಾದಲ್ಲಿ ದಿವಂಗತ ಇರ್ಫಾನ್ ಖಾನ್, ಕೊಂಕಣಸೇನ್ ಶರ್ಮ, ನೀರಜ್, ತಬು ಮೊದಲಾದವರು ನಟಿಸಿದ್ದರು.

Published On - 7:53 am, Wed, 19 October 22