ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಮಿತಿಮೀರಿದೆ. ಬೈಯ್ಯಪ್ಪನಹಳ್ಳಿಯಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಂದ ಪೆಟ್ರೋಲ್ ಕಳವು ಮಾಡಲಾಗಿದೆ. ಪೆಟ್ರೋಲ್ ಕದಿಯುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಅಂಬರ್ಗ್ರಿಸ್ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ ನಾಲ್ವರ ಬಂಧನವಾಗಿದೆ. 11 ಕೋಟಿ ರೂಪಾಯಿ ಮೌಲ್ಯದ 11 ಕೆಜಿ ಅಂಬರ್ಗ್ರಿಸ್ ಜಪ್ತಿ ಮಾಡಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ಮೊಬೈಲ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸ್ಟ್ರಿಬ್ಯೂಷನ್ ವೇಳೆ 41 ಮೊಬೈಲ್‌ಗಳ ಕಳ್ಳತನ ಮಾಡಲಾಗಿತ್ತು. ಅಮೃತಹಳ್ಳಿ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಬಂಧಿತನಿಂದ 5 ಲಕ್ಷ ಮೌಲ್ಯದ 41 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಗೋಲ್ಡ್ ಸ್ಮಗ್ಲಿಂಗ್ ಆರೋಪಿಗಳ ಬಂಧನ
ಯಮಕನಮರಡಿ ಠಾಣೆಯಲ್ಲಿ ನಡೆದಿದ್ದ ಪೊಲೀಸರಿಂದಲೇ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ, ಈಗ ಏನೂ ಹೇಳಲು ಆಗಲ್ಲ. ಯಾವುದೇ ಒತ್ತಡಗಳಿಗೆ ಮಣಿಯದೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರು ಯಾರೇ ಆದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕಚೇರಿಯಲ್ಲಿ ಗ್ರಾಮ ಲೆಕ್ಕಿಗನ ಮದ್ಯ ಪಾರ್ಟಿ ವಿಡಿಯೋ ವೈರಲ್
ಹುನುಕುಂದ ಗ್ರಾಮ ಲೆಕ್ಕಿಗ ಅವಿನಾಶ್ ಎಂಬಾತ ಯುವಕರ ಜತೆ ಸೇರಿ ಸರ್ಕಾರಿ ಕಚೇರಿಯಲ್ಲಿ ಮದ್ಯ ಪಾರ್ಟಿ ಮಾಡಿದರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುನುಕುಂದ ಗ್ರಾಮದಲ್ಲಿ ನಡೆದಿದೆ. ಗ್ರಾಮ ಲೆಕ್ಕಿಗನ ಎಣ್ಣೆ ಪಾರ್ಟಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಡಿಸಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ. ಪ್ರಕರಣ ಸಂಬಂಧ ವರದಿ ನೀಡಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ.
ರೈತರ ಹೆಸರಿನಲ್ಲಿ ಸಾಲ; ಸಹಕಾರ ಸಂಘದ ಕಾರ್ಯದರ್ಶಿಗೆ ಥಳಿತ
ನಕಲಿ ಸಹಿ ಮಾಡಿ ರೈತರ ಹೆಸರಿನಲ್ಲಿ ಸಾಲ ಪಡೆದ ಹಿನ್ನೆಲೆ ಯಲಗೊಂಡ ಸಹಕಾರ ಸಂಘದ ಕಾರ್ಯದರ್ಶಿಗೆ ಥಳಿಸಲಾಗಿದೆ. ಸಂಘದ ಕಾರ್ಯದರ್ಶಿ ರಾಯಪ್ಪಗೌಡಗೆ ರೈತರು ತಳಿಸಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಯಲಗೊಂಡ ಸಹಕಾರ ಸಂಘದ ಕಾರ್ಯದರ್ಶಿ ನಕಲಿ ಸಹಿ ಮಾಡಿ ಲಕ್ಷಾಂತರ ರೂ. ಲಪಟಾಯಿಸಿದ್ದ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ರಾಯಪ್ಪಗೌಡಗೆ ತಳಿಸಿದ್ದಾರೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿನ್ನಾಭರಣ ಕದ್ದು ಯುವತಿ ಪರಾರಿ
ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಯುವತಿ ಪರಾರಿಯಾದ ಘಟನೆ ಮಂಗಳೂರಿನ ಬರ್ಕೆಯ ಗಾಂಧಿನಗರದಲ್ಲಿ ನಡೆದ ನಡೆದಿದೆ. ನಿಶ್ಚಿತಾರ್ಥದ ನಂತರ ಚಿನ್ನಾಭರಣದ ಜತೆ ರೇಷ್ಮಾ ಪರಾರಿ ಆಗಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಗದಗ ಮೂಲದ ಯಶೋಧ ದಂಪತಿಯ ಪುತ್ರಿ ಆಗಿರುವ ರೇಷ್ಮಾ, ಚಿನ್ನದ ಸರ, ಉಂಗುರ, ಓಲೆ, ಬೆಳ್ಳಿ ಗೆಜ್ಜೆ ಜತೆ ರೇಷ್ಮಾ ಎಸ್ಕೇಪ್ ಆಗಿದ್ದಾರೆ. ಪೋಷಕರ ಬ್ಯಾಂಕ್ ಖಾತೆಯಲ್ಲಿದ್ದ 90,000 ಹಣ ವರ್ಗಾವಣೆ ಮಾಡಲಾಗಿದೆ. ಅಕ್ಬರ್ ಎಂಬುವನ ಅಕೌಂಟ್ಗೆ 90 ಸಾವಿರ ರೂ. ವರ್ಗಾವಣೆ ಮಾಡಲಾಗಿದೆ. ಪೊಲೀಸರು ಸಂಪರ್ಕಿಸಿದಾಗ ನಾನು ಮೇಜರ್ ಎಂದು ರೇಷ್ಮಾ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಇಲಾಖೆ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡ ಎಸಿಬಿ
ಕಾರ್ಮಿಕ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಎಸಿಬಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಎಸಿಬಿ ನೋಟಿಸ್ ನೀಡಿತ್ತು. ಕಾರ್ಮಿಕ ನಿರೀಕ್ಷಕರು, ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ದಾಖಲೆ ಇಲ್ಲದೆ ಸಂಗ್ರಹಿಸಿದ್ದ 1.54 ಲಕ್ಷ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹಿರಿಯ ಕಾರ್ಮಿಕ ನಿರೀಕ್ಷಕರು, ಅಧಿಕಾರಿಗಳಿಗೆ ಎಸಿಬಿ ಪ್ರಶ್ನೆ ಮಾಡಿದೆ. ಬಳಿಕ, ಕಾರ್ಮಿಕ ಇಲಾಖಾಧಿಕಾರಿಗಳ ಹೇಳಿಕೆಗಳನ್ನು ಎಸಿಬಿ ದಾಖಲಿಸಿಕೊಂಡಿದೆ. ಅದಕ್ಕೆ ಪ್ರತಿಯಾಗಿ ದಂಡ, ಮತ್ತಿತರೆ ರೂಪದಲ್ಲಿ ಸಂಗ್ರಹವಾಗಿದ್ದ ಹಣವೆಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಂಗ್ರಹವಾಗಿದ್ದ ಹಣದ ಬಗ್ಗೆ ಪುಸ್ತಕದಲ್ಲಿ ದಾಖಲಿಸಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದರ ಬಗ್ಗೆ ಕಾರ್ಮಿಕ ಇಲಾಖಾಧಿಕಾರಿಗಳ ಹೇಳಿಕೆಯನ್ನೂ ಎಸಿಬಿ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಅಪರಾಧ ಸುದ್ದಿ: ಬೆಂಗಳೂರಿನ ಗ್ಯಾಂಬ್ಲಿಂಗ್ ಪಬ್ಗಳ ಮೇಲೆ ಸಿಸಿಬಿ ದಾಳಿ; 104 ಜನರ ಬಂಧನ
ಇದನ್ನೂ ಓದಿ: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಸುಪಾರಿ ನೀಡಿದ್ದ ಆರ್ಟಿಐ ರವಿ ಬಂಧನ; ಚಾಮರಾಜನಗರ ಕಾಡಿನಲ್ಲಿ ಅಡಗಿದ್ದ ರವಿ
Published On - 11:40 pm, Wed, 8 September 21