ಬಿಹಾರದಿಂದ ಪಿಸ್ತೂಲ್ ಪೂರೈಕೆ, ಅಶೋಕ ನಗರ ಸ್ಮಶಾನದ ಬಳಿ ಮಾರಾಟಕ್ಕೆ ಯತ್ನ: ನಾಲ್ವರ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Aug 11, 2021 | 1:00 PM

ವಿಚಾರಣೆ ವೇಳೆ ಮದನಪಲ್ಲಿ ಮೂಲದ ಆರೋಪಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬಳಿಕ ಮದನಪಲ್ಲಿ ಮೂಲದ ಮುರುಳಿ ಎಂಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮುರುಳಿಯಿಂದ 1 ಪಿಸ್ತೂಲ್, 5 ಸಜೀವ ಗುಂಡುಗಳನ್ನು ಜಫ್ತಿ ಮಾಡಲಾಗಿದೆ.

ಬಿಹಾರದಿಂದ ಪಿಸ್ತೂಲ್ ಪೂರೈಕೆ, ಅಶೋಕ ನಗರ ಸ್ಮಶಾನದ ಬಳಿ ಮಾರಾಟಕ್ಕೆ ಯತ್ನ: ನಾಲ್ವರ ಅರೆಸ್ಟ್
ಬಿಹಾರದಿಂದ ಪಿಸ್ತೂಲ್ ಆಮದು, ಅಶೋಕನಗರ ಸ್ಮಶಾನದ ಬಳಿ ಮಾರಾಟಕ್ಕೆ ಯತ್ನ: ನಾಲ್ವರ ಅರೆಸ್ಟ್
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಮತ್ತೆ ಹೆಚ್ಚಾಗಿದ್ದು, ರೌಡಿ ಪಟಾಲಂ ಅನ್ನು ಆಗಾಗ್ಗೆ ಬೆಂಗಳೂರು ಪೊಲೀಸರು ಹೆಡೆಮುರಿಗೆ ಕಟ್ಟುವ ಮೂಲಕ ಅಪರಾಧ ಶಾಂತಿ ಸುವ್ಯವಸ್ಥೆಯನ್ನು ತಹಬಂದಿಗೆ ತರಲು ಯತ್ನಿಸುತ್ತಲೇ ಇದ್ದಾರೆ. ಈ ಮಧ್ಯೆ ನಗರಕ್ಕೆ ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಾಗಿದೆ. ಇದನ್ನು ಮನಗಂಡು ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿ, ಶಸ್ತ್ರಾಸ್ತ್ರ ವಶ ಪಡಿಸಿಕೊಂಡಿದ್ದಾರೆ. ಮದನಪಲ್ಲಿ ಮೂಲದ ಮುರುಳಿ, ಸೋನು ಕುಮಾರ್, ಸುನಿಲ್ ಕುಮಾರ್, ಇರ್ಫಾನ್ ಬಂಧಿತರು.

ಬಿಹಾರದಿಂದ ಪಿಸ್ತೂಲ್ ಆಮದು ಮಾಡಿಕೊಂಡಿದ್ದ ಆರೋಪಿಗಳಾದ ಸೋನು ಕುಮಾರ್ ಹಾಗೂ ಸುನಿಲ್ ಕುಮಾರ್ ಪಿಸ್ತೂಲ್ ಮಾರಾಟಕ್ಕೆ ಬಂದಿದ್ದರು. ಪುಲಿಕೇಶಿ ನಗರದ ಇರ್ಫಾನ್ ಪಿಸ್ತೂಲ್ ಖರೀದಿಗೆ ಬಂದಿದ್ದ. ಅಶೋಕನಗರ ಸ್ಮಶಾನದ ಬಳಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ. ಪಿಸ್ತೂಲ್ ಸೇರಿದಂತೆ ನಾಲ್ವರನ್ನು ಆರೋಪಿಗಳನ್ನ ಬಂಧಿಸಲಾಗಿದೆ.

ವಿಚಾರಣೆ ವೇಳೆ ಮದನಪಲ್ಲಿ ಮೂಲದ ಆರೋಪಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬಳಿಕ ಮದನಪಲ್ಲಿ ಮೂಲದ ಮುರುಳಿ ಎಂಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮುರುಳಿಯಿಂದ 2 ಪಿಸ್ತೂಲ್, 5 ಸಜೀವ ಗುಂಡುಗಳನ್ನು ಜಫ್ತಿ ಮಾಡಲಾಗಿದೆ.


ವಿಚಾರಣೆ ವೇಳೆ ಮದನಪಲ್ಲಿ ಮೂಲದ ಆರೋಪಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಧನುರ್ಮಾಸದ ಚಳಿಯಲ್ಲಿ ಗನ್​ ಸೌಂಡ್​: ರೌಡಿಶೀಟರ್ಸ್​ ಮೇಲೆ ಪೊಲೀಸ್​ ಫೈರಿಂಗ್

(pistol from bihar sold at ashok nagar police station limits in bangalore 4 arrested)