ಧನುರ್ಮಾಸದ ಚಳಿಯಲ್ಲಿ ಗನ್ ಸೌಂಡ್: ರೌಡಿಶೀಟರ್ಸ್ ಮೇಲೆ ಪೊಲೀಸ್ ಫೈರಿಂಗ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮೇಲೆ ಪೊಲೀಸರು ಗುಂಡಿನ ಮೊರೆತ ನಡೆಸಿದ್ದಾರೆ. ಬಿಟಿಎಂ ಲೇಔಟ್ ಬಳಿಯ ರಾಂಕಾ ಕಾಲೋನಿ ಬಳಿ ರೌಡಿಶೀಟರ್‌ಗಳಾದ ಹಂದಿ ಮಹೇಶ್, ಸತೀಶ್ ಮೇಲೆ ಪೊಲೀಸರು ಶೂಟೌಟ್ ಮಾಡಿದ್ದಾರೆ. ಸತೀಶ್ ಮೇಲೆ 3 ಕೊಲೆ ಸೇರಿದಂತೆ 5 ಪ್ರಕರಣ, ಹಂದಿ ಮಹೇಶ್ ಮೇಲೆ 2 ಕೊಲೆ, ಹಲ್ಲೆ ಸೇರಿದಂತೆ 6 ಪ್ರಕರಣಗಳಿದ್ದವು. ಹೀಗಾಗಿ ಆರೋಪಿಗಳಿಬ್ಬರನ್ನೂ ಹಿಡಿಯಲು ಸಿಸಿಬಿ ಪೊಲೀಸರು ತೆರಳಿದ್ದರು. ಮೊದಲು ರೌಡಿಶೀಟರ್‌ಗಳಿಗೆ ಶರಣಾಗುವಂತೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಶರಣಾಗದೆ ಹನುಮೇಶ್ […]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮೇಲೆ ಪೊಲೀಸರು ಗುಂಡಿನ ಮೊರೆತ ನಡೆಸಿದ್ದಾರೆ. ಬಿಟಿಎಂ ಲೇಔಟ್ ಬಳಿಯ ರಾಂಕಾ ಕಾಲೋನಿ ಬಳಿ ರೌಡಿಶೀಟರ್‌ಗಳಾದ ಹಂದಿ ಮಹೇಶ್, ಸತೀಶ್ ಮೇಲೆ ಪೊಲೀಸರು ಶೂಟೌಟ್ ಮಾಡಿದ್ದಾರೆ.
ಸತೀಶ್ ಮೇಲೆ 3 ಕೊಲೆ ಸೇರಿದಂತೆ 5 ಪ್ರಕರಣ, ಹಂದಿ ಮಹೇಶ್ ಮೇಲೆ 2 ಕೊಲೆ, ಹಲ್ಲೆ ಸೇರಿದಂತೆ 6 ಪ್ರಕರಣಗಳಿದ್ದವು. ಹೀಗಾಗಿ ಆರೋಪಿಗಳಿಬ್ಬರನ್ನೂ ಹಿಡಿಯಲು ಸಿಸಿಬಿ ಪೊಲೀಸರು ತೆರಳಿದ್ದರು. ಮೊದಲು ರೌಡಿಶೀಟರ್‌ಗಳಿಗೆ ಶರಣಾಗುವಂತೆ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಶರಣಾಗದೆ ಹನುಮೇಶ್ ಎಂಬ ಪೇದೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್‌ಗಳ ಮೇಲೆ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಕೇಶವಮೂರ್ತಿ ಮತ್ತು ಪುನೀತ್ ಕುಮಾರ್ ಫೈರಿಂಗ್ ನಡೆಸಿದ್ದಾರೆ. ಗಾಯಾಳು ರೌಡಿಶೀಟರ್‌ಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Published On - 7:28 am, Mon, 13 January 20