ಬೆಂಗಳೂರು: ತಾಯಿ ಮತ್ತು ಮಗುವನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ನಗರದ ಬೇಗೂರು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಬಂಧಿತ ಆರೋಪಿ. ಪ್ರಶಾಂತ್ ಮೃತ ಚಂದ್ರಕಲಾಳ ಫೇಸ್‌ಬುಕ್ ಗೆಳೆಯನಾಗಿದ್ದ, ಹೀಗಾಗಿ ಚಂದ್ರಕಲಾರನ್ನು ಹುಡುಕಿಕೊಂಡು ಪ್ರಶಾಂತ್ ಬೆಂಗಳೂರಿನ ಮನೆಗೆ ಬಂದಿದ್ದ. ತನಿಖೆ ವೇಳೆ ಚಂದ್ರಕಲಾ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಹೀಗಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಪ್ರಶಾಂತ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದ ಚಂದ್ರಕಲಾ
ಚಂದ್ರಕಲಾಳನ್ನು ಹುಡುಕಿ ಮನೆಗೆ ಬಂದಿದ್ದ ಪ್ರಶಾಂತ್, ಸುಸ್ತಾಗುತ್ತಿದೆ ಎಂದು ಹೇಳಿದ್ದ. ಹೀಗಾಗಿ ರೂಮ್‌ನಲ್ಲಿ ಮಲಗುವಂತೆ ಚಂದ್ರಕಲಾ ಹೇಳಿದ್ದಾರೆ. ಈ ವೇಳೆ ಅರೆಬೆತ್ತಲಾಗಿ ರೂಮ್‌ನಲ್ಲಿ ಮಲಗಿದ್ದ ಪ್ರಶಾಂತನ ವಿಡಿಯೋ ಮಾಡಿದ್ದ ಚಂದ್ರಕಲಾ, ಅರೆಬೆತ್ತಲೆ ವಿಡಿಯೋಗಳಿಂದ ಪ್ರಶಾಂತ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಮತ್ತು ಪ್ರಶಾಂತ್ ಬಳಿ ಚಂದ್ರಕಲಾ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಈ ವೇಳೆ ಕೋಪಗೊಂಡು ಪ್ರಶಾಂತ್, ಚಂದ್ರಕಲಾಳನ್ನು ಹತ್ಯೆಗೈದಿದ್ದಾನೆ. ಇದೇ ವೇಳೆ ಚಂದ್ರಕಲಾ ಜತೆಗಿದ್ದ ಮಗುವನ್ನೂ ಹತ್ಯೆಗೈದಿದ್ದಾನೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೈಸೂರು: 2 ಗುಂಪುಗಳ ಮಧ್ಯೆ ಮಾರಾಮಾರಿಯಲ್ಲಿ ಯುವಕನ ಹತ್ಯೆ
2 ಗುಂಪುಗಳ ಮಧ್ಯೆ ಮಾರಾಮಾರಿಯಲ್ಲಿ ಯುವಕನನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ. ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಆ ಪೈಕಿ ನಂದಕಿಶೋರ್(24) ಸಾವನ್ನಪ್ಪಿದ್ದು, ಸಂಜಯ್ ಸ್ಥಿತಿ ಗಂಭೀರವಾಗಿದೆ. ಸದ್ಯ ಗಂಭೀರ ಗಾಯಗೊಂಡ ಸಂಜಯ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಕೋಲಾರ: ಮೊಬೈಲ್ ವಿಷಯಕ್ಕೆ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯ? ಆರೋಪಿ ಗೆಳೆಯರು ನಾಪತ್ತೆ
Crime: ರೇಪಿಸ್ಟ್ ಎಂದು ರೇಗಿಸಿದ ಕಾರಣಕ್ಕೆ ಕೊಲೆ; ಅಣ್ಣ, ತಮ್ಮ ಸೇರಿದಂತೆ ಮೂವರು ಆರೋಪಿಗಳ ಬಂಧನ