KTM, ಪಲ್ಸರ್​, ಬುಲೆಟ್​ಗಳೇ ಇವರ ಟಾರ್ಗೆಟ್​.. ​1.60 ಕೋಟಿ ಮೌಲ್ಯದ ಬೈಕ್​ಗಳನ್ನ ಕದ್ದವರು ಅಂದರ್​

|

Updated on: Nov 26, 2020 | 7:02 PM

ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು 139 ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ 39 ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ.

KTM, ಪಲ್ಸರ್​, ಬುಲೆಟ್​ಗಳೇ ಇವರ ಟಾರ್ಗೆಟ್​.. ​1.60 ಕೋಟಿ ಮೌಲ್ಯದ ಬೈಕ್​ಗಳನ್ನ ಕದ್ದವರು ಅಂದರ್​
ಖಾಕಿ ಪಡೆ ಜಪ್ತಿ ಮಾಡಿದ ಬೈಕ್​ಗಳು
Follow us on

ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು 139 ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ 39 ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಖದೀಮರು ಕದ್ದಿದ್ದ 1.60 ಕೋಟಿ ಮೌಲ್ಯದ 174 ಬೈಕ್​ಗಳನ್ನು ಖಾಕಿ ಪಡೆ ವಶಕ್ಕೆ ಪಡೆದಿದೆ.

ಇಂದು ಕಳುವಾಗಿದ್ದ ಬೈಕ್​ಗಳನ್ನು ಪ್ರಾಪರ್ಟಿ ಪರೇಡ್​ನಲ್ಲಿ ಪದರ್ಶಿಸಿದ ಪೊಲೀಸರು ಬೈಕ್​ಗಳನ್ನ ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು. ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ಖುದ್ದು ವಾಹನಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು.

ಅಂದ ಹಾಗೆ, ಹೆಚ್.ಎಸ್.ಆರ್ ಲೇಔಟ್​​ನಲ್ಲಿ 33, ಆಡುಗೋಡಿಯಲ್ಲಿ 13 ಕೇಸ್, ಕೋರಮಂಗಲದಲ್ಲಿ 4, ಬಂಡೇಪಾಳ್ಯದಲ್ಲಿ 34, ಬೇಗೂರಲ್ಲಿ 35 ಕೇಸ್, ಹುಳಿಮಾವುನಲ್ಲಿ 13, ಪರಪ್ಪನ ಅಗ್ರಹಾರದಲ್ಲಿ 3 ಪ್ರಕರಣಗಳು ದಾಖಲಾಗಿದ್ದವು. ಜೊತೆಗೆ, ಎಲೆಕ್ಟ್ರಾನಿಕ್ ಸಿಟಿಯ 4 ಪ್ರಕರಣಗಳನ್ನು ಸೇರಿದಂತೆ ಇವೆಲ್ಲಾ ಕೇಸ್​ಗಳನ್ನು ಪೊಲೀಸರು ಭೇದಿಸಿದ್ದಾರೆ.

Published On - 6:59 pm, Thu, 26 November 20