ಬಂಧಿಸಲು ಬಂದ ಪೊಲೀಸರನ್ನು ಥಳಿಸಿ ಪರಾರಿಯಾದ ಕಳ್ಳರು
ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಧಾರವಾಡ: ಆಂಧ್ರದಲ್ಲಿ ಕಳ್ಳತನ ಮಾಡಿ, ನಗರದಲ್ಲಿ ತಲೆಮರೆಸಿಕೊಂಡಿದ್ದ ಕಳ್ಳರನ್ನು ಹಿಡಿಯಲು ಬಂದಿದ್ದ ಆಂಧ್ರ ಪೊಲೀಸರ ಮೇಲೆಯೇ ಕಳ್ಳರು ಹಲ್ಲೆ ಮಾಡಿ, ಪರಾರಿಯಾಗಿರುವ ಘಟನೆ ಸಂಗಮ್ ವೃತ್ತದ ಬಳಿ ನಡೆದಿದೆ.
ಇರಾನಿ ಗ್ಯಾಂಗ್ನ ಕಳ್ಳರನ್ನು ಬಂಧಿಸಲು ಆಂಧ್ರ ಪೊಲೀಸರು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಮತ್ತು ಕಳ್ಳರ ನಡುವೆ ಮಾರಾಮಾರಿ ನಡೆದಿದ್ದು ಇರಾನಿ ಗ್ಯಾಂಗ್ನ ಕಳ್ಳರು ಪೊಲೀಸರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ ಇರಾನಿ ಗ್ಯಾಂಗ್, ಅಷ್ಟಕ್ಕೆ ಸುಮ್ಮನಾಗದೆ ತಮಗೆ ತಾವೇ ಬಿಯರ್ ಬಾಟಲಿಯಿಂದ ಇರಿದುಕೊಂಡಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 2:22 pm, Thu, 26 November 20