KTM, ಪಲ್ಸರ್, ಬುಲೆಟ್ಗಳೇ ಇವರ ಟಾರ್ಗೆಟ್.. 1.60 ಕೋಟಿ ಮೌಲ್ಯದ ಬೈಕ್ಗಳನ್ನ ಕದ್ದವರು ಅಂದರ್
ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು 139 ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ 39 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು 139 ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ 39 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಖದೀಮರು ಕದ್ದಿದ್ದ 1.60 ಕೋಟಿ ಮೌಲ್ಯದ 174 ಬೈಕ್ಗಳನ್ನು ಖಾಕಿ ಪಡೆ ವಶಕ್ಕೆ ಪಡೆದಿದೆ.
ಇಂದು ಕಳುವಾಗಿದ್ದ ಬೈಕ್ಗಳನ್ನು ಪ್ರಾಪರ್ಟಿ ಪರೇಡ್ನಲ್ಲಿ ಪದರ್ಶಿಸಿದ ಪೊಲೀಸರು ಬೈಕ್ಗಳನ್ನ ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖುದ್ದು ವಾಹನಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಿದರು.
ಅಂದ ಹಾಗೆ, ಹೆಚ್.ಎಸ್.ಆರ್ ಲೇಔಟ್ನಲ್ಲಿ 33, ಆಡುಗೋಡಿಯಲ್ಲಿ 13 ಕೇಸ್, ಕೋರಮಂಗಲದಲ್ಲಿ 4, ಬಂಡೇಪಾಳ್ಯದಲ್ಲಿ 34, ಬೇಗೂರಲ್ಲಿ 35 ಕೇಸ್, ಹುಳಿಮಾವುನಲ್ಲಿ 13, ಪರಪ್ಪನ ಅಗ್ರಹಾರದಲ್ಲಿ 3 ಪ್ರಕರಣಗಳು ದಾಖಲಾಗಿದ್ದವು. ಜೊತೆಗೆ, ಎಲೆಕ್ಟ್ರಾನಿಕ್ ಸಿಟಿಯ 4 ಪ್ರಕರಣಗಳನ್ನು ಸೇರಿದಂತೆ ಇವೆಲ್ಲಾ ಕೇಸ್ಗಳನ್ನು ಪೊಲೀಸರು ಭೇದಿಸಿದ್ದಾರೆ.
Published On - 6:59 pm, Thu, 26 November 20