ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ಗನ್ ಸೌಂಡ್​​, ಕಿಡ್ನಾಪರ್ ಕಾಲಿಗೆ ಗುಂಡು

|

Updated on: Dec 01, 2019 | 8:44 AM

ಬೆಂಗಳೂರು: ಬಾಲಕನನ್ನು ಅಪಹರಿಸಿ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಸಮೀಪ ನಡೆದಿದೆ. ನಿನ್ನೆ 13 ವರ್ಷದ ಬಾಲಕನನ್ನು ಆರೋಪಿ ಮುಬಾರಕ್ ಸೇರಿದಂತೆ ಮೂವರು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಅಪಹರಣಾಕಾರರನ್ನು ಬಂಧಿಸಿ ಬಾಲಕನ ರಕ್ಷಣೆ ಮಾಡಲು ಪೊಲೀಸರು ತೆರಳಿದ್ದರು. ಆರೋಪಿ ಕಾಲಿಗೆ ಗುಂಡು ಹಾರಿಸಿದ ಇನ್ಸ್​ಪೆಕ್ಟರ್​ ಅಜಯ್ ಸಾರಥಿ: ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಸಮೀಪ […]

ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ಗನ್ ಸೌಂಡ್​​, ಕಿಡ್ನಾಪರ್ ಕಾಲಿಗೆ ಗುಂಡು
Follow us on

ಬೆಂಗಳೂರು: ಬಾಲಕನನ್ನು ಅಪಹರಿಸಿ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಸಮೀಪ ನಡೆದಿದೆ.

ನಿನ್ನೆ 13 ವರ್ಷದ ಬಾಲಕನನ್ನು ಆರೋಪಿ ಮುಬಾರಕ್ ಸೇರಿದಂತೆ ಮೂವರು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಅಪಹರಣಾಕಾರರನ್ನು ಬಂಧಿಸಿ ಬಾಲಕನ ರಕ್ಷಣೆ ಮಾಡಲು ಪೊಲೀಸರು ತೆರಳಿದ್ದರು.

ಆರೋಪಿ ಕಾಲಿಗೆ ಗುಂಡು ಹಾರಿಸಿದ ಇನ್ಸ್​ಪೆಕ್ಟರ್​ ಅಜಯ್ ಸಾರಥಿ:
ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಸಮೀಪ ಆರೋಪಿ ಮುಬಾರಕ್ ಮತ್ತು ಟೀಂನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾನಸವಾಡಿ ಪೊಲೀಸ್ ಪೇದೆ ನಾಯಕ್ ಎಂಬುವರಿಗೆ ಚಾಕು ಇರಿದಿದ್ದಾರೆ. ಈ ವೇಳೆ ಶರಣಾಗಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರ ಮಾತು ಲೆಕ್ಕಿಸದೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಆಗ ಇನ್ಸ್​ಪೆಕ್ಟರ್​ ಅಜಯ್ ಸಾರಥಿ ಆರೋಪಿ ಮುಬಾರಕ್ ಕಾಲಿಗೆ ಗುಂಡು ಹಾರಿಸಿ ಬಾಲಕನ್ನು ರಕ್ಷಣೆ ಮಾಡಿದ್ದಾರೆ.

ಸಂಬಂಧಿಕನೇ ಕಿಡ್ನಾಪ್​ಗೆ ಸುಪಾರಿ ಕೊಟ್ಟಿದ್ದ: 
ಹೋಟೆಲ್ ಕಡಾಯಿ ಮಾಲೀಕನ 15 ವರ್ಷದ ಮಗನನ್ನು ಮುಬಾರಕ್ ತಂಡ ಅಪಹರಿಸಿತ್ತು. ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕ ಸುಪಾರಿ ಕೊಟ್ಟಿದ್ದ. ಆರೋಪಿಗಳು ಬಾಲಕನನ್ನು ಅಪಹರಿಸಿ ಆಟೋದಲ್ಲಿ ಸುತ್ತಾಡುತ್ತಿದ್ರು. ಬಾನಸವಾಡಿ ಎಸಿಪಿ ರವಿ ಪ್ರಸಾದ್, ಇನ್ಸ್​ಪೆಕ್ಟರ್ ಜಯರಾಜ್ ಮತ್ತು ಕೆ.ಜಿ.ಹಳ್ಳಿ ಠಾಣೆ ಇನ್ಸ್​ಪೆಕ್ಟರ್ ಅಜಯ್ ಸಾರತಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.

Published On - 8:05 am, Sun, 1 December 19