ರಾಗಿ ಹೊಲದಲ್ಲಿ ಕುಡುಗೋಲಿನಿಂದ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೆ. ಸತ್ಯವಾರ ಗ್ರಾಮದಲ್ಲಿ ಸೊಂಪಾಗಿ ಬೆಳೆದು ನಿಂತಿರುವ ರಾಗಿ ಹೊಲದಲ್ಲಿ ನೆತ್ತರು ಹರಿದಿದೆ. ನಿನ್ನೆ ಗ್ರಾಮದ ನಾರಾಯಣಮ್ಮ ಎಂಬುವರು ಗ್ರಾಮದ ಮಹಿಳೆಯರ ಜೊತೆ ರಾಗಿ ಹೊಲದಲ್ಲಿ ತೆನೆ ಕೊಯ್ಯಲು ಹೋಗಿದ್ರು. ಆದ್ರೆ ಸಂಜೆ ಗ್ರಾಮದ ಮಹಿಳೆಯರೆಲ್ಲ ಮನೆಗೆ ವಾಪಸಾಗಿದ್ದರೂ ಆಕೆ ಮಾತ್ರ ಬಂದಿರಲಿಲ್ಲ. ಹೀಗಾಗಿ ಎಲ್ಲೋ ಹೊಗಿರ್ತಾಳೆ ಬರ್ತಾಳೆ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಕತ್ತಲಾದ್ರು ಆಕೆ ಬಾರದಿದ್ದಾಗ ಊರೆಲ್ಲ ಹುಡುಕಾಡಿ ಕೊನೆಗೆ ಹೊಲದ ಕಡೆ ಹೋಗಿದ್ದಾರೆ. ಈ ವೇಳೆ ರಾಗಿ ಹೊಲದಲ್ಲಿ […]
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೆ. ಸತ್ಯವಾರ ಗ್ರಾಮದಲ್ಲಿ ಸೊಂಪಾಗಿ ಬೆಳೆದು ನಿಂತಿರುವ ರಾಗಿ ಹೊಲದಲ್ಲಿ ನೆತ್ತರು ಹರಿದಿದೆ. ನಿನ್ನೆ ಗ್ರಾಮದ ನಾರಾಯಣಮ್ಮ ಎಂಬುವರು ಗ್ರಾಮದ ಮಹಿಳೆಯರ ಜೊತೆ ರಾಗಿ ಹೊಲದಲ್ಲಿ ತೆನೆ ಕೊಯ್ಯಲು ಹೋಗಿದ್ರು.
ಆದ್ರೆ ಸಂಜೆ ಗ್ರಾಮದ ಮಹಿಳೆಯರೆಲ್ಲ ಮನೆಗೆ ವಾಪಸಾಗಿದ್ದರೂ ಆಕೆ ಮಾತ್ರ ಬಂದಿರಲಿಲ್ಲ. ಹೀಗಾಗಿ ಎಲ್ಲೋ ಹೊಗಿರ್ತಾಳೆ ಬರ್ತಾಳೆ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಕತ್ತಲಾದ್ರು ಆಕೆ ಬಾರದಿದ್ದಾಗ ಊರೆಲ್ಲ ಹುಡುಕಾಡಿ ಕೊನೆಗೆ ಹೊಲದ ಕಡೆ ಹೋಗಿದ್ದಾರೆ. ಈ ವೇಳೆ ರಾಗಿ ಹೊಲದಲ್ಲಿ ರಾಗಿ ತೆನೆ ಕೊಯ್ಯಲು ತಂದಿದ್ದ ಕೊಡುಗೋಲಿನಿಂದಲೆೇ ಕತ್ತು ಕೊಯ್ದಿರೂ ಸ್ಥಿತಿಯಲ್ಲಿ ನಾರಾಯಣಮ್ಮನ ಮೃತದೇಹ ಪತ್ತೆಯಾಗಿದೆ.
ಮನೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ, ಎಲ್ಲರೊಂದಿಗೆ ಚೆನ್ನಾಗಿದ್ದ ನಾರಾಯಣಮ್ಮ ಎಂದಿನಂತೆ ಹೊಲದಲ್ಲಿ ರಾಗಿ ತೆನೆ ಕೊಯ್ಯಲು ಹೋಗಿದ್ಲಂತೆ. ಆದ್ರೆ ಮುಸ್ಸಂಜೆ ವೇಳೆ ಇದ್ದಕ್ಕಿದ್ದ ಹಾಗೇ ಮಹಿಳೆ ಅನುಮಾನಸ್ಪಾದ ರೀತಿಯಲ್ಲಿ ಬರ್ಬರವಾಗಿ ಸಾವಿಗೀಡಾಗಿರೋದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸದ್ಯ ಈ ಬಗ್ಗೆ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ತನಿಖೆಯ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಬೆಳಕಿಗೆ ಬರಬೇಕಿದೆ. ಆದ್ರೆ ಈ ಸಾವು ಗ್ರಾಮಸ್ಥರನ್ನ ಬೆಚ್ಚಿ ಬೀಳಿಸಿರುವುದಂತೂ ಸುಳ್ಳಲ್ಲ.
Published On - 4:29 pm, Sat, 30 November 19