ಪತಿ ಹತ್ಯೆಗೆ ಸ್ಕೆಚ್ ಹಾಕಿ ಜೈಲುಪಾಲಾದ್ಲು, ಅದಕ್ಕೂ ಮುಂಚೆ SI ಜೊತೆ ಡಿಂಗ್​ಡಾಂಗ್!

ದಾವಣಗೆರೆ: ಅವಳು ಅಂದದ ಗೊಂಬೆ. ಚೆಂದದ ಬೆಡಗಿ. ಹುಡುಗರ ಹಾರ್ಟ್​ನಲ್ಲಿ ಚಿಟ್ಟೆ ಬಿಡ್ತಿದ್ದ ಹುಡುಗಿ. ಇಂತಹವಳ ಕೈಹಿಡಿದ ಅವನು ಖುಷ್​ಖುಷಿಯಾಗಿದ್ದ. ಎಂಟು ತಿಂಗಳು ಸಂಸಾರವೂ ಸಾಗಿತ್ತು. ಆದ್ರೆ, ಆತನಿಗೆ ಸುಂದರಿಯ ಮಸಲತ್ತೇ ಗೊತ್ತಿರಲಿಲ್ಲ. ಇದಾದ ಬಳಿಕ ಆಗಿದ್ದು ಎಲ್ಲವೂ ಸಿನಿಮಾ ಸ್ಟೈಲ್..! ಚೆಂದುಳ್ಳಿ ಚೆಲುವೆ. ಕಣ್ ನೋಟದಲ್ಲೇ ಸೆಳೆಯೋ ಅಂದಗಾತಿ. ಇವಳ ಸೌಂದರ್ಯಕ್ಕೆ ಅದೆಷ್ಟು ಜನ ಕ್ಲೀನ್​ಬೋಲ್ಡ್ ಆಗಿದ್ದಾರೋ ಗೊತ್ತಿಲ್ಲ. ಆದ್ರೆ, ಈ ಸುಂದರಿಯ ಫೋಟೋ ನೋಡಿಯೇ ಈತ ಕಳೆದುದೋಗಿದ್ದ. ತಾನೇ ಖರ್ಚು ಮಾಡಿ ಅಪ್ಸರೆಯನ್ನ ಮದುವೆಯೂ […]

ಪತಿ ಹತ್ಯೆಗೆ ಸ್ಕೆಚ್ ಹಾಕಿ ಜೈಲುಪಾಲಾದ್ಲು, ಅದಕ್ಕೂ ಮುಂಚೆ SI ಜೊತೆ ಡಿಂಗ್​ಡಾಂಗ್!
sadhu srinath

|

Nov 30, 2019 | 2:55 PM

ದಾವಣಗೆರೆ: ಅವಳು ಅಂದದ ಗೊಂಬೆ. ಚೆಂದದ ಬೆಡಗಿ. ಹುಡುಗರ ಹಾರ್ಟ್​ನಲ್ಲಿ ಚಿಟ್ಟೆ ಬಿಡ್ತಿದ್ದ ಹುಡುಗಿ. ಇಂತಹವಳ ಕೈಹಿಡಿದ ಅವನು ಖುಷ್​ಖುಷಿಯಾಗಿದ್ದ. ಎಂಟು ತಿಂಗಳು ಸಂಸಾರವೂ ಸಾಗಿತ್ತು. ಆದ್ರೆ, ಆತನಿಗೆ ಸುಂದರಿಯ ಮಸಲತ್ತೇ ಗೊತ್ತಿರಲಿಲ್ಲ. ಇದಾದ ಬಳಿಕ ಆಗಿದ್ದು ಎಲ್ಲವೂ ಸಿನಿಮಾ ಸ್ಟೈಲ್..!

ಚೆಂದುಳ್ಳಿ ಚೆಲುವೆ. ಕಣ್ ನೋಟದಲ್ಲೇ ಸೆಳೆಯೋ ಅಂದಗಾತಿ. ಇವಳ ಸೌಂದರ್ಯಕ್ಕೆ ಅದೆಷ್ಟು ಜನ ಕ್ಲೀನ್​ಬೋಲ್ಡ್ ಆಗಿದ್ದಾರೋ ಗೊತ್ತಿಲ್ಲ. ಆದ್ರೆ, ಈ ಸುಂದರಿಯ ಫೋಟೋ ನೋಡಿಯೇ ಈತ ಕಳೆದುದೋಗಿದ್ದ. ತಾನೇ ಖರ್ಚು ಮಾಡಿ ಅಪ್ಸರೆಯನ್ನ ಮದುವೆಯೂ ಆಗಿದ್ದ. ಇದೀಗ ಖುಷಿಖುಷಿಯಾಗಿ ಓಡಾಡ್ಕೊಂಡಿರಬೇಕಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಬೆಡ್ ಮೇಲಿದ್ದಾರೆ. ಕ್ಷಣ ಮಾತ್ರದಲ್ಲೇ ಜೀವ ಉಳಿಸಿಕೊಂಡು ಪರದಾಡ್ತಿದ್ದಾರೆ. ಅಸಲಿಗೆ ಇದು ಮೇಲ್ನೋಟಕ್ಕೆ ಗಂಡ, ಹೆಂಡ್ತಿಯ ಜಗಳ. ಆದ್ರೆ, ಈ ಸ್ಟೋರಿಯಲ್ಲಿ ಡವ್ ರಾಣಿಯ ಮಸಲತ್ತು.. ಒಂದು ಕಿಡ್ನ್ಯಾಪ್ ಕಥೆ ಇದೆ.

ನಗು ನಗುತ್ತಲೇ ಗಂಡನಿಗೆ ಸ್ಕೆಚ್ ಹಾಕಿದ್ಲು: ದಾವಣಗೆರೆ ಜಿಲ್ಲೆ ಲೋಕಿಕೆರೆ ಗ್ರಾಮದ ನಿವಾಸಿ ಶ್ರೀನಿವಾಸ್. ದುಡ್ಡಿಗೆ ಕೊರತೆ ಇರಲಿಲ್ಲ. ಒಂದು ಪೆಟ್ರೋಲ್ ಬಂಕ್ ಇತ್ತು. ಜೀವನ ಖುಷಿಯಾಗಿ ಸಾಗ್ತಿತ್ತು. ಈ ನಡುವೆ ಶ್ರೀನಿವಾಸ್ 2015ರಲ್ಲಿ ಮದುವೆ ಆಗಲು ಹುಡುಗಿಯನ್ನ ಹುಡುಕ್ತಿದ್ದ.

ಈ ವೇಳೆ ಬ್ರೋಕರ್ ಮೂಲಕ ಈ ಶಿವಮೊಗ್ಗದ ಸಂಗೀತಾಳ ಫೋಟೋ ಸಿಗುತ್ತೆ. ಇವಳ ಅಂದ ನೋಡಿದ ಶ್ರೀನಿವಾಸ್, ಇವಳೇ ಬೇಕು ಅಂತಾ ಫಿಕ್ಸ್ ಆಗಿ ಮದುವೆಯೂ ಆಗ್ತಾನೆ. ಆದ್ರೆ, ಮದ್ವೆಯಾದ ಎಂಟು ತಿಂಗಳಲ್ಲಿಯೇ ರಗಳೆ ಶುರುವಾಗಿತ್ತು. ದಿನ ಕಳೆದಂತೆ ಈ ಪಾಪಿಷ್ಟೇ ಸಂಗೀತಾ, ಗಂಡನನ್ನೇ ಮುಗಿಸಲು ಹೊಂಚು ಹಾಕಿದ್ಲು.

ಎಸ್​ಐ ರಾಜೇಂದ್ರನನ್ನೂ ಬುಟ್ಟಿಗೆ ಹಾಕ್ಕೊಂಡಿದ್ಲು?: ಈ ಸಂಗೀತಾ ಸಾಮಾನ್ಯದ ಹೆಣ್ಣಲ್ಲ. ಹೆಮ್ಮಾರಿ, ಊಸರವಳ್ಳಿ. ಶ್ರೀನಿವಾಸ್​ನನ್ನ ಮದುವೆ ಆಗಿದ್ದವಳು ಆಡ್ಬಾರ್ದ್ ಆಟ ಆಡ್ತಿದ್ಲು. ಅಂದ್ರೆ, ಇವಳು ಮದುವೆಗೂ ಮುಂಚೆ ಒಬ್ಬನ ಜೊತೆ ಹೇಗ್ ಬೇಕೋ ಹಾಗೆ ಸುತ್ತಾಡಿದ್ಲು.

ಹೋಗ್ಲಿ ಮದುವೆ ನಂತರವೂ ಕರೆಕ್ಟ್ ಆಗಿದ್ದಾಳೆ ಅಂದ್ರೆ ಅದು ಇಲ್ಲ. ಅತ್ತೆ, ಮಾವನ ಮೇಲೆ ಹದಡಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕಳ ಕೇಸ್ ಹಾಕಿದ್ಲು. ಇದೇ ವೇಳೆ ಹದಡಿ ಠಾಣೆಯ ಎಸ್​ಐ ರಾಜೇಂದ್ರ ನಾಯ್ಕನನ್ನೂ ಬುಟ್ಟಿಗೆ ಹಾಕಿಕೊಂಡಿದ್ಲು, ಪುಣ್ಯಾತ್ಗಿತ್ತಿ.

ಪತಿ ಆಸ್ತಿ ಮೇಲೆ ಕಣ್ಣಾಕಿದ್ಲು: ಹೀಗೆ ಆಟ ಆಡ್ತಿದ್ದ ಮಳ್ಳಿ ವಿಚ್ಛೇಧನಕ್ಕೆ ಕೋರ್ಟ್ ಮೊರೆ ಹೋಗಿದ್ಲು. ಇಷ್ಟೇ ಅಲ್ಲ, ಗಂಡನ ಆಸ್ತಿ ಮೇಲೆ ಕಣ್ ಹಾಕಿದ ಸಂಗೀತಾ ಆತನ ಕಥೆ ಮುಗಿಸಲು ಪ್ಲಾನ್ ಮಾಡಿದ್ಲು. ಅವನು ಸತ್ತರೇ ಆಸ್ತಿ ತನ್ನ ಪಾಲಾಗುತ್ತೆ ಅಂತಾ ಕಿಲ್ಲರ್ಸ್​ಗೆ ಹಣ ಕೊಟ್ಟು, ಕಿಡ್ನ್ಯಾಪ್ ಮಾಡಿಸಿದ್ಲು. ಆದ್ರೆ, ಕ್ಲೈಮ್ಯಾಕ್ಸ್​ನಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ರಿಂದ ಶ್ರೀನಿವಾಸ್ ಬಚಾವ್ ಆಗಿದ್ದಾನೆ.

ಇಂಟ್ರೆಸ್ಟಿಂಗ್ ಅಂದ್ರೆ, ಈ ಸುಂದರಿ ಎಸ್​ಐ ರಾಜೇಂದ್ರನನ್ನೂ ಮದುವೆ ಆಗಿದ್ದಾಳಂತೆ. ಮದುವೆ ಫೋಟೋಗಳು ವೈರಲ್ ಆಗಿದೆ. ಅದೇನೆ ಇರಲಿ, ಗಂಡನಿಗೆ ಮುಹೂರ್ತ ಇಟ್ಟಿದ್ದ ಸಂಗೀತಾ ಮತ್ತು ಇಬ್ಬರು ಕಿಡ್ನ್ಯಾಪರ್ಸ್ ಖಾಕಿ ಕೈಗೆ ತಗ್ಲಾಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada