ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಖಾಕಿ ಗನ್: ಚಾಕು ತೋರಿಸಿ ಸುಲಿಗೆ ಮಾಡಿದವನ ಕಾಲು ಪಂಚರ್​!

ದರೋಡೆ ಕೇಸ್​​ನ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್​ ನಡೆದಿರುವ ಘಟನೆ ನಗರದ ಬೆಳ್ಳಳ್ಳಿ ಕ್ರಾಸ್ ಬಳಿ ವರದಿಯಾಗಿದೆ. ಇಮ್ರಾನ್​ ಅಲಿಯಾಸ್ ಲಾರಿ ಮುಲಾಮನ ಮೇಲೆ ಖಾಕಿ ಪಡೆ ಫೈರಿಂಗ್​ ಮಾಡಿದೆ.

ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಖಾಕಿ ಗನ್: ಚಾಕು ತೋರಿಸಿ ಸುಲಿಗೆ ಮಾಡಿದವನ ಕಾಲು ಪಂಚರ್​!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಇಮ್ರಾನ್​ (ಒಳಚಿತ್ರ)
Follow us
KUSHAL V
|

Updated on: Jan 03, 2021 | 4:16 PM

ಬೆಂಗಳೂರು: ದರೋಡೆ ಕೇಸ್​​ನ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್​ ನಡೆದಿರುವ ಘಟನೆ ನಗರದ ಬೆಳ್ಳಳ್ಳಿ ಕ್ರಾಸ್ ಬಳಿ ವರದಿಯಾಗಿದೆ. ಇಮ್ರಾನ್​ ಅಲಿಯಾಸ್ ಲಾರಿ ಮುಲಾಮನ ಮೇಲೆ ಖಾಕಿ ಪಡೆ ಫೈರಿಂಗ್​ ಮಾಡಿದೆ.

ಅಂದ ಹಾಗೆ, ಲಾರಿ ಮುಲಾಮ ಇಂದು ಮಧ್ಯಾಹ್ನ ಗೋಪಿಚಂದ್​ ಎಂಬಾತನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದನಂತೆ. ಹಾಗಾಗಿ, ಘಟನೆ ಬಗ್ಗೆ ಗೋಪಿಚಂದ್ ಪೊಲೀಸರಿಗೆ ದೂರು ನೀಡಿದ್ದನು.

ಗೋಪಿಚಂದ್​ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ವೇಳೆ, ಪೊಲೀಸರ ಮೇಲೆ ಲಾರಿ ಮುಲಾಮ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಸಂಪಿಗೆಹಳ್ಳಿ ಠಾಣೆ ಸಬ್​ ಇನ್​ಸ್ಪೆಕ್ಟರ್​ ಮಧುಸೂದನ್​ ಆರೋಪಿ ಮೇಲೆ ಫೈರಿಂಗ್​ ಮಾಡಿದ್ದಾರೆ.

ಸದ್ಯ, ಫೈರಿಂಗ್​ನಲ್ಲಿ ಲಾರಿ ಮುಲಾಮನ ಕಾಲಿಗೆ ಗುಂಡು ತಗುಲಿದೆ ಎಂದು ಹೇಳಲಾಗಿದೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆ ಮೇಲೆ ಉರುಳಿ ಬಿದ್ದ ಮದುವೆ ದಿಬ್ಬಣದ ಬಸ್; ಐವರ ಸಾವು.. ಹಲವರ ಸ್ಥಿತಿ ಗಂಭೀರ