ಬೆಂಗಳೂರು: ಇನ್ನೂ ಚಿಗುರು ಮೀಸೆ ಯುವಕ ಮನೆಯಲ್ಲಿ ಅಪ್ಪ ಅಮ್ಮ ಚಿಕ್ಕವರಿದ್ದಾಗಲೇ ತೀರಿಕೊಂಡಿದ್ರು. ಇನ್ನು ಮೂವರು ಅಕ್ಕಂದಿರು ಇದ್ದರು. ತಾನು ಬಸ್ ಕ್ಲೀನರ್ ಕೆಲಸ ಮಾಡಿಕೊಂಡು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗ್ತಿದ್ದ. ಹೀಗಿರುವಾಗ, ಮನೆಗೆ ಬಂದಾತ ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾನೆ.
19 ವರ್ಷದ ದೀಪಕ್ ಅಂತ ಮೂಲತಃ ಮೈಸೂರಿನವನಾಗಿದ್ದು, ಈತನಿಗೆ ಮೂವರು ಅಕ್ಕಂದಿರು ಇದ್ದಾರೆ. ಚಿಕ್ಕವನಿದ್ದಾಗಲೇ ತಂದೆ – ತಾಯಿ ಅಕಾಲಿಕ ನಿಧನರಾಗಿದ್ದಾರೆ. ಇನ್ನು ಅಕ್ಕಂದಿರ ಮದುವೆಯಾಗಿದ್ದು, ಹಿರಿಯ ಅಕ್ಕ ಬೆಂಗಳೂರು ಉತ್ತರ ತಾಲೂಕಿನ ಹ್ಯಾರೋಕ್ಯಾತನಹಳ್ಳಿಯಲ್ಲಿ ವಾಸವಿದ್ದು, ಅವರ ಹತ್ತಿರವೇ ಇದ್ದ ದೀಪಕ್ ಖಾಸಗಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ, ತಿಂಗಳಿಗೊಮ್ಮೆ ಮನೆಗೆ ಬಂದು ಹೋಗಿ ಮಾಡ್ತಿದ್ದ ಈತ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.
ಪತ್ನಿ ಕತ್ತು ಸೀಳಿದ್ದು ಅದೊಂದು ವಿಷಯಕ್ಕೆ: ಪೊಲೀಸರೆದುರು ಅಸಲಿ ಸತ್ಯ ಬಾಯ್ಬಿಟ್ಟ ಪತಿ
ಕೆಲಸ ಮಾಡಬೇಕಾದರೆ ಒಂದು ಹುಡುಗಿನ ಲವ್ ಮಾಡೋಕೆ ಶುರು ಮಾಡಿದ್ನಂತೆ. ಅದೇನಾಯ್ತೋ ಗೊತ್ತಿಲ್ಲ. ಹುಡುಗಿ ಲವ್ ತಿರಸ್ಕಾರ ಮಾಡಿದ್ಳೋ ಅಥವಾ ಲವ್ ಬ್ರೇಕ್ ಅಪ್ ಆಯ್ತೋ ಗೊತ್ತಿಲ್ಲ. ಯಾರಿಗೂ ಹೇಳದೇ ಕೇಳದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮನನ್ನು ಕಳೆದುಕೊಂಡ ಅಕ್ಕಂದಿರ ಆಕ್ರಂಧನ ಮುಗಿಲು ಮುಟ್ಟಿದ್ದು, ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.
ಇನ್ನೂ ಘಟನೆ ಕುರಿತಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಮೀಸೆ ಚಿಗುರುವ ವಯಸ್ಸಿನಲ್ಲಿ ಬದುಕಿ ಬಾಳಿ ಮನೆಗೆ ಬೆಳಕಾಗಬೇಕಾಗಿದ್ದ ಹುಡುಗ ಹೀಗೆ ಲವ್ ಮಾಡಿ ಮನನೊಂದು ನೇಣಿಗೆ ಶರಣಾಗಿರುವುದು ನಿಜಕ್ಕೂ ದುರಾದೃಷ್ಟಕರ.